ನವದೆಹಲಿ : ಲೋಕಸಭೆಯಲ್ಲಿ ಸೋಮವಾರ ಪ್ರತಿ ಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಿವೃತ್ತ ಸೇನಾ ದಂಡನಾಯಕ ಜನರಲ್ ನರವಣೆ ಅವರ ಅಪ್ರಕಟಿತ' ಗ್ರಂಥವೊAದರ ಭಾಗವೊಂದನ್ನು ಉಲ್ಲೇಖಿಸಲು ಹೋದಾಗ, ಬಿಜೆಪಿಯಿಂದ ವಿರೋಧ ವ್ಯಕ್ತವಾಗಿದ್ದು, ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಸಭಾಧ್ಯಕ್ಷರು ಸದನವನ್ನೇ ಮುಂದೂಡಬೇಕಾದ ಪರಿಸ್ಥಿತಿ ಏರ್ಪಟ್ಟಿತು. ರಾಷ್ಟçಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಕಲಾಪದಲ್ಲಿ ರಾಹುಲ್, ಸೇನೆಯ ನಿವೃತ್ತ ಜನರಲ್ ಎಂ.ಎA. ನರವಣೆ ಅವರ ಅಪ್ರಕಟಿತಸ್ಮರಣೆ’ ಕೃತಿಯಲ್ಲಿ ಬರೆದಿದೆ ಎನ್ನಲಾದ ಭಾಗವನ್ನು ಉಲ್ಲೇಖಿಸಲು ಹೊರಟರು. ಭಾರತದ ಡೋಕ್ಲಾಮ್ ಪ್ರದೇಶದಲ್ಲಿ ಚೀನಾ ಟ್ಯಾಂಕ್‌ಗಳು ನುಸುಳಿದ್ದನ್ನು ಅದರಲ್ಲಿ ಇತ್ತು. ಆದರೆ ಆ ಭಾಗವನ್ನು ಉಲ್ಲೇಖಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಬಿಜೆಪಿಯ ಸದಸ್ಯರು ಅವಕಾಶ ನೀಡಲಿಲ್ಲ. ಆ ಕೃತಿಯೇ ಇನ್ನೂ ಪ್ರಕಟವಾಗಿಲ್ಲ ಎಂದು ಸದನದ ಗಮನಕ್ಕೆ ತಂದು, `ರಾಹುಲ್ ಸದನವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ’.
ಎಂದು ಪ್ರಬಲ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯ ಕೆ.ಸಿ.ವೇಣುಗೋಪಾಲ್ ಮತ್ತಿತರ ಸದಸ್ಯರು ಹಾಗೂ ಪ್ರತಿಪಕ್ಷಗಳ ಸದಸ್ಯರು ರಾಹುಲ್ ಬೆಂಬಲಕ್ಕೆ ಬAದರೂ, ಪ್ರಕಟವಾಗದ ಪುಸ್ತಕದ ಭಾಗಗಳನ್ನು ಉಲ್ಲೇಖ ಮಾಡುವಂತಿಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ರೂಲಿಂಗ್ ನೀಡಿದರು. ಆಗ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಇದಕ್ಕೂ ಮೊದಲ ಮಾತನಾಡಿದ್ದ ತೇಜಸ್ವಿ ಸೂರ್ಯ, ಬಿಜೆಪಿಯ ಸಾಧನೆಗಳನ್ನು ವಿವರಿಸುತ್ತಾ ಹಲವು ಉದಾಹರಣೆಗಳ ಮೂಲಕ ಹೇಗೆ ಅದು ಕಾಂಗ್ರೆಸ್‌ಗಿAತಲೂ ಭಿನ್ನವಾಗಿದೆ ಎಂದು ವಿವರಿಸಿದರು. ಅಲ್ಲದೆ ತಮ್ಮದು ದೇಶಭಕ್ತ ಪಕ್ಷ ಎಂದು ಹೇಳಿದ್ದರು. ನಂತರದ ಅವಕಾಶ ರಾಹುಲ್ ಗಾಂಧಿ ಅವರದ್ದಾಗಿತ್ತು. ಆಗ ದೇಶಭಕ್ತಿಯ ಕುರಿತು ಬಿಚ್ಚಿಡುವುದಾಗಿ ನರವಣೆ ಪುಸ್ತಕದ ಕುರಿತು ಮ್ಯಾಗ್‌ಜೈನ್ ಒಂದರಲ್ಲಿ ಪ್ರಕಟವಾಗಿರುವ ಲೇಖನವನ್ನು ಉಲ್ಲೇಖಿಸಲು ಹೋದಾಗ ಈ ಗದ್ದಲ ಉಂಟಾಯಿತು. ಸ್ಪೀಕರ್ ಓಂಬಿರ್ಲಾ ಪದೇಪದೇ `ಸದನಕ್ಕೆ ಸಂಬAಧವಿಲ್ಲದ ಯಾವುದೇ ಪುಸ್ತಕ ಅಥವಾ ಪತ್ರಿಕೆಯ ತುಣುಕುಗಳನ್ನು ಸದನದಲ್ಲಿ ಉಲ್ಲೇಖಿಸುವಂತಿಲ್ಲ’ ಎಂದು ತಾಕೀತು
ಮಾಡುತ್ತಿದ್ದರು.


