ನೆಲ್ಯಾಡಿ ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದ್ದು,ಎಲ್ಲಾ ಠಾಣೆ ಹಾಗೂ ಅಧಿಕಾರಿಗಳಿಗೆ ಮಾಮೂಲು ಹೋಗುವುದರಿಂದ ಕಣ್ಣಿದ್ದೂ ಕುರುಡರಂತಾಗಿದ್ದಾರೆ.
ಜಿಲ್ಲೆಯ ನೆಲ್ಯಾಡಿ ಸಮೀಪದ ಗುಂಡ್ಯ ಸಮೀಪದಲ್ಲಿ ಯಂತ್ರಗಳನ್ನು ಬಳಸಿ ಅಕ್ರಮ ಮರಳುಗಾರಿಕೆ ನಡೆಸಿತ್ತಿರುವುದು ಬೆಳಕಿಗೆ ಬಂದಿದ್ದು ಅಧಿಕಾರಿಗಳ ಗಮನಕ್ಕೂ ತಂದರೂ ತಲೆಕೆಡಿಸಿಕ್ಕೊಳ್ಳದೆ ಇದ್ದಾರೆ.
ಗುಂಡ್ಯ ಚೆಕ್ಪೋಸ್ಟ್ ಬಳಿಯಲ್ಲಿ ಅಕ್ರಮ ಮರಳು ಮಾಫಿಯಾ ನಡೆಯುತ್ತಿದ್ದು,ರಾತ್ರಿ ವೇಳೆ ನಿರಂತರವಾಗಿ ಮರಳು ಸಾಗಾಟ ಆರಂಭವಾಗಿದೆ.
ಯಾರಿಗೂ ಕಾಣದ ಹಾಗೆ ಕಾಡಲ್ಲಿ ಸಂಗ್ರಹ ಮಾಡಿ ರಾತ್ರಿಯ ವೇಳೆ ಗ್ರಾಹಕರಿಗೆ ಪೂರೈಕೆ ಮಾಡುತ್ತಿರುವುದು ಸ್ಥಳೀಯರ ಮಾತು.
ಗಣಿ ಇಲಾಖೆಯ ಅಧಿಕಾರಿಗಳು, ಪೊಲೀಸರಿಗೂ ಮಾಹಿತಿ ಇದ್ದರೂ ಜಾಣ ಮೌನದ ರೀತಿ ನರ್ತಿಸುತ್ತಿದ್ದಾರೆ.
ಸುಬ್ರಹ್ಮಣ್ಯ ಅರಣ್ಯ ಅಧಿಕಾರಿಗಳು ರಸ್ತೆ ಬಂದ್ ಮಾಡಿದರೂ ಪುನಃ ರಸ್ತೆ ಓಪನ್ ಮಾಡಿ ಮರಳು ಸಾಗಾಟ ನಡೆಸುತ್ತಿದ್ದು,ಸ್ಥಳೀಯ ಪಂಚಾಯತ್ಗೆ ಲಕ್ಷಗಟ್ಟಲೆ ತೆರಿಗೆ ವಂಚನೆಯ ಆರೋಪ ಬಂದಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಸರಿಯಾದ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.


