ಪುತ್ತೂರು : ಮೂರು ದಿನದ ಹಿಂದೆ ದುಸ್ಕರ್ಮಿಗಳ ಹಟ್ಟಹಾಸಕ್ಕೆ ಬಲಿಯಾದ ಯುವ ಕಲ್ಲೇಗ ಟೈಗರ್ಸ್ ನ ನಾಯಕ ಅಕ್ಷಯ್ ಕಲ್ಲೇಗ ನಿವಾಸಕ್ಕೆ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಅಕ್ಷಯ್ ತಂದೆ ಚಂದ್ರಶೇಖರ್ ಗೆ ಧೈರ್ಯ ತುಂಬಿದ ಅವರು ,ಈ ವೇಳೆ ಮಗನನ್ನು ಕೊಂದವರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಕೋಟ ಶ್ರೀನಿವಾಸ್ ಪೂಜಾರಿ ಅವರಲ್ಲಿ ಆಗ್ರಹಿಸಿದರು.
ಬಳಿಕ ಮಾಧ್ಯಮದವರ ಮೇಲೆ ಹರಿಹಾಯ್ದ ಅಕ್ಷಯ್ ತಂದೆ ಚಂದ್ರಶೇಖರ್,’ತನ್ನ ಮಗನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನ ಮಾಡುತ್ತಿರಿ’,’ಆತ ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಹೇಳುತ್ತಿಲ್ಲ’ ‘ರೌಡಿಶೀಟರ್ ಎಂಬುದನ್ನೆಲ್ಲ ಉಲ್ಲೇಖ ಮಾಡುತ್ತಿರಿ’ ಎಂದು ಮಾಧ್ಯಮದ ಮೇಲೆ ಹರಿಹಾಯ್ದರು.


