ಪುತ್ತೂರು : ಮುಸ್ಲಿಂ ಯುವಕ ಮನೆಗೆ ನುಗ್ಗಿ ತಾಯಿ ಮತ್ತು ಮಗನ ಮೇಲೆ ಹಲ್ಲೆ ನಡೆಸಿದ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕನ್ಯಾನದ ಪರಂಕಿಲ ಎಂಬಲ್ಲಿ ನಡೆದಿದೆ.
ಹಲ್ಲೆಗೊಳಗಾದವರು ಗೀತಾ (54) ಮತ್ತು ಸದಾಶಿವ (33) ಎಂದು ತಿಳಿದುಬಂದಿದೆ.
ಕನ್ಯಾನದ ಪರಂಕಿಲ ನಿವಾಸಿ ಗೀತಾ ಕುಟುಂಬ ಬಳಸುತ್ತಿದ್ದ ಪಂಚಾಯತ್ ರಸ್ತೆಯನ್ನು ಉಪಯೋಗಿಸದಂತೆ ಆರೋಪಿ ಸಿದ್ಧೀಕ್ ದಮ್ಕಿನೀಡುತ್ತಿದ್ದನು,ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಕ್ಕೆ ಕಬ್ಬಿಣದ ರಾಡ್ ನಿಂದ ಸದಾಶಿವ ಹಾಗೂ ತಡೆಯಲು ಬಂದ ತಾಯಿ ಗೀತಾ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ತಾಯಿ-ಮಗ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕೆತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ಆಗಮಿಸಿದ ಹಿಂದೂ ಪರ ಸಂಘಟನೆಗಳು ಕಾಂಗ್ರೇಸ್ ಸರಕಾರದ ಅಲ್ಪಸಂಖ್ಯಾತರ ಓಲೈಕೆಯ ಪರಿಣಾಮ ಇಂಥ ಘಟನೆಗಳು ಹೆಚ್ಚಾಗುತ್ತಿದ್ದು,ಮತಾಂಧರು, ಗಾಂಜಾ ಮತ್ತು ಡ್ರಗ್ಸ್ ಮಾಫಿಯಾ ನಿರ್ಭೀತಿಯಿಂದ ತಿರುಗುವ ಸ್ಥಿತಿ ನಿರ್ಮಾಣವಾಗಿದೆ,ಹಿಂದೂಗಳ ಮನೆಯೊಳಗೆ ನುಗ್ಗಿ ಹಲ್ಲೆ ನಡೆಸುವಂತಹ ಘಟನೆಗಳು ಹೆಚ್ಚಾಗುತ್ತಿದೆ ಈ ನಡುವೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಮಾಯಕರ ಮೇಲೆ ಹಲ್ಲೆ ನಡೆಸಲಾಗಿದ್ದು ಈ ಕೃತ್ಯಗಳನ್ನು ತಡೆಗಟ್ಟುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆರೋಪಿಯನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದು ಪೋಲೀಸ್ ಇಲಾಖೆ ಆರೋಪಿಯನ್ನು ಶೀಘ್ರ ಬಂಧಿಸದೇ ಇದ್ದಲ್ಲಿ ಮುಂದೆ ಪ್ರತಿಭಟನೆ ನಡೆಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.


