Friday, March 13, 2026
Flats for sale
Homeದೇಶನವದೆಹಲಿ : ಸಂಸತ್ ಕಲಾಪಕ್ಕೆ ಅಡ್ಡಿ, 6 ಜನರ ಬಂಧನ ,ನಕ್ಸಲ್ ಸಿದ್ದಾಂತ ,ಕ್ರಾಂತಿಯ ಭ್ರಮೆ...

ನವದೆಹಲಿ : ಸಂಸತ್ ಕಲಾಪಕ್ಕೆ ಅಡ್ಡಿ, 6 ಜನರ ಬಂಧನ ,ನಕ್ಸಲ್ ಸಿದ್ದಾಂತ ,ಕ್ರಾಂತಿಯ ಭ್ರಮೆ ಇವರ ಜೀವನಕ್ಕೆ ಮುಳುವಾಹಿತೆ !

ನವದೆಹಲಿ : ನಕ್ಷಲ್ ಸಿದ್ದಾಂತ ಹಾಗೂ ಕ್ರಾಂತೀಯ ಭ್ರಮೆಯಿಂದ ಈ 6 ಜನರ ಭವಿಷ್ಯ ಹಾಳಾಯಿತೇ ಎಂಬುದು ಜನರ ಮಾತು . ಪಾರ್ಲಿಮೆಂಟ್ ಮೇಲೆ ಭದ್ರತಾ ಲೋಪ ಪ್ರಕರಣದಲ್ಲಿ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ಇವರು ಭಗತ್ ಸಿಂಗ್ ಫ್ಯಾನ್ಸ್ ಎನ್ನುವ ಫೇಸ್ ಬುಕ್ ಮೂಲಕ ಒಂದಾಗಿದ್ದು, ಕ್ರಾಂತಿಯ ಭ್ರಮೆಯಲ್ಲಿದ್ದರು. ಅಡ್ಡಾದಿಡ್ಡಿ ಆಲೋಚನೆಗಳಿಂದಾಗಿ ಜೀವನ ರೂಪಿಸಿಕೊಳ್ಳುವಲ್ಲಿ ಎಡವಿದ್ದರು.

ಸಂಸತ್‌ನಲ್ಲಿ ಒಳನುಗ್ಗಲು ವರ್ಷಗಳ ಕಾಲ ಪೂರ್ವ ಸಿದ್ಧತೆ ನಡೆಸಿದ್ದರು ಎಂದು ತಿಳಿದು ಬಂದಿದೆ ಪ್ರಮುಖ ಮೈಸೂರಿನ ಆರೋಪಿಯು ಮನೋರಂಜನ್ ವಿವರ ಇಲ್ಲಿದೆ.

ಮನೋರಂಜನ್ ಮೈಸೂರಿನ ವಿಜಯನಗರದ ನಿವಾಸಿ. ಪುಸ್ತಕಗಳನ್ನು ಓದುವ ಹವ್ಯಾಸವಿದ್ದ ಈತ, ಈತನ ತಂದೆ ದೇವರಾಜೇಗೌಡ ಹೇಳುವಂತೆ ಸಮಾಜದಲ್ಲಿನ ಬಡತನ, ನಿರುದ್ಯೋಗ, ಅಸಮಾನತೆ ಇತ್ಯಾದಿಗಳಿಂದ ಬೇಸತ್ತಿದ್ದ. ಮೈಸೂರಿನ ಸೆಂಟ್ ಜೋಸೆಫ್ ಶಾಲೆ, ಮರಿಮಲ್ಲಪ್ಪ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ ಬೆಂಗಳೂರಿನ ಬಿಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿAಗ್ ಪದವಿಗೆ ಸೇರಿದ್ದರೂ ಪದವಿಯನ್ನು ಈತ ಪೂರ್ಣಗೊಳಿಸಿಲ್ಲ.

ಸದ್ಯ 33 ವರ್ಷದ ಯುವಕನಾದ ಮನೋರಂಜನ್ ಅವಿವಾಹಿತ. ಈತ ಸಂಸತ್ತಿಗೆ ನುಗ್ಗಿ ಅಲ್ಲಿ ಬಣ್ಣದ ಪಟಾಕಿ ಸಿಡಿಸುವ ಮೂಲಕ ದೇಶದಾದ್ಯಂತ ಸುದ್ದಿಯಾಗಿದ್ದಾನೆ. ಈತ ಮತ್ತು ಉಳಿದ ಸಹಚರರು ಸಂಸತ್ತು ಪ್ರವೇಶಿಸಲು ಬಳಸಿದ್ದು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್‌ಸಿAಹ ಅವರು ನೀಡಿರುವ ಪಾಸನ್ನು. ಇಷ್ಟಕ್ಕೂ ಈತನ ತಂದೆ ದೇವರಾಜೇಗೌಡರು ಸಂಸದ ಪ್ರತಾಪ್‌ಸಿAಹ ಗೆಲುವಿಗಾಗಿ ದುಡಿದಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇವರೂ ಸಹ ಪ್ರತಾಪ್‌ಸಿಂಹ ಅವರ ಮೂಲ ಜಿಲ್ಲೆಯಾದ ಹಾಸನದವರು. ತಮ್ಮ ಪುತ್ರ ಮನೋರಂಜನ್ ಪ್ರಧಾನಿ ಮೋದಿ ಮತ್ತು ಬಿಜೆಪಿ ಬಗ್ಗೆ ಆಸಕ್ತಿ ಹೊಂದಿದ್ದ. ಮೋದಿಯವರ ನಾಯಕತ್ವ ದೇಶಕ್ಕೆ ಬೇಕು ಎನ್ನುತ್ತಿದ್ದ ಎಂದೂ ಸಹ ಗೌಡರು ಬೊಟ್ಟುಮಾಡುತ್ತಾರೆ.

ರೈತರ ಪ್ರತಿಭಟನೆಯಲ್ಲಿಯೂ ಭಾಗಿಯಾಗಿದ್ದ ಮಹಿಳೆ
ಸಂಸತ್ತಿನ ಹೊರಗೆ ಹೊಗೆ ಬಾಂಬ್ ಸಿಡಿಸಿ ಘೋಷಣೆಗಳನ್ನು ಕೂಗಿ ಬಂಧನಕ್ಕೆ ಒಳಗಾಗಿರುವ ನೀಲಂ, ಹರಿಯಾಣದ ಜಿಂದ್ ಜಿಲ್ಲೆಯ ಗಾಶೋ ಖುರ್ದ್ ಎನ್ನುವ ಗ್ರಾಮದ ನಿವಾಸಿ. ಎಂಎ, ಬಿಎಡ್, ಎಂಎಡ್, ಎAಫಿಲ್ ಪದವಿಗಳನ್ನು ಪಡೆದಿದ್ದಾರೆ. ಸೆಂಟ್ರಲ್ ಎಲಿಜಿಬಿಲಿಟಿ ಟೆಸ್ಟ್(ಸಿಟಿಇಟಿ) ಮತ್ತು ನ್ಯಾಷನಲ್ಎ ಲಿಜಿಬಿಲಿಟಿ ಟೆಸ್ಟ್(ಎನ್‌ಇಟಿ) ಪರೀಕ್ಷೆಗಳಲ್ಲಿ ಪಾಸಾಗಿದ್ದಾಳೆ.

ಹರಿಯಾಣ ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್(ಎಚ್‌ಟಿಇಟಿ) ಅರ್ಹತೆ ಪಡೆದುಕೊಂಡು ಆರು ವರ್ಷ ಕಳೆದಿದ್ದು, ಇನ್ನೊಂದು ವರ್ಷದಲ್ಲಿ ಅದರ ಅವಧಿ ಮುಕ್ತಾಯಗೊಳ್ಳಲಿದೆ. ವಯಸ್ಸು ೩೭ ಆದರೂ, ಉದ್ಯೋಗ ಹುಡುಕಿಕೊಳ್ಳುವುದಲ್ಲಿ ನಪಾಸಾಗಿದ್ದಾಳೆ, ಹೀಗಾಗಿ ನಿರುದ್ಯೋಗಿ. ಸಿವಿಲ್ ಸರ್ವೀಸಸ್ ಪರೀಕ್ಷೆಗಳಿಗೂ ತಯಾರಿ ನಡೆಸುತ್ತಿದ್ದ ನೀಲಂ, ಪರೀಕ್ಷೆಗಳ ತಯಾರಿಗೆ ಹಿಸಾರ್‌ನಲ್ಲಿ ಕೊಠಡಿ ಮಾಡಿಕೊಂಡಿದ್ದಳು. ಭಗತ್ ಸಿಂಗ್ ರೀತಿಯಲ್ಲೇ ತನ್ನನ್ನು ಭ್ರಮಿಸಿಕೊಂಡಿದ್ದ ಆಕೆ, ತನ್ನನ್ನು ನೀಲಂ ಆಜಾದ್ ಎಂದು ಕರೆದುಕೊಳ್ಳುತ್ತಿದ್ದಳು. ರೈತ ಚಳವಳಿ ಸೇರಿದಂತೆ ವಿವಿಧ ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡಿದ್ದಳು. ಮಹಿಳಾ ಕುಸ್ತಿಪಟುಗಳು ನಡೆಸಿದ ಪ್ರತಿಭಟನೆಯಲ್ಲಿ ಮೇ ೨೮ರಂದು ಜಂತರ್ಮ Aತರ್‌ನಲ್ಲಿ ಭಾಗವಹಿಸಿ ಅವರಿಗೆ ಬೆಂಬಲಿಸಿದ್ದಳು.

ನರೇಗಾ ಅಕ್ರಮವನ್ನು ಬಯಲಿಗೆಳೆದಿದ್ದಳು. ಈ ಎಲ್ಲ ಚಟುವಟಿಕೆಗಳಿಂದ ಅವಳನ್ನು ಕ್ರಾಂತಿಕಾರಿ ಹುಡುಗಿ ಎಂದೇ ಗುರುತಿಸಲಾಗುತ್ತಿತ್ತು. ಅವರ ತಂದೆ ಮಿಠಾಯಿ ಅಂಗಡಿ ಇಟ್ಟುಕೊಂಡಿದ್ದಾರೆ. ಘಟನೆಗೆ ಎರಡು ದಿನ ಮೊದಲು ಅವಳು ಊರಿಗೆ ಬಂದು ಹೋಗಿದ್ದಳು.

ಮಾಸ್ಟರ್‌ಮೈಂಡ್‌ಗಾಗಿ ಹುಡುಕಾಟ…

ಇಡೀ ಘಟನೆಯ ಮಾಸ್ಟರ್ ಮೈಂಡ್ ಲಲಿತ್ ಝಾ. ಇನ್ನೂ ಆತನಿಗಾಗಿ ಹುಡುಕಾಟ ನಡೆದಿದೆ.ರಾಜಸ್ಥಾನದ ಹಲವೆಡೆ ಶೋಧ ತಂಡ ದಾಳಿಗಳನ್ನು ನಡೆಸಿದೆ. ಲಲಿತ್ ಬಿಹಾರ ರಾಜ್ಯದವನು. ಆತನ ಮೊಬೈಲ್‌ನಿಂದ ಕಡೇ ಕರೆ ರಾಜಸ್ಥಾನದಿಂದ ಬಂದಿದೆ. ಸAಸತ್‌ನಲ್ಲಿ ಗದ್ದಲ ಎಬ್ಬಿಸಿದ ತಂಡವನ್ನು ತಾತ್ಕಾಲಿಕವಾಗಿ ಗುರುಗ್ರಾಮದ ಮನೆಯೊಂದರಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದ.

ಪಾರ್ಲಿಮೆಂಟ್‌ವರೆಗೆ ಅವರನ್ನು ಕರೆದುಕೊಂಡು ಬಂದಿದ್ದ. ಘಟನೆ ನಡೆಯುತ್ತಿದ್ದಂತೆ, ಸಂಸತ್ ಆವರಣಲ್ಲಿ ಪ್ರತಿಭಟನೆ ನಡೆಸಿದ ಇಬ್ಬರು ಮತ್ತು ಲೋಕಸಭೆ ಅಂಗಳಕ್ಕೆ ಧುಮುಕಿದ ಇಬ್ಬರ ಮೊಬೈಲ್ ಫೋನ್, ಬ್ಯಾಗುಗಳ ಸಮೇತ ನಾಪತ್ತೆಯಾಗಿದ್ದಾನೆ.

ಸೇನೆಗೆ ಸೇರಬೇಕೆಂದಿದ್ದ..

ನೀಲA ಜೊತೆಯಲ್ಲಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಮತ್ತೊಬ್ಬ ಯುವಕ ೨೫ ವರ್ಷದ ಅನಮೋಲ್ ಶಿಂದೆ. ಹನ್ನೆರಡನೇ ತರಗತಿಗೆ ಓದು ಮುಕ್ತಾಯಗೊಳಿಸಿದ್ದ ಜೋಶಿ, ಸೇನೆ ಅಥವಾ ಪೊಲೀಸ್ ವೃತ್ತಿಗೆ ಸೇರ್ಪಡೆಯಾಗಲು ತಯಾರಿ ನಡೆಸಿದ್ದ. ಆದರೆ ನಾಸಿಕ್‌ನಲ್ಲಿ ಇತ್ತೀಚೆಗೆ ನಡೆದ ರ‍್ಯಾಲಿಯಲ್ಲಿ ಭಾಗವಹಿಸಿರಲಿಲ್ಲ. ತಂದೆ ತಾಯಿ ಇಬ್ಬರೂ ಲಾತೂರ್ ಜಿಲ್ಲೆಯ ಜರಿ ಭದ್ರಕ್ ಎನ್ನುವ ಗ್ರಾಮದಲ್ಲಿ ಕೃಷಿ ಕಾರ್ಮಿಕರು.

ಉತ್ತರ ಪ್ರದೇಶದ ಸಾಗರ್‌ಗೆ ಬೆಂಗಳೂರು ನಂಟು…

ಲೋಕಸಭೆಯ ಅಂಗಳಕ್ಕೆ ಧುಮುಕಿದ ಸಾಗರ್ ಶರ್ಮಾ. ಲಖನೌದ ರಾಮನಗರದ ನಿವಾಸಿ.ಮನೆಯಲ್ಲಿನ ಹಣಕಾಸು ಮುಗ್ಗಟ್ಟಿನಿಂದಾಗಿ ಹನ್ನೆರಡನೇ ತರಗತಿಗೆ ಓದು ಮುಗಿಸಿದ್ದ. ನಂತರ ಬೆAಗಳೂರು ಸೇರಿಕೊಂಡಿದ್ದ ಸಾಗರ್, ಫ್ಲೋರ್ ಮಿಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ.ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಲಖನೌಗೆ ವಾಪಸ್ಸಾಗಿ, ಕಳೆದ ಮೂರು ತಿಂಗಳಿನಿAದ ಇ-ರಿಕ್ಷಾ ಒಂದನ್ನು ಬಾಡಿಗೆಗೆ ಪಡೆದು ಓಡಿಸುತ್ತಿದ್ದ. ದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗುವುದಾಗಿ ಹೇಳಿ ಎರಡು ದಿನಗಳ ಹಿಂದೆ ಮನೆಯಿಂದ ಆತ ಹೊರಬಿದ್ದಿದ್ದ. ಸಾಗರ್ ತಂದೆ ರೋಷನ್‌ಲಾಲ್ ಶರ್ಮಾ ಒಬ್ಬ ಬಡಗಿ. ಮೂಲತಃ ಉತ್ತರ ಪ್ರದೇಶದ ಉನ್ನಾವ್ಜಿ ಲ್ಲೆಗೆ ಸೇರಿದವರು.

ಒಂದಷ್ಟು ವರ್ಷಗಳ ಕಾಲ ದೆಹಲಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಹತ್ತು ವರ್ಷಗಳ ಹಿಂದೆ ಲಖನೌಗೆ ವಾಪಸ್ಸಾಗಿದ್ದರು. ಸಾಗರ್ ದೆಹಲಿಯಲ್ಲೇ ಹುಟ್ಟಿದ್ದು, ಹೈಯರ್ ಸೆಕೆಂಡರಿ ಶಿಕ್ಷಣವನ್ನು ಲಖನೌದಲ್ಲಿ ಮುಗಿಸಿದ್ದ. ಸಾಗರ್‌ನ ಸೋಷಿಯಲ್ ಮೀಡಿಯಾ ಪೋಸ್ಟ್ಗಳಲ್ಲಿ ಭಗತ್ ಸಿಂಗ್, ಚೆ ಗುವೆರಾ ಅವರ ಹೇಳಿಕೆಗಳು ತುಂಬಿವೆ. ಒಂದು ಪೋಸ್ಟ್ನಲ್ಲಿ, ಯುವಕರು ಕ್ರಿಕೆಟ್, ಬಾಲಿವುಡ್ ಮತ್ತು ಮೂಲಭೂತವಾದದಿಂದ ಅಂಧರಾಗಿದ್ದಾರೆ. ‘ನಾಳೆ ದೇಶವನ್ನು ಮುನ್ನಡೆಸಬೇಕಾದವರನ್ನು ಅಂಧರನ್ನಾಗಿ ಮಾಡಲು ಪ್ರಯತ್ನ ನಡೆದಿದೆ’ ಎನ್ನುವ ಭಗತ್ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿದ್ದಾನೆ.

ಆಶ್ರಯ ನೀಡಿದ ವಿಕ್ಕಿ ಶರ್ಮಾ…

ದಾಳಿಗೂ ಮುಂಚಿತವಾಗಿ ಆರೋಪಿಗಳು ಬಂದು ಇಳಿದುಕೊAಡಿದ್ದು ಗುರುಗ್ರಾಮದಲ್ಲಿನ ವಿಕ್ಕಿಶರ್ಮಾ ಮನೆಯಲ್ಲಿ. ಸ್ಥಿರವಾದ ಉದ್ಯೋಗ ಇಲ್ಲದ ವಿಕ್ಕಿ, ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕೆಲವೊಮ್ಮೆ ಡ್ರೆöÊವಿಂಗ್ ಕೆಲಸ ಕೂಡ ಮಾಡಿದ್ದಾನೆ. ಜೊತೆಗೆ ಕುಡಿತದ ಚಟವೂ ಇತ್ತು. ಹೆಂಡತಿ ರಾಖಿಯನ್ನು ಆಗಾಗ ಹೊಡೆಯುತ್ತಿದ್ದು, ನೆರೆಹೊರೆಯವರಿಗೆಲ್ಲ ಗೊತ್ತಿರುವ ಸಂಗತಿ. ಈಗ ಇಬ್ಬರೂ ಪೊಲೀಸ್ ವಶದಲ್ಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular