Friday, March 13, 2026
Flats for sale
Homeರಾಜಕೀಯನವದೆಹಲಿ : ಹಳೆಯ ಕೇಸ್ ನ್ನು ಕೆದಕಿದಕ್ಕೆ ಸಿಎಂ,ಡಿಸಿಎಂ ಗೆ ಕೈ ವರಿಷ್ಠರ ತರಾಟೆ.

ನವದೆಹಲಿ : ಹಳೆಯ ಕೇಸ್ ನ್ನು ಕೆದಕಿದಕ್ಕೆ ಸಿಎಂ,ಡಿಸಿಎಂ ಗೆ ಕೈ ವರಿಷ್ಠರ ತರಾಟೆ.

ನವದೆಹಲಿ : ಕೋಲು ಕೊಟ್ಟು ಪೆಟ್ಟು ತಿನ್ನುವುದೆಂದರೆ ಇದೆ ,ಸರಕಾರ ಹಿಂದೂ ಕಾರ್ಯಕರ್ತರ ಮೇಲಿನ ಹಳೆ ಕೇಸುಗಳ ಮರುತನಿಕೆ ಮಾಡಿ ಬಂದಿಸಿದ ಕಾರಣ ಲೋಕಸಭೆ ಚುನಾವಣೆಯ ದೃಷ್ಟಿಯಿಂದ ದೊಡ್ಡ ಹೊಡೆತ ಎಂಬುದು ವರಿಷ್ಠರ ಚರ್ಚೆ. ದಶಕಗಳ ಹಳೆಯ ಕೇಸ್‌ಗಳ ತನಿಖೆಗೆ ಮರುಜೀವ ಕೊಡುವ ಮೂಲಕ ಚುನಾವಣೆಯಂತಹ ನಿರ್ಣಾಯಕ ಸಂದರ್ಭದಲ್ಲಿ ಸರ್ಕಾರವೇ ವಿಪಕ್ಷಗಳಿಗೆ ಅಸ್ತ್ರ ಕೊಟ್ಟಂತಾಗಿದೆ ಎನ್ನುವ ವಿಷಯ ಕೈ ವರಿಷ್ಠರ ಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಗಿದೆ.

ಇದು ಒಂದು ಹಂತದಲ್ಲಿ ಇಂತಹ ನಿರ್ಧಾರದ ಅಗತ್ಯವಿತ್ತೇ? ಎಂದು ಸಿಎಂ ಮತ್ತು ಡಿಸಿಎಂ ವಿರುದ್ಧವೇ ಹೈಕಮಾಂಡ್ ಅತೃಪ್ತಿ ಹೊರಹಾಕಿದ್ದಾಗಿ ಹೇಳಲಾಗಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಹುಲ್‌ಗಾಂಧಿ,ರಣದೀಪ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್ ಭಾಗಿಯಾಗಿದ್ದು ಪ್ರಮುಖವಾಗಿ ಹಳೆಯ ಕೇಸ್‌ಗಳ ಮರು ತನಿಖೆ ವಿಷಯ ಪ್ರಸ್ತಾಪವಾಗಿದೆ. ಇದನ್ನೇ ಪ್ರತಿಪಕ್ಷ ಬಿಜೆಪಿ ಅಸ್ತçವಾಗಿಸಿಕೊಳ್ಳುತ್ತಿರುವುದು ಆಡಳಿತಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾದರೆ ಹೊಣೆ ಯಾರು? ಎಂಬ ಪ್ರಶ್ನೆ ಎದ್ದಿದ್ದಾಗಿ ಹೇಳಲಾಗಿದೆ. ಸಿಎಂ,ಡಿಸಿಎA ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಮುಂದಾದಾಗ ನೀವೇ ಸರಿಪಡಿಸಿ ಎಂದು ವರಿಷ್ಠರು ಅಸಮಾಧಾನ ವ್ಯಕ್ತಪಡಿಸಿದರೆಂದು ಮೂಲಗಳು ತಿಳಿಸಿವೆ.

ಇಂಡಿಯಾ ಒಕ್ಕೂಟದ ಮೂಲಕ ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಪಕ್ಷ ನಿಗಮ,ಮಂಡಳಿ ಅಧ್ಯಕ್ಷರು ಹಾಗು ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕದಂತಹ ಮಹತ್ವದ ತೀರ್ಮಾನ ಹೊರಬೀಳುವ ನಿರೀಕ್ಷೆ ಇತ್ತಾದರೂ ಗುರುವಾರ ನಡೆದ ವರಿಷ್ಠರ ಸಭೆ ಕೇವಲ ಚುನಾವಣೆ ಕಾರ್ಯತಂತ್ರದ ಚರ್ಚೆಗೆ ಸೀಮಿತವಾಗಿದೆ ಎಂದು ತಿಳಿದುಬಂದಿದೆ. ಹಾಲಿ ಸಚಿವರ ಸ್ಪರ್ಧೆ ಕುರಿತು ಸಮಾಲೋಚನೆ ನಡೆಯಿತಾದರೂ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಬದಲಿಗೆ ಸಚಿವರ ಸಹಿತ ಸಂಭಾವ್ಯ ಅಭ್ಯರ್ಥಿಗಳ ಸಾಮರ್ಥ್ಯದ ಬಗ್ಗೆ ಸಮೀಕ್ಷೆ ನಡೆಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆ ಇದೆ.

ದೆಹಲಿ ವರಿಷ್ಠರು ಪಾಲ್ಗೊಳ್ಳಲಿರುವ ಸಭೆಯಲ್ಲಿ ಸಿಎಂ, ಡಿಸಿಎಂ ಅಲ್ಲದೆ ಸಚಿವರು ಹಾಗೂ ಪಕ್ಷ ಪ್ರಮುಖರು ಭಾಗಿಯಾಗಲಿದ್ದು ಅಭ್ಯರ್ಥಿಗಳ ಕುರಿತು ಅಂತಿಮ ತೀರ್ಮಾನ ಹೊರಬೀಳುವ ಸಭೆ ಜ.10 ರಂದು ಬೆಂಗಳೂರಿನಲ್ಲಿ ನಡೆಯಲಿದೆ.ನಿಗಮ,ಮಂಡಳಿ ಅಧ್ಯಕ್ಷರ ಪಟ್ಟಿ ವರಿಷ್ಠರ ಕೈ ಸೇರಿದ್ದು ಮತ್ತೊಂದು ಸುತ್ತಿನ ಪರಾಮರ್ಶೆ ಬಳಿಕ ಸಂಕ್ರಾAತಿ ಹೊತ್ತಿಗೆ ಹೊರಬೀಳುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular