Monday, February 2, 2026
Flats for sale
Homeಜಿಲ್ಲೆಪುತ್ತೂರು : ಕೇರಳ ರಾಜ್ಯದಲ್ಲಿ ಕೊರೊನಾ ಸ್ಫೋಟ ಹಿನ್ನೆಲೆ ರಾಜ್ಯದ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ.

ಪುತ್ತೂರು : ಕೇರಳ ರಾಜ್ಯದಲ್ಲಿ ಕೊರೊನಾ ಸ್ಫೋಟ ಹಿನ್ನೆಲೆ ರಾಜ್ಯದ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ.

ಪುತ್ತೂರು : ಮಹಾಮಾರಿ ಕೊರೋನಾ ಮತ್ತೊಮ್ಮೆ ಸದ್ದು ಮಾಡಿದೆ ಇದರಿಂದ ಬಡವರ್ಗದ ಜನರಿಗಂತೂ ಹೆಚ್ಚಾಗಿ ಹೊಡೆತ ಬಿದ್ದಿದ್ದು ಕಳೆದ ವರ್ಷಗಳ ಹೊಡೆತ ತಿಂದ ಜನಸಾಮನ್ಯರು ಇನ್ನು ಕೂಡ ಹೆಚ್ಚೆತ್ತು ಕೊಳ್ಳೋವಾಗ ಮಗದೊಮ್ಮೆ ಕೊರೊನಾ ಸ್ಫೋಟಗೊಳ್ಳುವ ಪ್ರಭಾವ ಜಾಸ್ತಿಯಾಗಿದೆ.ಅದರಿಂದ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕೆಲ ಗಡಿಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಲು ಜಿಲ್ಲಾಡಳಿತದ ಮುಂದಾಗಿದೆ.

60 ವರ್ಷ ಮೇಲ್ಪಟ್ಟ ಹಿರಿಯರಿಗೆ ಮಾಸ್ಕ್ ಕಡ್ಡಾಯ ಮಾಡಲು ಸರಕಾರ ಆದೇಶ ಹೊರಡಿಸಿದೆ.ದ.ಕ‌. ಜಿಲ್ಲೆಯಲ್ಲಿ ಇಲ್ಲೀವರೆಗೂ ಕೊರೊನಾ ರೂಪಾಂತರಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲದ ಕಾರಣ ಈಗಾಗ್ಲೇ ಆರೋಗ್ಯಾಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದ್ದು,ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ಯಾರಿಗಾದರೂ ಕೊರೊನಾ ಗುಣಲಕ್ಷಣಗಳು ಕಂಡು ಬಂದರೆ ಅಂತವರ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಗರ್ಭಿಣಿಯರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಆಯಾ ಭಾಗಗಳಲ್ಲಿ ನರ್ಸ್ಗಳ ಮೂಲಕ ತಪಾಸಣೆಗೆ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಈಗಾಗ್ಲೇ ಸರ್ಕಾರ ಕೊರೊನಾ ಬಗ್ಗೆ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವೊಂದು ಮಾರ್ಗಸೂಚಿಗಳನ್ನ ಹೊರಡಿಸಿದೆ,ಇನ್ನು ಪುತ್ತೂರಿಗೆ ಕೇರಳ ಹತ್ತಿರವಾಗಿರುವುದರಿಂದ ಗಡಿ ಪ್ರದೇಶ ದಾಟಿ ಬರುವವರ ಬಗ್ಗೆ ತಪಾಸಣೆಗೆ ಕೆಲವೊಂದು ಕ್ರಮ ತೆಗೆದುಕೊಳ್ಳಲಾಗುವುದು,ಇಂದು ಕೊರೊನಾಗೆ ಸಂಬಂಧಿಸಿ ಪುತ್ತೂರಿನ ಆರೋಗ್ಯಾಧಿಕಾರಿ ಹಾಗೂ ಕೆಲ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಲಿದ್ದು ಕೊರೊನಾ ಬಗ್ಗೆ ಯಾವೆಲ್ಲ ಮುನ್ನೆಚ್ಚರಿಕ ಕ್ರಮವನ್ನು ತೆಗೆದುಕೊಳ್ಳಬಹುದು ಎಂಬ‌ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular