ಬಂಟ್ವಾಳ : ಭೂಕುಸಿತದಿಂದ ಮಹಿಳೆ ಸಾವಿಗೆ ಕಾರಣವಾದ ಸಜಿಪಮುನ್ನೂರಿನ ನಂದಾವರದಲ್ಲಿ ಹಾನಿಗೊಳಗಾದ ಮನೆಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಜುಲೈ 7, ಶುಕ್ರವಾರ ಭೇಟಿ ನೀಡಿದರು.
ಮೃತರ ಕುಟುಂಬವನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ, ಮನೆ ದುರಸ್ತಿಗೆ 1.2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.
ತಹಶೀಲ್ದಾರ್ ಎಸ್ ವಿ ಕೂಡಲಗಿ,ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಂಜನಾ, ಪಿಡಿಒ ಲಕ್ಷ್ಮಣ ಸೇರಿದಂತೆ ಅಧಿಕಾರಿಗಳು ಇದ್ದರು. ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಮಗಳು ಸಫಾ ಗಾಯಗೊಂಡಿದ್ದ ಸಂದರ್ಭದಲ್ಲಿ ಭೂಕುಸಿತದಿಂದ ಜರೀನಾ ಪ್ರಾಣ ಕಳೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.


