ನೈನ್ ಪುರ್ : ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಮಾಂಡ್ಲಾದಲ್ಲಿ ಅಕ್ರಮ ಗೋಮಾಂಸ ವ್ಯಾಪಾರದ ವಿರುದ್ಧದ ಕ್ರಮದ ಭಾಗವಾಗಿ, ಸರ್ಕಾರಿ ಭೂಮಿಯಲ್ಲಿ 11 ಜನರು ನಿರ್ಮಿಸಿದ ಮನೆಗಳನ್ನು ಆಡಳಿತವು ನೆಲಸಮಗೊಳಿಸಿದೆ.
ಇಡೀ ಪ್ರಕರಣವು ಗೋವು ಕಳ್ಳಸಾಗಣೆಗೆ ಸಂಬAಧಿಸಿದೆ. ಮೂರು ಬುಲ್ಡೋಜರ್‌ಗಳ ಸಹಾಯದಿಂದ ಆಡಳಿತ ತಂಡ ಈ ಕ್ರಮ ಕೈಗೊಂಡಿದೆ. ಈ ಕ್ರಮಕ್ಕಾಗಿ ಗ್ರಾಮ ಭೈನಸ್ವಾಹಿಯನ್ನು ಕಾಂಟೊಮೆಂಟ್ ಆಗಿ ಪರಿವರ್ತಿಸಲಾಯಿತು. ಮೂಲೆ ಮೂಲೆಗಳಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ನೈನ್‌ಪುರದ ಭೈಸವಾಹಿ ಪ್ರದೇಶದಲ್ಲಿ ವಧೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ತರಲಾಗಿದೆ ಎಂಬ ರಹಸ್ಯ ಮಾಹಿತಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಜತ್ ಸಕ್ಲೇಚಾ ತಿಳಿಸಿದ್ದಾರೆ.
ಇಲ್ಲಿ ಪೊಲೀಸ್ ತಂಡ ಗೋವು ಕಳ್ಳಸಾಗಣೆಯ ದೊಡ್ಡ ಜಾಲವನ್ನು ಬಯಲಿಗೆಳೆದಿದೆ. ಇಲ್ಲಿನ ೧೧ ಮನೆಗಳಲ್ಲಿ ಅಕ್ರಮ ಗೋಹತ್ಯೆ ನಡೆದಿರುವುದನು ಪೊಲೀಸ್ ತಂಡ ಪತ್ತೆ ಮಾಡಿದೆ. ದಾಳಿ ವೇಳೆ ಆರೋಪಿಗಳ ಮನೆಗಳಲ್ಲಿ ೧೫೦ಕ್ಕೂ ಹೆಚ್ಚು ಹಸುಗಳ ಅವಶೇಷಗಳು ಪತ್ತೆಯಾಗಿವೆ.
ಈ ಪ್ರಕರಣದ ಆರೋಪಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಉಳಿದವರೆಲ್ಲರೂ ರಾತ್ರಿಯ ಲಾಭ ಪಡೆದು ಪರಾರಿಯಾಗಿದ್ದಾರೆ ಆರೋಪಿಗಳ ಹುಡುಕಾಟ ನಡೆಸಲಾಗುತ್ತಿದೆ. ಇದರೊಂದಿಗೆ ಪೊಲೀಸರು ಸುಮಾರು 150 ಜೀವಂತ ಹಸುಗಳನ್ನು ಹೊಲಗಳು ಮತ್ತು ಮನೆಗಳ ಸುತ್ತಲಿನ ಪ್ರದೇಶದಿಂದ ಮುಕ್ತಗೊಳಿಸಿ ಆಡಳಿತದ ಸಹಾಯದಿಂದ ಗೋಶಾಲೆಗೆ ಸುರಕ್ಷಿತವಾಗಿ ಕೊಂಡೊಯ್ದರು.
ಈ ದೊಡ್ಡ ಜಾಲವನ್ನು ಬಯಲಿಗೆಳೆದ ಪೊಲೀಸರು 11 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಪೊಲೀಸರ ಈ ಕ್ರಮದ ನಂತರ ಭೈಸ್ವಾಹಿ ಗ್ರಾಮದ 11 ಕಸಾಯಿಖಾನೆಗಳನ್ನು ಕೆಡವಲಾಗಿದೆ. ಮೂರು ಜೆಸಿಬಿಗಳ ಸಹಾಯದಿಂದ ಈ ಸಂಪೂರ್ಣ ಕಾರ್ಯವನ್ನು ಮಾಡಲಾಗಿದೆ. ಸದ್ಯ ಈ ಮನೆಗಳು ನೆಲಸಮವಾಗಿವೆ.
ವಶಪಡಿಸಿಕೊಂಡ ಮಾಂಸವು ಗೋಮಾಂಸ ಎAದು ಸ್ಥಳೀಯ ಸರ್ಕಾರಿ ಪಶುವೈದ್ಯರು ಖಚಿತಪಡಿಸಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ. ಭೈನಸ್ವಾಹಿ ಪ್ರದೇಶವು ಕೆಲವು ಸಮಯದಿಂದ ಗೋವು ಕಳ್ಳಸಾಗಣೆಯ ಕೇಂದ್ರವಾಗಿದೆ. ಮಧ್ಯಪ್ರದೇಶದಲ್ಲಿ ಗೋಹತ್ಯೆಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.