ನವದೆಹಲಿ : ಉತ್ತರಭಾರತದ ಜಮ್ಮು-ಕಾಶ್ಮೀರ, ಹರಿಯಾಣ ಹಾಗೂ ಉತ್ತರಪ್ರದೇಶದಲ್ಲಿ ವ್ಯಾಪಿಸಿರುವ ಬಿಳಿ ಕಾಲರ್ ಭಯೋತ್ಪಾದಕರ ಜಾಲವನ್ನು ಈಗ ಭದ್ರತಾ ಸಂಸ್ಥೆಗಳು ಭೇದಿಸಿದ್ದು ಮೂವರು ವೈದ್ಯರೂ ಸೇರಿದಂತೆ ಎಂಟು ಶಂಕಿತ ಆರೋಪಿಗಳನ್ನು ಬಂಧಿಸುವುದರೊAದಿಗೆ ೩೨ ಕ್ವಿಂಟಲ್ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ.
ಅಧಿಕಾರಿಗಳ ಪ್ರಕಾರ, ಲಖನೌ ನಿವಾಸಿ ಡಾ ಶಾಹೀನ್ ಎಂಬಾಕೆಯನ್ನು ಸೋಮವಾರ ಫರೀದಾ ಬಾದ್ ನಲ್ಲಿ ಬಂಧಿಸಲಾಗಿದೆ. ಇದೇ ವೇಳೆ ಪುಲ್ವಾಮಾ ಕೊಯಿಲ್ ನಿವಾಸಿ ಡಾ.ಮುಝಮಿಲ್ ಅಹ್ಮದ್ ಗನೈ ಹಾಗೂ ಕುಲ್ಗಾಮಾದ ವಾನ್ಫೋರಾ ನಿವಾಸಿ ಡಾ. ಅದಿಲ್ ಸಹಿತ ಒಟ್ಟು ಎಂಟು ಶಂಕಿತ ಉಗ್ರರು ಭದ್ರತಾಪಡೆಯ ಬಲೆಗೆ ಬಿದ್ದಿದ್ದಾರೆ.
ಬಂಧಿತರಲ್ಲಿ ವೃತ್ತಿಪರ ಸಿಬ್ಬಂದಿಯಲ್ಲದೆ ವೈದ್ಯರಂತಹವರೂ ಸೇರಿರುವುದು ಇಲ್ಲಿ ಗಮನಾರ್ಹ. ಜಮ್ಮು-ಕಾಶ್ಮೀರ ಪೊಲೀಸರು ಡಾ. ಶಾಹೀನ್ ಳನ್ನು ಫರೀದಾಬಾದ್‌ನಲ್ಲಿ ಬಂಧಿಸಿ ಹೆಚ್ಚಿನವಿಚಾರಣೆಗೆ ಶ್ರೀನಗರಕ್ಕೆ ಕರೆದೊಯ್ದಿದ್ದಾರೆ. ಇದೇ ವೇಳೆ ಹತ್ತು ದಿನಗಳ ಹಿಂದೆ ಬಂಧನ ಕ್ಕೊಳಗಾಗಿದ್ದ ಡಾ. ಮುಝಮಿಲ್ ಇದೇ ನಗರದ ಬಾಡಿಗೆ ಮನೆಯಲ್ಲಿ ಅವಿತಿರಿಸಿದ್ದ ಅಪಾರ ಪ್ರಮಾಣದ ಶಸ್ತಾçಸ್ತç ಹಾಗೂ ಸ್ಫೋಟಕಗಳನ್ನೂ ವಶಪಡಿಸಿಕೊಂಡಿದ್ದಾರೆ.
ಎಲ್ಲಿ, ಏನೇನು ವಶ?
ಕಾಶ್ಮೀರ, ಹರಿಯಾಣ, ಉತ್ತರ ಪ್ರದೇಶದಲ್ಲಿ ಶಂಕಿತರ ಬಂಧನ ,ಲೇಡಿ ಡಾಕ್ಟರ್ ಬಳಿ ಎ.ಕೆ 47 ಪತ್ತೆ ,360 ಕೇಜಿ ಅಮೋನಿಯಂ ನೈಟ್ರೇಟ್, 29೦೦ ಕೇಜಿ ಇತರ ಸ್ಫೋಟಕ ವಶ,2೦ ಟೈಮರ್‌ಗಳು, 4 ಬ್ಯಾಟರಿ, ರಿಮೋಟ್ ಕಂಟ್ರೋಲ್, 5 ಕೇಜಿ ಭಾರ ಲೋಹ, ವಾಕಿ-ಟಾಕಿ ಜಪ್ತಿ 83 ಜೀವಂತ ಗುಂಡು, 1 ಪಿಸ್ತೂಲ್, 12 ಸೂಟ್‌ಕೇಸ್‌ಗಳು ಕೂಡ ವಶಕ್ಕೆ ಪಡೆಯಲಾಗಿದೆ.


