Friday, March 13, 2026
Flats for sale
Homeರಾಜ್ಯಬಳ್ಳಾರಿ : ದಾಖಲೆ ಇಲ್ಲದ ಹಣ,ಕೆಜಿ ಗಟ್ಟಲೇ ಬಂಗಾರ,ಬೆಳ್ಳಿ ವಶ.

ಬಳ್ಳಾರಿ : ದಾಖಲೆ ಇಲ್ಲದ ಹಣ,ಕೆಜಿ ಗಟ್ಟಲೇ ಬಂಗಾರ,ಬೆಳ್ಳಿ ವಶ.

ಬಳ್ಳಾರಿ : ಲೋಕಸಭೆ ಚುನಾವಣೆ ಬಂದರೆ ಸಾಕು ನಾಟಕೀಯ ಬೆಳವಣಿಗೆ ಗೋಸ್ಕರ ಈ ನಾಟಕನೋ ಅಲ್ಲಾ ಅಧಿಕಾರಿಗಳ ಸೆಟ್ಟಿಂಗ್ ಗಳಿಂದ ಹಿಡಿಯುವೊದು ಗೊತ್ತಿಲ್ಲ ಆದರೆ ರಾಜಕೀಯ ಪಕ್ಷದ ನಾಯಕರು ಕೊಂಡೋಗುವುದನ್ನು ಕೊಂಡೊಗಿಯೇ ಬಿಡ್ತಾರೆ ಇದೆಲ್ಲಾ ಅಧಿಕಾರಿಗಳು ನಾಯಕರಿಗೆ ತಿಳಿದ ವಿಚಾರ ಎಂಬುದು ನಿಜವಾದ ವಿಷಯ.

ಇದೀಗ ಲೋಕಸಭೆ ಚುನಾವಣೆ ಹಿನ್ನಲೆ ಬಳ್ಳಾರಿ ಪೊಲೀಸರು ದಾಖಲೆ ಇಲ್ಲದ ಕೋಟಿ ಕೋಟಿ ಹಣದ ಜೊತೆಗೆ ಕೆಜಿ ಗಟ್ಟಲೇ ಬಂಗಾರ ಬೆಳ್ಳಿ ಜಪ್ತಿ ಮಾಡಿದ್ದಾರೆ.ಬಳ್ಳಾರಿ ಕಂಬಳಿ ಬಜಾರ್‌ನಲ್ಲಿ ನರೇಶ್ ಸೋನಿ ಎಂಬುವರಿಗೆ ಸೇರಿದ ದಾಖಲೆ ರಹಿತ ಹಣ ಮತ್ತು ಆಭರಣ ಪತ್ತೆಯಾಗಿದ್ದು 5 ಕೋಟಿ 60 ಲಕ್ಷ ಹಣ 68 ಗಟ್ಟಿ ಬೆಳ್ಳಿ, 103 kg ಆಭರಣ ಬೆಳ್ಳಿ, 3 kg. ಬಂಗಾರವನ್ನು ವಶಪಡಿಸಿಕೊಂಡಲಾಗಿದೆ.

ದಾಖಲೆಗಳು ಅಸ್ಪಷ್ಟಇರುವುದರಿಂದ ಬ್ರೂಸ್ ಪೇಟೆ ಠಾಣೆ ಪೋಲಿಸರು ಸೀಜ್ ಮಾಡಿದ್ದಾರೆಂದು ತಿಳಿದುಬಂದಿದೆ.ಹಣ ಯಾವುದೇ ಪಕ್ಷಕ್ಕೆ ಸೇರಿದ್ದೋ ಅನ್ನೋ ಬಗ್ಗೆ ಸ್ಪಷ್ಟ ಮಾಹಿತಿ ಸಿಗದಿದ್ದು ಈ‌ ಬಗ್ಗೆ ತನಿಖೆ ನಡೆಸಲಾಗ್ತಿದ್ದು ಕೆಪಿ ಅ್ಯಕ್ಟ್ ನಲ್ಲಿ ದೂರು ದಾಖಲು ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular