Monday, February 2, 2026
Flats for sale
Homeಜಿಲ್ಲೆಪುತ್ತೂರು : ತೋಟದ ಮಾಲಕನ ಮಗನ ಮೇಲೆ ಅಡಿಕೆ ಕಳ್ಳರ ದಾಳಿ, ಓರ್ವನ ಬಂಧನ, ಮತ್ತೊಬ್ಬ...

ಪುತ್ತೂರು : ತೋಟದ ಮಾಲಕನ ಮಗನ ಮೇಲೆ ಅಡಿಕೆ ಕಳ್ಳರ ದಾಳಿ, ಓರ್ವನ ಬಂಧನ, ಮತ್ತೊಬ್ಬ ಪರಾರಿ.

ಪುತ್ತೂರು : ಅಡಿಕೆ ಮಾಲೀಕನ ಪುತ್ರನ ಮೇಲೆ ಖದೀಮರು ತಲ್ವಾರ್ ನಿಂದ ದಾಳಿ ಮಾಡಿ ಅಡಿಕೆ ದೋಚಲು ಯತ್ನಿಸಿದ ಘಟನೆ ಪುತ್ತೂರಿನಲ್ಲಿ ವರದಿಯಾಗಿದೆ.

ರಾಮಚಂದ್ರ ಎಡಪತ್ಯ ಮಾಲೀಕತ್ವದ ಪುತ್ತೂರಿನ ಸರ್ವೆಯ ಪಣೆಮಜಲುವಿನಲ್ಲಿರುವ ಎಡಪತ್ಯ ಫಾರ್ಮ್ಸ್ ನಿಂದ ಅಡಿಕೆ ಕಳ್ಳತನಕ್ಕೆ ಯತ್ನಿಸಿದ್ದುಆ ಸಂದರ್ಭ ರಾಮಚಂದ್ರ ಅವರ ಪುತ್ರನ ನಿಷ್ಕಲ್‌ ರಾಮ್ ರವರ ಕಣ್ಣಿಗೆ ಬಿದ್ದಿದ್ದಾರೆ ಆ ವೇಳೆ ಕಳ್ಳರನ್ನು ಹಿಡಿಯಲು ಮುಂದಾದಾಗ ತಲ್ವಾರ್ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ನಿಷ್ಕಲ್ ರಾಮ್ ಕೈಗೆ ಹಾಗೂ ಕಣ್ಣಿಗೆ ಭಾಗಕ್ಕೆ ಗಂಭೀರ ಗಾಯವಾಗಿದೆ.

ಶನಿವಾರ ಮುಂಜಾನೆ ನಿಷ್ಕಲ್ ರಾಮ್ ಮೈಸೂರಿನಿಂದ ಆಗಮಿಸಿದ್ದರು. ಕಳ್ಳರು ತಮ್ಮ ಜಮೀನಿನ ಸೋಲಾರ್ ಶೆಡ್‌ನಿಂದ ಅಡಿಕೆಯನ್ನು ತುಂಬುತ್ತಿರುವುದನ್ನು ಅವರು ನೋಡಿದರು. ಅವರು ಎದುರಾದಾಗ ಕಳ್ಳರು ನಿಷ್ಕಲ್ ನನ್ನು ಬೆದರಿಸಿ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ನಿಷ್ಕಲ್ ಕಿರುಚಿಕೊಂಡಾಗ, ಅವರ ಕುಟುಂಬಸ್ಥರು ಹೆಚ್‌ಎಸ್‌ಐ ರಕ್ಷಣೆಗೆ ಬಂದು ಕಳ್ಳರಲ್ಲಿ ಒಬ್ಬರಾದ ಬಶೀರ್‌ನನ್ನು ಹಿಡಿದರೆ, ಇನ್ನೊಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಆರೋಪಿ ಬಶೀರ್ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುಮಾರು 5 ಲಕ್ಷ ರೂ.ಬೆಲೆಬಾಳುವ ಅಡಿಕೆ ಕಳ್ಳತನ ಮಾಡುತ್ತಿದ್ದು, ಸ್ಥಳದಿಂದ ಪರಾರಿಯಾಗಿರುವ ಮತ್ತೋರ್ವ ಕಳ್ಳ ಹಕೀಂ ಅವರ ಸೂಚನೆ ಮೇರೆಗೆ ಕಳ್ಳತನ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ.

ಇರ್ಷಾದ್ ಎಂಬ ವ್ಯಕ್ತಿಗೆ ಸೇರಿದ ಕಾರಿನಲ್ಲಿ ಇಬ್ಬರು ಬಂದಿದ್ದರು. ಬಶೀರ್ ನನ್ನು ತೋಟದ ಮಾಲೀಕರು ಬೆಳ್ಳಾರೆ ಪೊಲೀಸರಿಗೆ ಒಪ್ಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular