Friday, March 13, 2026
Flats for sale
Homeಜಿಲ್ಲೆಪುತ್ತೂರು : ಎನ್ಐಎ ತಂಡ ಸಂಚರಿಸುತಿದ್ದ ಪೊಲೀಸ್ ವಾಹನ – ಬೈಕ್ ಡಿಕ್ಕಿ : ಸೊಸೈಟಿ...

ಪುತ್ತೂರು : ಎನ್ಐಎ ತಂಡ ಸಂಚರಿಸುತಿದ್ದ ಪೊಲೀಸ್ ವಾಹನ – ಬೈಕ್ ಡಿಕ್ಕಿ : ಸೊಸೈಟಿ ಸಿಇಓ ಸಾವು.

ಪುತ್ತೂರು: ಪುತ್ತೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ( ಎನ್.ಐ.ಎ) (NIA) ತಂಡ ಸಂಚರಿಸುತಿದ್ದ ಪೊಲೀಸ್ ವಾಹನ ಹಾಗೂ ಬೈಕ್ ಅಪಘಾತ ನಡೆದು ಬೈಕ್ ಸವಾರ ಮೃತಪಟ್ಟ ಘಟನೆ ಮಾ.5 ರಂದು ನಡೆದಿದೆ.

ಮಾಣಿ ಮೈಸೂರು ರಸ್ತೆಯ ಸಂಪ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಭಾನುವಾರ ರಾತ್ರಿ ವಿಶೇಷ ತನಿಖೆಯ ದೃಷ್ಠಿಯಿಂದ ಸಂಚರಿಸುತ್ತಿದ್ದ ಎನ್. ಐ. ಎ. ತಂಡದ ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ.

ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ ಬಿ. (50) ಮೃತ ವ್ಯಕ್ತಿಯಾಗಿದ್ದಾರೆ.

ಪೊಲೀಸ್ ವಾಹನ ಜಿಲ್ಲೆಯ ಡಿ. ಆರ್. ಗೆ ಸೇರಿದ್ದಾಗಿದ್ದು, ಸುಳ್ಯ ಕಡೆಯಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಸಂದರ್ಭ ಪುತ್ತೂರಿನಿಂದ ಆರ್ಲಪದವು ಕಡೆಗೆ ಹೋಗುತ್ತಿದ್ದ ಬೈಕ್ ಪೊಲೀಸ್ ವಾಹನಕ್ಕೆ ಡಿಕ್ಕಿಯಾಗಿದೆ.

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳ ತಂಡ ಪುತ್ತೂರಿಗೆ ಆಗಾಗ ಆಗಮಿಸುತ್ತದೆ. ಆಗ ರಾಜ್ಯ ಪೊಲೀಸ್ ವಾಹನವನ್ನು ಅವರ ಸಂಚಾರಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ಸಬಿಸಿದೆ. ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಪುತ್ತೂರು ಶಾಸಕ ಸಂಜೀವ ಮಟoದೂರು, ಸೇರಿದಂತೆ ಹಲವು ಪ್ರಮುಖರು ಭೇಟಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular