Wednesday, November 19, 2025
Flats for sale
Homeಕ್ರೈಂಬಂಟ್ವಾಳ : ಮನೆಯ ಆವರಣದಲ್ಲಿರುವ ಶೆಡ್‌ ನಲ್ಲಿ ಅಕ್ರಮ ಜಾನುವಾರುಗಳನ್ನು ಕಟ್ಟಿಕೊಂಡು ಗೋಹತ್ಯೆ ,ಆರೋಪಿಯ ಮನೆ,ಶೇಡ್‌...

ಬಂಟ್ವಾಳ : ಮನೆಯ ಆವರಣದಲ್ಲಿರುವ ಶೆಡ್‌ ನಲ್ಲಿ ಅಕ್ರಮ ಜಾನುವಾರುಗಳನ್ನು ಕಟ್ಟಿಕೊಂಡು ಗೋಹತ್ಯೆ ,ಆರೋಪಿಯ ಮನೆ,ಶೇಡ್‌ ಜಪ್ತಿ .!

ಬಂಟ್ವಾಳ : ನ.16ರಂದು ಬಂಟ್ವಾಳ ತಾಲೂಕು ಅರಳ ಗ್ರಾಮದ ನಿವಾಸಿ ಮೈಯದಿ (57) ಎಂಬವರ ಮನೆಯ ಆವರಣದಲ್ಲಿರುವ ಶೆಡ್‌ ನಲ್ಲಿ ಜಾನುವಾರುಗಳನ್ನು ಕಟ್ಟಿಕೊಂಡು, ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್‌ ಐ ಮತ್ತು ಸಿಬ್ಬಂದಿಯವರು ಸ್ಥಳಕ್ಕೆ ದಾಳಿ ಮಾಡಿದ್ದು ಮನೆಯ ಬಳಿಯ ಶೆಡ್‌ ನಲ್ಲಿ ಮೂರು ಜನರು, ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದ ಘಟನೆ ಬೆಳಕಿದೆ ಬಂದಿದೆ.

ದಾಳಿ ಸಮಯ ಇಬ್ಬರು ಪರಾರಿಯಾಗಿದ್ದು ಒರ್ವನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ಹೆಸರು ಮೈಯದಿ (57) ಎಂದು ತಿಳಿದುಬಂದಿದೆ. ಶೆಡ್‌ ನಲ್ಲಿದ್ದ ಮೂರು ಹಸುಗಳನ್ನು ಮತ್ತು ಒಂದು ಕರುವನ್ನು ರಕ್ಷಿಸಲಾಗಿದ್ದು, ವಧೆ ಮಾಡಿದ ಸುಮಾರು 150 ಕೆಜಿ ದನದ ಮಾಂಸವನ್ನು ವಶ ಪಡಿಸಲಾಗಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಕ್ರ 172/2022 ಕಲಂ 4,5,7,12 ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ 2020 ಕಲಂ 11(1)(ಡಿ) ಪ್ರಾಣಿ ಹಿಂಸೆ ನಿಷೇಧ ಕಾಯಿದೆ ಹಾಗೂ ಕಲಂ 303(2)307 ಬಿಎನ್‌ ಎಸ್‌ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ದಸ್ತಗಿರಿಯಾದ ಆರೋಪಿ ಮೈಯದಿ ಎಂಬಾತನನ್ನು ಮಾನ್ಯ ನ್ಯಾಯಾಲಯ ಹಾಜರುಪಡಿಸಲಾಗುವುದು. ತಲೆಮರೆಸಿಕೊಂಡ ಆರೋಪಿಗಳ ಪತ್ತೆಕಾರ್ಯ ಪ್ರಗತಿಯಲ್ಲಿದೆ.

ಆರೋಪಿಗಳು ಹೈನುಗಾರಿಕೆಯ ದನಗಳನ್ನು ಕದಿಯುತ್ತಿದ್ದು ಯಾವುದೇ ಪರವಾನಿಗೆ ಇಲ್ಲದೇ ಮನೆಯ ಆವರಣದ ಶೆಡ್‌ ನಲ್ಲಿ ಕಸಾಯಿಖಾನೆಯನ್ನು ನಿರ್ಮಾಣ ಮಾಡಿಕೊಂಡು ಮನೆಯಿಂದಲೇ ವಿದ್ಯುತ್‌ ಸಂಪರ್ಕ ಪಡೆದು ಜಾನುವಾರುಗಳ ವಧೆ ನಡೆಸಿರುವುದು ತಿಳಿದುಬಂದಿದೆ. ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಜಪ್ತಿ ಮಾಡಿದ್ದು ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ ಮಂಗಳೂರು ಉಪವಿಭಾಗರವರಿಗೆ ಮುಟ್ಟುಗೋಲು ಮಾಡುವ ಬಗ್ಗೆ ವರದಿಯನ್ನು ಸಲ್ಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular