ಪುತ್ತೂರು : ರಸ್ತೆ ದಾಟುತ್ತಿದ್ದ ಕಾಡು ಹಂದಿಗಳಿಗೆ ಲಾರಿ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ಮಾಣಿ-ಮೈಸೂರು ಹೆದ್ದಾರಿಯ ಬೈಪಾಸ್ ನಲ್ಲಿ ನಡೆದಿದೆ.
ನಾಲ್ಕು ಹಂದಿಗಳಿಗೆ ಗಾಯವಾಗಿದ್ದು ಗಾಯಗೊಂಡ ಹಂದಿಗಳನ್ನು ಸಾರ್ವಜನಿಕರು ಕೈಕಾಲು ಕಟ್ಟಿ ತಮ್ಮ ವಾಹನಗಳಲ್ಲಿ ತುಂಬಿಸಿ ಸಾಗಿಸಿದ್ದಾರೆ.ರಾತ್ರೆಯ ಪದಾರ್ಥಕ್ಕೆ ತಯಾರಿಯಲ್ಲಿದ್ದಾರೆ.
ಗಾಯಗೊಂಡ ಹಂದಿಗಳಿಗೆ ಚಿಕಿತ್ಸೆ ನೀಡುವ ಬದಲು ತಮ್ಮ ತಮ್ಮ ವಾಹನಗಳಲ್ಲಿ ತುಂಬಿಸಿ ಕೊಂಡುಹೋಗಿದ್ದು ಪುತ್ತೂರು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿನೀಡಿ ನಾಪತ್ತೆಯಾದ ಹಂದಿಗಳ ಪತ್ತೆಗೆ ಬಲೆಬೀಸಿದ್ದಾರೆ.


