ನವದೆಹಲಿ : ದಿಢೀರ್ ಬೆಳವಣಿಗೆಯಲ್ಲಿ ಉಪರಾಷ್ಟçಪತಿ ಸ್ಥಾನಕ್ಕೆ ಜಗದೀಶ್ ಧನ್ ಕರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿರುವ ಸ್ಥಾನಕ್ಲೆ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದ್ದು ಸೆಪ್ಟೆಂಬರ್ 9 ರಂದು 17 ನೇ ಉಪ ರಾಷ್ಟçಪತಿ ಆಯ್ಕೆಗೆ ಮತದಾನ ನಡೆಯಲಿದೆ.
ಉಪರಾಷ್ಟçಪತಿ ಸ್ಥಾನಕ್ಕೆ ಮುಂದಿನ ತಿAಗಳು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಇದೇ 21ರಂದು ಕಡೆಯ ದಿನವಾಗಿದೆ. ಸೆಪ್ಟೆಂಬರ್ 9 ರಂದು ಮತದಾನ ನಡೆಯಲಿದ್ದು ಅಂದೇ ಮತ ಎಣಿಕೆಯು ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಸೆಪ್ಟಂಬರ್ 9 ರಂದು ನಡೆಯಲಿರುವ ಚುನಾವಣೆಯಲ್ಲಿ ಆಯ್ಕೆಯಾಗುವ ಉಪರಾಷ್ಟçಪತಿಗಳು ಮುಂದಿನ ಐದು ವರ್ಷಗಳ ಕಾಲ ಅಧಿಕಾರದಲ್ಲಿರಲಿದ್ದಾರೆ. ಭಾರತೀಯ ಸಂವಿಧಾನದ 66 ನೇ ವಿಧಿಯ ಪ್ರಕಾರ ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಸದಸ್ಯರು ಮತ್ತು ನಾಮ ನಿರ್ದೇಶಕ ಸದಸ್ಯರು ಉಪರಾಷ್ಟçಪತಿ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹತೆ ಪಡೆದಿದ್ದು ರಹಸ್ಯ ಮತದಾನದ ಮೂಲಕ ಮತ ಚಲಾಯಿಸಲಿದ್ದಾರೆ.ಅಧಿಕಾರದಲ್ಲಿರುವ ಉಪರಾಷ್ಟçಪತಿ ರಾಜೀನಾಮೆ ಸೇರಿದಂತೆ ಇನ್ನಿತರ ಕಾರಣಗಳಿಂದ ಸ್ಥಾನ ತೆರವಾದರೆ ಉಪರಾಷ್ಟçಪತಿಯ ಆಯ್ಕೆ 5 ವರ್ಷಗಳಿಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾದ ಮೊದಲ ದಿನವೇ ದಿಡೀರ್ ಬೆಳವಣಿಗೆಯಲ್ಲಿ ಉಪರಾಷ್ಟçಪತಿ ಜಗದೀಪ್ ಧನಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಅವರ ಅವಧಿ ಇನ್ನೂ ಎರಡು ವರ್ಷ ಅಂದರೆ 2027 ೭ರ ತನಕ ಸಮಯವಿತ್ತು. ಉಪರಾಷ್ಟçಪತಿ ಸ್ಥಾನಕ್ಕೆ ಜಗದೀಪ್ ಧನಕರ್ ಅವರು ನೀಡಿದ ರಾಜೀನಾಮೆಯನ್ನು ರಾಷ್ಟçಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದರು ಜೊತೆಗೆ ಕೇಂದ್ರ ಗೃಹ ಸಚಿವಾಲಯವೂ ಕೂಡ ಉಪರಾಷ್ಟçಪತಿ ಸ್ಥಾನ ಖಾಲಿಯಾಗಿದೆ ಎನ್ನುವ ಕುರಿತು ೨೨ರಂದು ಅಧಿಸೂಚನೆ ಹೊರಡಿಸಿತ್ತು.ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಉಪರಾಷ್ಟçಪತಿ ಚುನಾವಣೆಗೆ ಸಿದ್ಧತೆ ಮಾಡಿ ಕೊಂಡಿದ್ದು ಇದೀಗ ಚುನಾವಣೆ ದಿನಾಂಕ ಘೋಷಣೆ ಮಾಡಿದೆ ಉಪ ರಾಷ್ಟçಪತಿ ಸ್ಥಾನ ಆಡಳಿತರೂಢ ಎನ್ ಡಿಎ ಮೈತ್ರಿಕೂಟದ ಪಾಲಾಗುವುದು
ಬಹುತೇಕ ಖಚಿತವಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎನ್ಡಿಎ ಮೈತ್ರಿಕೂಟದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪರಾಷ್ಟçಪತಿ ಎನ್ ಡಿಎ ಪಾಲಾಗುವುದು ಖಚಿತವಾಗಿದೆ. 17.ನೇ ಉಪ ರಾಷ್ಟçಪತಿ ಆಯ್ಕೆ 17 ನೇ ಉಪರಾಷ್ಟçಪತಿ ಚುನಾವಣೆ 1952 ರ ರಾಷ್ಟçಪತಿ ಮತ್ತು ಉಪರಾಷ್ಟçಪತಿ ಚುನಾವಣಾ ಕಾಯ್ದೆಯಲ್ಲಿ ನಿಗದಿಪಡಿಸಿದ ನಿಯಮಗಳ ಪ್ರಕಾರ ನಡೆಯಲಿದೆ. 2022 ರಿಂದ ಈ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ 74 ವರ್ಷದ ಜಗದೀಪ್ ಧನಕರ್ ಅವರು ರಾಜ್ಯಸಭಾ ಸಭಾಪತಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. “ಆರೋಗ್ಯದ ಕಡೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ, ಉಪ ರಾಷ್ಟçಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


