ನವದೆಹಲಿ : ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡಿ, ಅವರ ಸದಸ್ಯತ್ವ ರದ್ದತಿ ಕೋರಿದ ನಿರ್ಣಯ ಅಂಗೀಕರಿಸುವ ಸಲುವಾಗಿ ಬಿಜೆಪಿ ಸಂಸತ್ಸದಸ್ಯ ನಿಶಿಕಾಂತ್ ದುಬೆ ಈಗ ಲೋಕಸಭಾ ಸಭಾಪತಿಗೆ ನೋಟಿಸ್ ಕಳುಹಿಸಿದ್ದಾರೆ.
ರಾಹುಲ್ ಅವರು ಸತ್ಯವನ್ನು ವಿರೂಪಗೊಳಿಸುತ್ತಿದ್ದಾರೆ ಮತ್ತು ದೇಶದ ಮಾನ ಹರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ಲೋಕಸಭಾ ಸದಸ್ಯತ್ವವನ್ನು ತಕ್ಷಣವೇ ರದ್ದುಗೊಳಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದೂ ನೋಟಿಸ್ನಲ್ಲಿ ಒತ್ತಾಯಿಸಿದ್ದಾರೆ. ಇದೊಂದು ಸ್ವತAತ್ರ ಪ್ರಸ್ತಾವನೆಯಾಗಿದ್ದು ಚರ್ಚೆಯಲ್ಲಿರುವ ಯಾವುದೇ ವಿಷಯಕ್ಕೂ ಸಂಬAಧಿಸಿಲ್ಲ. ಸ್ಪೀಕರ್ ಅನುಮೋದನೆ ನೀಡಿದರೆ ಮಾತ್ರ ಅದನ್ನು ಮಂಡಿಸಲು ಸಾಧ್ಯ. ಸ್ಪೀಕರ್ ಒಪ್ಪಿಗೆ ಕೊಟ್ಟರೆ ಸದನದಲ್ಲಿ ಚರ್ಚಿಸಿ ಮತಕ್ಕೆ ಹಾಕಬಹುದು


