ಪುತ್ತೂರು : ಪ್ರಾಥಮಿಕ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಪಿಎಂ ಶ್ರೀ ಯೋಜನೆ ಜಾರಿಗೆ ತಂದಿದ್ದು ಪುತ್ತೂರು ತಾಲೂಕಿನ ವೀರಮಂಗಲ ಸರಕಾರಿ ಪ್ರಾಥಮಿಕ ಶಾಲೆಗೆ ಈಗಾಗಲೇ ಯೋಜನೆ ಮಂಜೂರಾಗಿದೆ. ಕೆಲವೇ ದಿನಗಳಲ್ಲಿ ಪುತ್ತೂರು ಕ್ಷೇತ್ರದ ಇನ್ನೆರಡು ಶಾಲೆಗಳನ್ನು ಪಿಎಂ ಶ್ರೀ ಯೋಜನೆಗೆ ಸೇರಿಸಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ಬಂಟರ ಭವನದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಪುತ್ತೂರು ಕ್ಷೇತ್ರದಲ್ಲಿ ಹೆಚ್ಚುವರಿ ೨ ಸರಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ. ೨ ಸರಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಯಿಂದಲೇ ಆಂಗ್ಲಮಾಧ್ಯಮ ಆರಂಭಿಸಲು ಅನುಮತಿ ನೀಡಲಾಗಿದೆ. ಇನ್ನೂ ಅನೇಕ ಶಾಲೆಗಳಿಂದ ಅನುಮತಿಗಾಗಿ ಮನವಿಗಳು ಬಂದಿದ್ದುö, ಅವುಗಳನ್ನು ಪರಿಶೀಲಿಸಲಾಗುವುದು. ಶಾಲೆಗಳಲ್ಲಿ ಆಂಗ್ಲಮಾಧ್ಯಮಕ್ಕೆ ಒತ್ತು ನೀಡಬೇಕಾಗಿದೆ. ಕನ್ನಡ ಅಥವಾ ತುಳು ಭಾಷೆಗೆ ನಾವು ವಿರೋಧಿಗಳಲ್ಲö. ಆದರೆ ಉದ್ಯೋಗ ಕ್ಷೇತ್ರದಲ್ಲಿ ಮಿಂಚಲು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆ ಅಗತ್ಯವಾಗಿದೆ. ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲದ ಗುಣಮಟ್ಟ ಸರಕಾರಿ ಶಾಲೆಗಳಿಗೆ ಬರಬೇಕಾಗಿದೆ. ಖಾಸಗಿ ಶಾಲೆಯೇ ಶ್ರೇಷ್ಠ ಎಂಬ ಭಾವನೆ ತೊಲಗಬೇಕು. ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲಾಗುತ್ತಿದ್ದುö, ವಿಷಯಾವಾರು ಶಿಕ್ಷಕರ ನೇಮಕಕ್ಕೆ ಸರಕಾರ ಆದ್ಯತೆ ನೀಡುತ್ತಿದೆ ಎಂದರು.
ಬಂಟ್ವಾಳ ತಾಲೂಕಿನ ಬೊಳಂತಿಮೊಗರು ಸರಕಾರಿ ಶಾಲೆಯ ಶಿಕ್ಷಕರಾದ ವಿಠಲ ನಾಯಕ್ ಕಲ್ಲಡ್ಕ ದಿಕ್ಸೂಚಿ ಭಾಷಣ ಮಾಡಿದರು.ಬಳಿಕ ಮಾತನಾಡಿ ಶಿಕ್ಷಕರು ಆಯಾ ದಿನದ ಸಮೀಕ್ಷೆ ಅಂದAದೇ ಮಾಡಿ ಶಿಕ್ಷಕರು ತಮ್ಮ ಆದರ್ಶ ಸೇವೆಯ ಲೆಕ್ಕಾಚಾರವನ್ನು ನಿವೃತ್ತರಾದ ಮೇಲೆ ಮಾಡಿದರೆ ಏನೂ ಪ್ರಯೋಜನವಿಲ್ಲö. ಪ್ರತೀ ದಿನ ಸಂಜೆ ಕುಳಿತು ಈ ದಿನ ನಾನು ಶಿಕ್ಷಕ ವೃತ್ತಿಗೆ ನ್ಯಾಯ ಕೊಟ್ಟಿದ್ದೇನೆಯೇ ಎಂದು ಪರಾಮರ್ಶೆ ಮಾಡಬೇಕು ಎಂದು ಬೊಳಂತಿಮೊಗರು ಸರಕಾರಿ ಶಾಲೆಯ ಶಿಕ್ಷಕರಾದ ವಿಠಲ ನಾಯಕ್ ಕಲ್ಲಡ್ಕ ದಿಕ್ಸೂಚಿ ಭಾಷಣದಲ್ಲಿ ಕಿವಿಮಾತು ಹೇಳಿದರು.
ಮಾನವೀಯತೆಯೇ ದೂರವಾಗುತ್ತಿರುವ ದಿನಗಳಲ್ಲಿ ಶಿಕ್ಷಕರು ಕೇವಲ ಸಿಲಬಸ್ಗೆ ಸೀಮಿತರಾಗದೆ ವ್ಯಕ್ತಿತ್ವ ಮತ್ತು ಮಾನವೀಯತೆ ನಿರ್ಮಾಣಕ್ಕೆ ಒತ್ತು ನೀಡಬೇಕು. ನಾವು ಹೇಳಿದ್ದನ್ನೆಲ್ಲ ಮಕ್ಕಳು ಕಲಿಯಬೇಕು ಎಂಬ ಭಾವನೆ ಶಿಕ್ಷಕರಿಗೂ ಬೇಡ, ಇಲಾಖೆಗೂ ಬೇಡ ಎಂದು ಹೇಳಿದ ಅವರು, ಮನೆಯ ಒತ್ತಡ ಶಾಲೆಗೆ ತರಬೇಡಿ, ಶಾಲೆಯ ಒತ್ತಡ ಮನೆಗೆ ತರಬೇಡಿ. ರಾಷ್ಟಿçÃಯ ಪಕ್ಷಿö, ರಾಷ್ಟಿçÃಯ ಪ್ರಾಣಿಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಜತೆಯಲ್ಲೇ ಮಕ್ಕಳನ್ನು ರಾಷ್ಟಿçÃಯ ವ್ಯಕ್ತಿಯಾಗಿ ಬೆಳೆಸಲು ಗಮನ ಹರಿಸಿ. ಚಾಲಕ- ಮಾಲಕ- ಪಾಲಕ- ಬಾಲಕ ಈ ನಾಲ್ಕೂ ಪರಿಕಲ್ಪನೆಗಳು ಜತೆಯಾಗಿ ಸಾಗಿದರೆ ಶಿಕ್ಷಣ ವ್ಯವಸ್ಥೆ ಸುಧಾರಿಸುತ್ತದೆ ಎಂದವರು ಹೇಳಿದರು.
ನಿವೃತ್ತ ಶಿಕ್ಷಕರಿಗೆ ಸನ್ಮಾನ
ಕಳೆದ ಒಂದು ವರ್ಷದಲ್ಲಿ ಸೇವೆಯಿಂದ ನಿವೃತ್ತರಾದ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರನ್ನು ಈ ಸಂದರ್ಭ ಶಾಸಕರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಬೇಡಿಕೆಗಳ ಮನವಿ ಸಲ್ಲಿಕೆ
ಶಾಲಾ ಅಧ್ಯಾಪಕರಿಗೆ ಎನ್ಪಿಎಸ್ ಪಿಂಚಣಿ ಪದ್ಧತಿ ರದ್ದುಪಡಿಸಿ ಹಿಂದಿನ ಓಪಿಎಸ್ ಪದ್ಧತಿಯನ್ನೇ ಜಾರಿಗೊಳಿಸಲು ಸರಕಾರವನ್ನು ಒತ್ತಾಯಿಸಬೇಕು ಎಂಬ ಅಂಶವೂ ಸೇರಿದಂತೆ ಶಿಕ್ಷಕರ ನಾನಾ ಬೇಡಿಕಗಳನ್ನು ಒಳಗೊಂಡ ಮನವಿಯನ್ನು ಶಾಸಕರಿಗೆ ಸಲ್ಲಿಸಲಾಯಿತು.
ಶಿಕ್ಷಕರ ಸಂಘದ ಪದಾಧಿಕಾರಿ ಮಾಮಚ್ಚನ್ ಬೇಡಿಕೆಗಳ ಪಟ್ಟಿ ವಾಚಿಸಿದರು. ಕರ್ತವ್ಯದ ಅವಧಿಯಲ್ಲಿ ನಿಧನರಾದ ಶಿಕ್ಷಕಿ ಸುಂದರಿ ಅವರಿಗೆ ಸಭೆಯಲ್ಲಿ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕ ದೇವಿಪ್ರಸಾದ್ ಚಿಕಿತ್ಸೆಗಾಗಿ ಸಮಾರಂಭದಲ್ಲಿ ಶಿಕ್ಷಕ ವೃಂದದವರು ದೇಣಿಗೆ ಕ್ರೋಢೀಕರಿಸಿದರು.
ದ.ಕ. ಜಿಪಂ ಶಾಲಾ ಶಿಕ್ಷಣ ಇಲಾಖೆ, ಪುತ್ತೂರು ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಸಹಾಯಕ ಆಯುಕ್ತರಾದ ಗಿರೀಶ್ ನಂದನ್, ತಾಪಂ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಭಂಡಾರಿ, ತಹಸೀಲ್ದಾರ್ ಶಿವಶಂಕರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಶ್ರೀರಾಮಕೃಷ್ಣ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿö, ತಾಲೂಕಿನ ಶಿಕ್ಷಕರ ನಾನಾ ಸಂಘಗಳ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.


