ಬಂಟ್ವಾಳ : ಮಣಿಹಳ್ಳ- ಸರಪಾಡಿ ರಸ್ತೆಯ ಅಲ್ಲಿಪಾದೆ ಸಮೀ ಪದ ಉಜಿ ರಾಡಿಯಲ್ಲಿಆಟೋರಿಕ್ಷಾವೊಂದು ನಾಯಿ ಅಡ್ಡ ಬಂದ ಹಿನ್ನೆಲೆ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹೊಂಡಕ್ಕೆ ಬಿದ್ದು ಚಾಲಕ ಹಾಗೂ ಆಟೋದಲ್ಲಿದ್ದ ಕೆಲ ವಿದ್ಯಾರ್ಥಿ ಗಳು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಚಾಲಕ ಸಂಶುದ್ದೀನ್ ಹಾಗೂ ಇತರ 2-3 ವಿದ್ಯಾರ್ಥಿಗಳು ಗಾಯ ಗೊಂಡಿದ್ದಾರೆ.
ಶುಕ್ರವಾರ ಸಂಜೆ ವಿದ್ಯಾರ್ಥಿಗಳು ರಿಕ್ಷಾದಲ್ಲಿ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ. ಗಾಯಗೊಂಡವರಿಗೆ ಬಂಟ್ವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.


