ಪಾಲಕ್ಕಾಡ್ ; ಲೋಕಸಭೆ ಚುನಾವಣೆ ಗೆಲ್ಲಲು ರಾಷ್ಟ್ರ ವಿರೋಧಿ ಕೃತ್ಯಗಳಿಂದಾಗಿ ದೇಶದಲ್ಲಿ ನಿಷೇಧಕ್ಕೊಳಗಾಗಿರುವ ಸಂಘಟನೆಯೊಂದರ ರಾಜಕೀಯ ಘಟಕದೊಂದಿಗೆ ಹಿಂಬಾಗಿಲ ಮೂಲಕ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ನ ಯುವರಾಜ ಕೇರಳದ ಜನರಲ್ಲಿ ಮತ ಕೇಳುತ್ತಾರೆ ಆದರೆ ಈ ಬಗ್ಗೆ ಒಂದೇ ಒಂದು ಮಾತನ್ನೂ ಹೇಳುವುದಿಲ್ಲ ಎಂದು ಹರಿಹಾಯ್ದಿರು. ಕೇರಳದ ಪಾಲಕ್ಕಾಡ್ ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು “ಕಾಂಗ್ರೆಸ್‌ನ ದೊಡ್ಡ ನಾಯಕರೊಬ್ಬರು ಉತ್ತರ ಪ್ರದೇಶದಲ್ಲಿ ತಮ್ಮ ಕುಟುಂಬದ ಸ್ಥಾನದ ಗೌರವ ಉಳಿಸಿಕೊಳ್ಳಲು ಕಷ್ಟಪಟ್ಟಿದ್ದಾರೆ ಕೇರಳದಲ್ಲಿ ಹೊಸ ನೆಲೆ ಸ್ಥಾಪಿಸಿದ್ದಾರೆ ಎಂದು ಗಾಂಧಿ ಕುಟುಂಬ ದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಎಲ್‌ಡಿಎಫ್ ಮತ್ತು ಯುಡಿಎಫ್ ಬಗ್ಗೆ ಎಚ್ಚರದಿಂದಿರಿ. ಕೇರಳದಲ್ಲಿ ಕಾಂಗ್ರೆಸ್ ಎಡ ಪಕ್ಷದ ನಾಯಕರನ್ನು ‘ಭಯೋತ್ಪಾದಕರು’ ಎಂದು ಕರೆಯುತ್ತದೆ. ಆದರೆ ದೆಹಲಿಯಲ್ಲಿ ಅವರು ಒಟ್ಟಿಗೆ ಕುಳಿತು, ಒಟ್ಟಿಗೆ ಊಟ ಮಾಡುತ್ತಾರೆ ಮತ್ತು ಚುನಾವಣೆಗೆ ತಂತ್ರಗಳನ್ನು ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆ ” ಸಂಕಲ್ಪ ಪತ್ರ” ದೇಶದ ಅಭಿವೃದ್ಧಿಯ ಸಂಕೇತದ ಸಂಕಲ್ಪವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ಬಿಜೆಪಿ ಮುಂದಿನ 5 ವರ್ಷಗಳ ಕಾಲ ‘ವಿಕಾಸ ಮತ್ತು ‘ವಿರಾಸತ್’ ದೃಷ್ಟಿಕೋನವನ್ನು ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದೆ.ಜೊತೆಗೆ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಈ ಮೂಲಕ ನವಭಾರತ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಹೊಸ ಎಕ್ಸ್ಪ್ರೆಸ್‌ವೇಗಳು ಮತ್ತು ಹೊಸ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ, ಪಶ್ಚಿಮ ಭಾರತದ ಅಹಮದಾಬಾದ್ ಮತ್ತು ಮುಂಬೈ ನಡುವೆ ಬುಲೆಟ್ ಟ್ರೈನ್ ಕೆಲಸ ನಡೆಯುತ್ತಿದೆ.ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉತ್ತರ, ದಕ್ಷಿಣ ಮತ್ತು ಪೂರ್ವ ಭಾರತದ 3 ಪ್ರದೇಶಗಳಲ್ಲಿ ಬುಲೆಟ್ ರೈಲಿನ ಸಮೀಕ್ಷೆಯನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದ್ದೇವೆ ಎಂದು ತಿಳಿಸಿದ್ದಾರೆ.
ಬಿಜೆಪಿಯ ಸಂಕಲ್ಪದಲ್ಲಿ ಪತ್ರ ಆಯುಷ್ಮಾನ್ ಭಾರತ್ ಯೋಜನೆಯಡಿ ಕೇರಳದ 73 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೇರಳದ ಈ ಹೊಸ ವರ್ಷ ಹೊಸ ಆರಂಭವನ್ನು ತಂದಿದೆ ಹೊಸ ವರ್ಷ ಕೇರಳದ ಅಭಿವೃದ್ಧಿಯ ವರ್ಷವಾಗಲಿದೆ. ಈ ಹೊಸ ವರ್ಷ ಹೊಸ ರಾಜಕೀಯದ ಆರಂಭದ ವರ್ಷವಾಗಲಿದೆ, ಅದಕ್ಕಾಗಿಯೇ ಇಂದು ಕೇರಳ ಮತ್ತೊಮ್ಮೆ ಮೋದಿ ಸರ್ಕಾರ ಎಂದು ಹೇಳುತ್ತಿದೆ ಎಂದು ತಿಳಿಸಿದ್ದಾರೆ.
ಪಾಲಕ್ಕಾಡ್ ಅನ್ನು ಕೇರಳದ ಹೆಬ್ಬಾಗಿಲು ಎಂದೂ ಕರೆಯುತ್ತಾರೆ. ಇಲ್ಲಿನ ಪ್ರಕೃತಿ ಸೌಂದರ್ಯ ಎಲ್ಲರನ್ನೂ ಆಕರ್ಷಿಸುತ್ತದೆ. ಕೇರಳದ ಹಲವು ದೇವಾಲಯಗಳು, ಚರ್ಚ್ಗಳು ಮತ್ತು ನಂಬಿಕೆಯ ಸ್ಥಳಗಳು ಮುಂದಿನ 5 ವರ್ಷಗಳಲ್ಲಿ, ಕೇರ¼ದ ಹೆದ್ದಾರಿ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಎನ್‌ಡಿಎ ಸರ್ಕಾರ ಅಭಿವೃದ್ಧಿ ಗೆ ಒತ್ತು ಕೇರಳದಲ್ಲಿ ಎನ್‌ಡಿಎ ಸರ್ಕಾರದ ಕೊನೆಯ ಅಧಿಕಾರಾವಧಿಯಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ, 36 ಲಕ್ಷಕ್ಕೂ ಹೆಚ್ಚು ಮಂದಿಗೆ ನಲ್ಲಿ ಮೂಲಕ ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ. ಜಲ ಜೀವನ್ ಜಲ ಮಿಷನ್ ಚಾಲನೆಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೇಶದಲ್ಲಿ, ಕೇರಳ ಸರ್ಕಾರ ಹೆಚ್ಚು ಭ್ರಷ್ಟಾಚಾರಕ್ಕೆ ಒತ್ರು ನೀಡಿದೆ ಅದಕ್ಕಾಗಿಯೇ ಕೇರಳದಲ್ಲಿ ಇಂದಿಗೂ ಮನೆಗಳಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಇದೆ .ಕೇರಳದ ಪ್ರತಿ ಮನೆಯಿಂದ ನೀರು ಒದಗಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.
ಭವಿಷ್ಯ ನಿರ್ಧಾರ ಬದಲಿಸುವ ಚುನಾವಣೆ ಚುನಾವಣೆಯು ದೇಶದ ಭವಿಷ್ಯಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಚುನಾವಣೆಯಾಗಿದೆ. ಜೊತೆಗೆ ಉಜ್ವಲ ಭವಿಷ್ಯ ಮತ್ತು ಮಕ್ಕಳ ಉಜ್ವಲ ಜೀವನವನ್ನು ಖಾತರಿಪಡಿಸುವ ಚುನಾವಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಎನ್‌ಡಿಎ ಸರ್ಕಾರ, ಭಾರತದ ವಿಶ್ವಾಸಾರ್ಹತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಚ್ಚಿಸಿದೆ ಎನ್ನುವುದನ್ನು ನೋಡಿದ್ದೇವೆ, ಈ ಮುಂಚೆ ಭಾರತೀಯನು ವಿದೇಶಕ್ಕೆ ಹೋದಾಗ ಭಾರತ ದುರ್ಬಲ ದೇಶವೆಂದು ಬಿಂಬಿಸಿತ್ತು. ಬಿಜೆಪಿ ಸರ್ಕಾರ ಬಂದ ನಂತರ ಈಗ ಕಾಲ ಬದಲಾಗಿದೆ ಎಂದಿದ್ದಾರೆ.
ಭಾರತ ಕೋವಿಡ್‌ನಂತಹ ಸಾಂಕ್ರಾಮಿಕ ರೋಗದಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ರಕ್ಷಿಸುವ ಶಕ್ತಿಯನ್ನು ಹೊಂದಿದೆ. ಇದು ನವ ಭಾರತದ ಶಕ್ತಿ ಎಂದು ಕರೆದಿದ್ದಾರೆ.