ಪಟನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ಹೀನಾಯ ರೀತಿಯಲ್ಲಿ ಪರಾಭವಗೊಂಡ ನಂತರ ಅದರ ಮುಖ್ಯಸ್ಥ ಲಾಲೂ ಯಾದವ್ ಕುಟುಂಬದಲ್ಲೂ ಬಿರುಕು ಕಾಣಿಸಿಕೊಂಡಿದೆ. ಲಾಲೂ ಅವರ ಪುತ್ರಿ ರೋಹಿಣಿ ಆಚಾರ್ಯರು ಈಗ ಕುಟುಂಬ ಹಾಗೂ ರಾಜಕೀಯ ಎರಡನ್ನೂ ತೊರೆಯುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ಘೋಷಿಸಿದ್ದಾರೆ.
ಈಗಾಗಲೇ ಲಾಲೂ ಅವರು ತಮ್ಮ ಹಿರಿಯ ಪುತ್ರ ತೇಜ್ಪ್ರತಾಪ್ ಯಾದವ್ ಅವರನ್ನು ಪಕ್ಷ ಹಾಗೂ ಕುಟುಂಬದಿAದಲೇ ಹೊರಹಾಕಿದ್ದಾರೆ. ರೋಹಿಣಿ ಈಗ ಕುಟುಂಬ ತೊರೆಯುವ ಸಂದರ್ಭದಲ್ಲಿ ತಮ್ಮ ಸಹೋದರ ತೇಜಸ್ವಿ ಯಾದವ್ ಅವರ ಆಪ್ತ ಸಂಜಯ್ ಯಾದವ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ರಾಜಕೀಯ ಬಿಡಲು ತಮ್ಮನ್ನು ಪ್ರೇರೇಪಿಸಿದ್ದು ಸಂಜಯ್ ಯಾದವ್ ಹಾಗೂ ರಮೀಜ್ ಎಂದೂ ಹೇಳಿಕೊಂಡಿದ್ದಾರೆ. ನಾನು ಮಾಡಿರುವ ಆರೋಪಗಳನ್ನು ನಾನೇ ವಾಪಸ್ ತೆಗೆದುಕೊಳ್ಳುತ್ತೇನೆ ಎಂದೂ ಹೇಳಿಕೊಂಡಿದ್ದಾರೆ. ರೋಹಿಣಿಯವರು ತಮ್ಮಕುಟುಂಬದ ಬಗ್ಗೆ ಬರೆಯುವುದು ಇದೇ ಮೊದಲ ಸಲವಲ್ಲ. ಕಳೆದ ಸೆಪ್ಟಂಬರ್ನಲ್ಲಿ ಬರೆದಿದ್ದ ಪೋಸ್ಟ್ನಲ್ಲಿ ನಾನು ಮಗಳು ಹಾಗೂ ಸಹೋದರಿಯಾಗಿ ನನ್ನ ಕರ್ತವ್ಯ ಹಾಗೂ ಧರ್ಮ ಪೂರೈಸಿದ್ದೇನೆ. ಮುಂದೆಯೂ ಅದೇ ರೀತಿ ನಿರ್ವಹಿಸುತ್ತೇನೆ ಎಂದಿದ್ದಾರೆ.


