ಬಳ್ಳಾರಿ : ಬಳ್ಳಾರಿ ರಾಜಶೇಖರ್ಗೆ ತಗುಲಿದ್ದ ಬುಲೆಟ್ ಸತೀಶರೆಡ್ಡಿ ಗನ್ ಮ್ಯಾನ್ ನಿಂದಲೇ ಫೈಯರಿಂಗ್ ಆಗಿದ್ದು ದೃಢವಾಗಿದೆ ಎಂಬ ಮಾಹಿತಿ ದೊರೆತಿದೆ. ಮೃತ ರಾಜಶೇಖರ ದೇಹದಲ್ಲಿ ಪತ್ತೆಯಾದ ಗುಂಡು ಸತೀಶರೆಡ್ಡಿ ಖಾಸಗಿ ಗನ್ ಮ್ಯಾನ್ ಬಳಿ ಪತ್ತೆಯಾದ ಪಿಸ್ತೂಲ್ ನಲ್ಲಿ ಗೋಲಿಗೆ ಹೋಲಿಕೆಯಾಗಿದೆನಿಯೆಂದು ಎಪ್ಎಸ್ ಎಲ್ ವರದಿಯಿಂದ ದೃಢವಾಗಿದೆ.
ಬುಲೆಟ್ ಹಾರಿಸಿದ ಇಬ್ಬರು ಗನ್ ಮ್ಯಾನ್ ಗಳನ್ನೂ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ಖಚಿತ ಮಾಹಿತಿ ದೊರೆತಿದೆ. ಗನ್ ಮ್ಯಾನ್ ಗಳ ಜತೆಗೆ ಬ್ಯಾನರ್ ಗಲಾಟೆಗೆ ಕಾರಣರಾದ ಎರಡು ಕಡೆಯ ತಲಾ 20 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


