Thursday, March 12, 2026
Flats for sale
Homeಜಿಲ್ಲೆಬಂಟ್ವಾಳ : ಕಾರು-ಆಟೋ ಡಿಕ್ಕಿ, ಆಟೋರಿಕ್ಷಾ ಚಾಲಕ ಸಾವು.

ಬಂಟ್ವಾಳ : ಕಾರು-ಆಟೋ ಡಿಕ್ಕಿ, ಆಟೋರಿಕ್ಷಾ ಚಾಲಕ ಸಾವು.

ಬಂಟ್ವಾಳ : ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು ಆಟೊರಿಕ್ಷಾ ಚಾಲಕ ಮೃತಪಟ್ಟ ಘಟನೆ ವಗ್ಗ ಸಮೀಪದ ಕಾಡಬೆಟ್ಟು ಕ್ರಾಸ್‌ನಲ್ಲಿ ಶನಿವಾರ ನಡೆದಿದೆ.

ಕೆಂಪುಗುಡ್ಡೆಯ ವಿನಾಯಕ ಪೈ ಮೃತರು. ಅವರು ತಮ್ಮ ಮನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಉಪಹಾರ ತರಲು ವಗ್ಗದಲ್ಲಿರುವ ಹೋಟೆಲ್‌ಗೆ ಹೋಗುತ್ತಿದ್ದಾಗ ದುರಂತ ಸಂಭವಿಸಿದೆ.

ಬೆಳ್ತಂಗಡಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ವ್ಯಾಗನಾರ್ ಕಾರು ಅವರ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ವಿನಾಯಕ ಪೈ ಎಂಬುವವರಿಗೆ ಗಂಭೀರ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆ ತಲುಪುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೆಲ್ಕಾರ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular