ಬಸವಕಲ್ಯಾಣ: ತನ್ನ ಅಪ್ರಾಪ್ತ ವಯಸ್ಸಿನ ತನ್ನ ಹೆತ್ತ ಮಗಳ ಮೇಲೆಯೇ ಪಾಪಿ ತಂದೆಯೊಬ್ಬ ನಿರಂತರವಾಗಿ ಅತ್ಯಾಚಾರ ನಡೆಸಿದ ಹೇಯ ಘಟನೆ ಇಲ್ಲಿಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮಗಳ ಅತ್ಯಾಚಾರ ನಡೆಸಿದ ಕಾಮುಕ ತಂದೆ ವಿಠ್ಠಲ ಮೇತ್ರೆ (35) ಎಂದು ತಿಳಿದು ಬಂದಿದೆ.
ಕಳೆದ 3 ವರ್ಷದಿಂದ ತನ್ನ 12 ವರ್ಷದ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಈ ಪಾಪಿ ತಂದೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದು, ಈ ಬಗ್ಗೆ ಯಾರಿಗಾರು ಹೇಳಿದಲ್ಲಿ ಜೀವ ಸಹಿತ ಬಿಡುವುದಿಲ್ಲ ಅಂತ ಆಕೆಗೆ ಬೆದರಿಕೆ ಹಾಕಿದ್ದ.
ಸಂಜೆ ಸಮಯದಲ್ಲಿ ಕಳೆದ ಜು 29 ರಂದು ಮನೆಯಲ್ಲಿ ಯಾರು ಇಲ್ಲದಿದ್ದಾಗ ಸಮಯ ಸಾಧಿಸಿದ ಈ ಕಾಮುಕ ತಂದೆ, ಮಗಳ ಮೇಲೆ ಮತ್ತೆ ಅತ್ಯಾಚಾರ ನಡೆಸಲು ಸಿದ್ಧತೆ ನಡೆಸಿದ್ದ. ಇದೇ ವೇಳೆ ಬಾಲಕಿ ಅಜ್ಜಿ ಮನೆಗೆ ಬಂದಾಗ ಘಟನೆ ಬೆಳಕೆಗೆ ಬಂದಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಮೇಲ್ವಿಚಾರಕಿ ಡಾ: ಭಾಗ್ಯಮ್ಮ ಎನ್. ಅವರು ಬಾಲಕಿಗೆ ವಿಚಾರಣೆ ನಡೆಸಿ ಆಪ್ತ ಸಮಾಲೋಚನೆ ನಡೆಸಿದ ನಂತರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರ ತಂಡ ಆರೋಪಿ ತಂದೆಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.


