Saturday, July 25, 2026
Homeರಾಜ್ಯಬಾಗಲಕೋಟೆ : ಅಂಬಾ ಅನ್ನುತ್ತಿದ್ದ ತನ್ನ ಕಂದನಿಗಾಗಿ ಬೊಲೆರೋ ವಾಹನ ಬೆನ್ನಟ್ಟಿದ ತಾಯಿ ಹಸು.

ಬಾಗಲಕೋಟೆ : ಅಂಬಾ ಅನ್ನುತ್ತಿದ್ದ ತನ್ನ ಕಂದನಿಗಾಗಿ ಬೊಲೆರೋ ವಾಹನ ಬೆನ್ನಟ್ಟಿದ ತಾಯಿ ಹಸು.

ಬಾಗಲಕೋಟೆ : ಪ್ರಾಣಿಗಳಿಗೂ ತನ್ನ ಕರುಳಿನ ಕುಡಿಯ ಮೇಲಿನ ಪ್ರೀತಿ ಇದೆ ಎಂದು ಈ ಘಟನೆಯಲ್ಲಿ ತಿಳಿದಿದೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗಿದ್ದು ಈ ದೃಶ್ಯ ಮನ ಕುಲುಕುವಂತಿದೆ.ಮುಚಖಂಡಿ ಗ್ರಾಮದ ರಾಜು ಕಾಳೆ ಎಂಬುವವರ ಹಸು ಕರುವಿಗೆ ಜನ್ಮ ನೀಡಿದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿತ್ತು. ಹೀಗಾಗಿ ಗ್ರಾಮದ ಒಂದಷ್ಟು ಯುವಕರು ಸೇರಿ ಕರುವಿನ ಜೊತೆಗೆ ಹಸುವನ್ನು ಬಾಗಲಕೋಟೆ ನಗರದ ನವನಗರದಲ್ಲಿರುವ ಪಶು ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯಿಂದ ವಾಪಸ್ ಬರುವ ವೇಳೆ ಯುವಕರು ಕರುವನ್ನು ಬೊಲೆರೋ ವಾಹನದಲ್ಲಿ ವಾಪಸ್​​ ಕರೆತರುತ್ತಿದ್ದರು.

ಅಂಬಾ ಅನ್ನುತ್ತಿದ್ದ ತನ್ನ ಕಂದನಿಗಾಗಿ ತಾಯಿ ಹಸು ಬೊಲೆರೋ ವಾಹನ ಬೆನ್ನಟ್ಟಿದ್ದು ಕಂಡವರ ಕರುಳು ಹಿಂಡಿದೆ.ಹುಟ್ಟಿದ ಕರುವನ್ನು ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗುವ ವೇಳೆ ತನ್ನ ಕರುವಿಗಾಗಿ ಬೊಲೆರೋ ವಾಹನವನ್ನು ತಾಯಿ ಹಸು ಬೆನ್ನಟ್ಟಿದೆ/ ಅಡ್ಡಗಟ್ಟಿದೆ. ತಾಯಿ ಹಸು ಹೀಗೆ… ಸುಮಾರು 5 ಕಿಲೋ ಮೀಟರ್ ವರೆಗೆ ವಾಹನ ಹಿಂಬಾಲಿಸಿದೆ. ವಾಹನ ನಿಲ್ಲಿಸುವಂತೆ ಚಾಲಕನತ್ತ ಮುಖ ಮಾಡಿ ರೋದಿಸಿದ್ದಂತೂ ನೋಡುಗರಿಗೆ ಹೃದಯ ವಿದ್ರಾಹಕವಾಗಿದೆ ,ಆ ಕರುಳಿನ ಕೂಗು ಕಂಡು-ಕೇಳಿದವರ ಕರುಳು ಹಿಂಡುವಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular