ಪ್ರಯಾಗ್ರಾಜ್ : ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಜನವರಿ 13ರಿಂದ ಫೆಬ್ರವರಿ 26 ರ ವರೆಗೆ ಕುಂಭಮೇಳದಲ್ಲಿ ನಡೆಯಲಿದ್ದು ಅಂತಿಮ ಸಿದ್ದತೆಗಳು ಭರದಿಂದ ಸಾಗಿದೆ. ಸುಮಾರು 45 ದಿನಗಳ ಕಾಲ ನಡೆಯಲಿರುವ ಕುಂಭ ಮೇಳದಲ್ಲಿ ಬರೋಬ್ಬರಿ 40 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ.
12 ವರ್ಷಕ್ಕೊಮ್ಮೆ ನಡೆಲಿರುವ ಕುಂಬಮೇಳಕ್ಕೆ ಪ್ರಯಾಗದ ರಾಜ್ ನ ಗಂಗಾ,ಯಮುನಾ ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಸರ್ವ ರೀತಿಯಲ್ಲಿ ಸಜ್ಜುಗೊಂಡಿದೆ. ಕೋಟ್ಯAತರ ಭಕ್ತರು, ಸಾಧು, ಸಂತರು ಧಾರ್ಮಿಕ ಮುಖಂಡರು ಭಾಗವಹಿಸುವ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ.
ಈ ಕುಂಭಮೇಳಕ್ಕೆ ಜನಸಾಗರ ಹರಿದು ಬರುವ ಹಿನ್ನೆಲೆಯಲ್ಲಿ ಭಕ್ತರಿಗೆ ಯಾವುದೇ ತೊಂದರೆ ಆಗದAತೆ ಕೇಂದ್ರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರಗಳು ಅಗತ್ಯ ಸಿದ್ಧತೆ ಮುತ್ತು ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ. ತಾತ್ಕಾಲಿಕ ಡೇರಾಗಳು, ಟೆಂಟ್ ಸಿಟಿ ನಿರ್ಮಾಣ ಮಾಡಲಾಗಿದೆ. ಬರುವ ಭಕ್ತರ ಅನುಕುಲಕ್ಕಾಗಿ ಕುಡಿಯು ನೀರು, ಶೌಚಾಲಯ, ಊಟ, ವಸತಿ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಕೆಲಸದಲ್ಲಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಉತ್ತರ ಪ್ರದೇಶ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ಈಗಾಗಲೇ ಸಾಧು ಸಂತರು,ಧಾರ್ಮಿಕ ಮುಖಂಡರೂ ಸೇರಿದಂತೆ ಲಕ್ಷಾAತರ ಮಂದಿ ಭಾಗವಹಿಸಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಅಂತಿಮ ಸಿದ್ಧತೆ ಮಾಡಿಕೊಳ್ಳಲಾಗಿದೆ. ತ್ರಿವೇಣಿ ಸಂಗಮದಲ್ಲಿ ಸರ್ವ ರೀತಿಯಲ್ಲಿ ಅಗತ್ಯ ಮೂಲ ಸೌಲಭ್ಯ ಒದಗಿಸಲಾಗಿದೆ.
ಯಾತ್ರಾರ್ಥಿಗಳಿಗೆ ಸುಗಮ ಮತ್ತು ಸುರಕ್ಷಿತ ಅನುಭವಕ್ಕಾಗಿ ಉತ್ತರ ಮಧ್ಯ ರೈಲ್ವೆ ಯೋಜನೆ ರೂಪಿಸಿದೆ. “ಜನರ ಚಲನೆಯನ್ನು ಏಕಮುಖವಾಗಿ ಇರಿಸಲಾಗುವುದು, ಪ್ರಯಾಣಿಕರನ್ನು ತಮ್ಮ ಪ್ಲಾಟ್ಫಾರ್ಮ್ಗಳಿಗೆ ಹೋಗುವ ಮೊದಲು ‘ಯಾತ್ರಿ-ಕೇಂದ್ರ’ಕ್ಕೆ ಕರೆದೊಯ್ಯಲಾಗುವುದು ಮತ್ತು ಪ್ಲಾಟ್ಫಾರ್ಮ್ಗಳಲ್ಲಿ ಗೊಂದಲ ಮತ್ತು ಅನಗತ್ಯ ದಟ್ಟಣೆಯನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ದೂರದ ಪ್ರಯಾಣಕ್ಕಾಗಿ ಸುಮಾರು ೭೦೦ ಮೇಳ ವಿಶೇಷ ರೈಲುಗಳಿವೆ. ಸುಮಾರು 1,8೦೦ ಅಲ್ಪ-ದೂರ ರೈಲುಗಳು 200 ರಿಂದ 300 ಕಿ.ಮೀ. ಗಳಿಗೆ ಕಾರ್ಯನಿರ್ವಹಿಸುತ್ತವೆ.
ಪ್ರಯಾಗರಾಜ್ ಸೇರಿದಂತೆ ಚಿತ್ರಕೂಟ, ಬನಾರಸ್ ಮತ್ತು ಅಯೋಧ್ಯೆಗೆ ಹೋಗಲು ಬಯಸುವ ಮಂದಿಗೆ ಅನುಕೂಲ ಕಲ್ಪಿಸಲಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಜನವರಿ 13 ರಿಂದ ಫೆಬ್ರವರಿ ೨೬ ರವರೆಗೆ ಪ್ರಯಾಗರಾಜ್ನಲ್ಲಿ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮದಲ್ಲಿ ನಡೆಯುತ್ತದೆ. ಈ ಕಾರ್ಯಕ್ರಮವು ವಿವಿಧ ಆಧ್ಯಾತ್ಮಿಕ, ಸಾಂಸ್ಕöÈತಿಕ ಮತ್ತು ಪ್ರವಾಸಿ ಆಕರ್ಷಣೆಗಳೊಂದಿಗೆ ಭವ್ಯವಾದ ಆಚರಣೆಯಾಗಿದೆ.
ಕಾರ್ಯಕ್ರಮದ ಸುಗಮ ಆಯೋಜನೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನಿನ್ನೆ ಸ್ಥಳೀಯ ಸಂಸ್ಥೆಗಳೊAದಿಗೆ ಅಣಕು ಕಾರ್ಯಾಚರಣೆಯನ್ನು ನಡೆಸುವ ಮೂಲಕ ಕುಂಭಮೇಳದ ಯಶಸ್ಸಿಗೆ ಏನೆಲ್ಲ ಅಗತ್ಯ ಮುನ್ನೆಚ್ಚೆರಿಕೆ ವಹಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಲಾಯಿತು.


