Saturday, March 14, 2026
Flats for sale
Homeಜಿಲ್ಲೆಪುತ್ತೂರು : ತುಳುನಾಡಿನ ಕಂಬಳಕ್ಕೆ ಪುತ್ತೂರಿನಿಂದ ಬೆಂಗಳೂರಿಗೆ ಹೊರಟ ಕಂಬಳ ಕೋಣಗಳು.

ಪುತ್ತೂರು : ತುಳುನಾಡಿನ ಕಂಬಳಕ್ಕೆ ಪುತ್ತೂರಿನಿಂದ ಬೆಂಗಳೂರಿಗೆ ಹೊರಟ ಕಂಬಳ ಕೋಣಗಳು.

ಪುತ್ತೂರು : ನವಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳಕ್ಕೆ ಪುತ್ತೂರು ತಾಲ್ಲೂಕು ಉಪ್ಪಿನಂಗಡಿಯಿಂದ ಬೆಂಗಳೂರು ಕಡೆಗೆ ಕಂಬಳ ಕೋಣಗಳು ಹೊರಡಿವೆ. ಕಂಬಳ ಕೋಣಗಳ ಜೊತೆಗೆ ಅದರ ಮಾಲಕರು ಮತ್ತು ಪರಿಚಾರಕರ ದಂಡು ಉಪ್ಪಿನಂಗಡಿ ಪದವಿ ಕಾಲೇಜು ಮೈದಾನದಲ್ಲಿ ಒಟ್ಟು ಸೇರಿದ್ದಾರೆ.

ತುಳುನಾಡಿದ ಧ್ವಜ ನಿಶಾನೆ ತೋರಿದ ಬಳಿಕ ಉಪ್ಪಿನಂಗಡಿ-ಶಿರಾಡಿಘಾಟ್ ಮಾರ್ಗವಾಗಿ ಬೆಂಗಳೂರು ತಲುಪಲಿವೆ, ಮಧ್ಯಾಹ್ನ 2 ಗಂಟೆಗೆ ಹಾಸನ ತಲುಪಲಿರುವ ಕೋಣಗಳ ತಂಡ ಹಾಸನದಲ್ಲಿ ಮಧ್ಯಾಹ್ನದ ಭೋಜನದ ಬಳಿಕ ಕೋಣಗಳಿಗೆ ವಿಶ್ರಾಂತಿ ಪಡೆಯಲಿದ್ದಾರೆ.

ಬಳಿಕ ಹಾಸನ- ಚನ್ನಪಟ್ಟಣ ಮಾರ್ಗವಾಗಿ ಬೆಂಗಳೂರು ಅರಮನೆ ಮೈದಾನ ತಲುಪಲಿದ್ದು ರಾತ್ರಿ ಸುಮಾರು 11 ಗಂಟೆಯಾ ಸಮಯ ನಿರೀಕ್ಷಿಸಲಾಗಿದೆ. ಕಂಬಳದಲ್ಲಿ ಪಾಲ್ಗೊಳ್ಳುವ ಎಲ್ಲಾ ಕೋಣಗಳು ಇರುವ ಸ್ಥಳಕ್ಕೆ ತೆರಳಿ ಪಶುಸಂಗೋಪನಾ ಇಲಾಖೆ ವೈದ್ಯರು ದೃಢೀಕರಣ ಪತ್ರ ನೀಡಿದ್ದಾರೆ.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆಯುತ್ತಿದ್ದು ಕೋಣಗಳಿಗೆ ಬೇಕಾದ ನೀರು ಹಾಗು ಇತರ ವಸ್ತುಗಳನ್ನು ವಾಹನದಲ್ಲೇ ತುಂಬಿಸಿಕೊಂಡು ತಂಡ ಹೊರಡಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular