Thursday, November 6, 2025
Flats for sale
Homeರಾಜಕೀಯಪಾಂಡವಪುರ : ಕ್ಷೇತ್ರಬಿಟ್ಟು ವಿದೇಶಕ್ಕೆ ಪ್ರವಾಸ ಕೈಗೊಂಡ ಶಾಸಕ ದರ್ಶನ್ ಪುಟ್ಟಣ್ಣಯ್ಯ.

ಪಾಂಡವಪುರ : ಕ್ಷೇತ್ರಬಿಟ್ಟು ವಿದೇಶಕ್ಕೆ ಪ್ರವಾಸ ಕೈಗೊಂಡ ಶಾಸಕ ದರ್ಶನ್ ಪುಟ್ಟಣ್ಣಯ್ಯ.

ಪಾಂಡವಪುರ : ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಲಗೇಜ್ ಬ್ಯಾಗ್ ಹಿಡಿದುಕೊಂಡು ವಿದೇಶಕ್ಕೆ ಪ್ರಯಾಣಿಸಲು ವಿಮಾನ ನಿಲ್ದಾಣದಲ್ಲಿ ನಿಂತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ, ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೆದ್ದ ನಂತರ ಎರಡನೇ ಬಾರಿಗೆ ವಿದೇಶಕ್ಕೆ ತೆರಳಿದ್ದಾರೆ.

ಕಳೆದ ಎರಡು ದಿನದ ಹಿಂದೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕ್ಷೇತ್ರ ಬಿಟ್ಟು ವಿದೇಶಕ್ಕೆ ಪ್ರಯಾಣಿಸಿದ್ದಾರೆ,ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿ ಶಾಸಕರಾದ ಸ್ವಲ್ಪ ದಿನದಲ್ಲೇ ವಿದೇಶಕ್ಕೆ ತೆರಳಿ, ಒಂದು‌ ವಾರದ ಬಳಿಕ ಕ್ಷೇತ್ರಕ್ಕೆ ವಾಪಸ್ಸು ಆಗಮಿಸಿದ್ದರು. ಇದೀಗ ಮತ್ತೊಮ್ಮೆ ವಿದೇಶಕ್ಕೆ ತೆರಳಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ಜಯಗಳಿಸಿ ಮೂರು ತಿಂಗಳೊಳಗೆ ಎರಡು ಬಾರಿ ವಿದೇಶಕ್ಕೆ ಪ್ರಯಾಣಿಸಿದ್ದಾರೆ.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ತಮ್ಮ ಕುಟುಂಬದ ಸದಸ್ಯರನ್ನು ನೋಡಿಕೊಂಡು ಬರಲು ತೆರಳಿದ್ದಾರೆ ಎಂದು ರೈತಸಂಘದ ಕೆಲ ಮುಖಂಡರು ಹೇಳಿದರೆ, ದರ್ಶನ್ ಪುಟ್ಟಣ್ಣಯ್ಯ ಅವರು ಮುಖ್ಯವಾದ ಕೆಲಸಕ್ಕೆಂದು ವಿದೇಶಕ್ಕೆ ತೆರಳಿದ್ದಾರೆ. ಶೀಘ್ರದಲ್ಲಿ ವಾಪಸ್ಸು ಆಗಮಿಸಲಿದ್ದಾರೆ ಎಂದು ರೈತಸಂಘದ ಕೆಲವರು ಹೇಳುತ್ತಾರೆ.

ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿದೇಶಕ್ಕೆ ತೆರಳಿರುವ ವಿಷಯವನ್ನು ರೈತಸಂಘದ ವಲಯದಲ್ಲಿ ಬಹಿರಂಗವಾಗಿ ಹೇಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಶಾಸಕರು ಖಚಿತವಾಗಿ ವಿದೇಶಕ್ಕೆ ತೆರಳಿರುವುದು ಗ್ಯಾರಂಟಿ ಎನ್ನುವ ಮಾತು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಗಾಗ ಕ್ಷೇತ್ರಬಿಟ್ಟು ವಿದೇಶಕ್ಕೆ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಅವಕಾಶ ಮಾಡಿಕೊಟ್ಟಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular