Saturday, April 19, 2025
Flats for sale
Homeದೇಶನವದೆಹಲಿ : ಮುಂಬೈ ದಾಳಿಯ ಸಂಚುಕೋರ ಉಗ್ರ ತಹವ್ವುರ್ ರಾಣಾ ವಶಕ್ಕೆ, ಅಮೆರಿಕದಿಂದ ಭಾರತಕ್ಕೆ ಕರೆತಂದ...

ನವದೆಹಲಿ : ಮುಂಬೈ ದಾಳಿಯ ಸಂಚುಕೋರ ಉಗ್ರ ತಹವ್ವುರ್ ರಾಣಾ ವಶಕ್ಕೆ, ಅಮೆರಿಕದಿಂದ ಭಾರತಕ್ಕೆ ಕರೆತಂದ ಎನ್‌ಐಎ..!

ನವದೆಹಲಿ : 26/11 ರ ಮುಂಬೈ ಉಗ್ರ ದಾಳಿಯ ಮಾಸ್ಟರ್ ಮೈಂಡ್ ತಹವ್ವುರ್ ರಾಣಾನನ್ನು ಭಾರತಕ್ಕೆ ಕರೆತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದ್ದು, ಗುರುವಾರ ಸಂಜೆ 6.3೦ಕ್ಕೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ರಣಹೇಡಿಯಂತೆ ಬAದಿಳಿದಿದ್ದಾನೆ.

ಭಾರತದಲ್ಲಿ ಇಳಿದ ಕೂಡಲೇ ಆತನನ್ನು ಅಧಿಕೃತವಾಗಿ ಭಯೋತ್ಪಾದನಾ ವಿರೋಧಿ ಕಾಯ್ದೆ ಅನ್ವಯ ಬಂಧಿಸಲಾಯಿತು.ಹಸ್ತಾಂತರಕ್ಕೆ ತಡೆ ತರಲು ನೂರಾರು ಪ್ರಯತ್ನಗಳನ್ನು ಮಾಡಿದ್ದ ರಾಣಾ ಅಮೆರಿಕದಲ್ಲೇ ನೆಲೆಯೂರಲು ಮುಂದಾಗಿದ್ದ. ಆದರೆ ಭಾರತ-ಅಮೆರಿಕಗಳ ನಡುವಿನ ಯಶಸ್ವಿ ರಾಜತಾಂತ್ರಿಕತೆಯ ಫಲವಾಗಿ ರಾಣಾ ಕೊನೆಗೂ ಭಾರತಕ್ಕೆ ಬಂದಿದ್ದಾನೆ. ಅಮೆರಿಕದಲ್ಲಿರಲು ಯತ್ನಿಸಿದ್ದ ರಾಣಾನ ಕಡೆ ಅರ್ಜಿ ಅಲ್ಲಿನ ಸುಪ್ರೀಂ ಕೋರ್ಟಲ್ಲಿ ತಿರಸ್ಕೃತಗೊಂಡದ್ದರಿಂದ ಅವನನ್ನು ಭಾರತಕ್ಕೆ ಕಳುಹಿಸಲಾಯಿತು. ದೆಹಲಿಯಲ್ಲಿ ಇಳಿದ ಕೂಡಲೇ ಎನ್‌ಐಎ ಅವನನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಏತನ್ಮಧ್ಯೆ ತಹವ್ವುರ್ ರಾಣಾ ಪಾಕಿಸ್ತಾನಿ ಪ್ರಜೆಯಲ್ಲ, ಕೆನಡಾ ಪ್ರಜೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಫ್ಖತ್ ಅಲಿ ಖಾನ್ ಹೇಳಿದ್ದಾರೆ. ಪಾಕಿಸ್ತಾನದ ಪರವಾಗಿ ಸಂಚು ಹೂಡಿದ್ದ ಆತನನ್ನು, ಆ ದೇಶವೇ ಕೈಬಿಟ್ಟಂತಾಗಿದೆ. ಪಾಕಿಸ್ತಾನದಲ್ಲಿ ಅವಳಿಪೌರತ್ವಕ್ಕೆ ಅವ ಕಾಶವಿಲ್ಲ. ರಾಣಾ ಕೆನಡಾ ಪೌರತ್ವ ಪಡೆದಿದ್ದಾನೆ. ಆತ ದಶಕಗಳಿಂದಲೂ ಪಾಕಿಸ್ತಾನದ ಪೌರತ್ವ ನವೀಕರಿಸಲು ಯಾವುದೇ ಪ್ರಯತ್ನ ಮಾಡಿಲ್ಲ ಎನ್ನುವುದು ಸ್ಪಷ್ಟ ಎಂದಿದ್ದಾರೆ. ಅಮೆರಿಕದಿAದ ಬಂದಿಳಿದ ರಾಣಾನನ್ನು ಸದ್ಯಕ್ಕೆ ಎನ್‌ಐಎ ವಶಕ್ಕೆ ಪಡೆದು ಕೋರ್ಟ್ಗೆ ಹಾಜರು ಪಡಿಸಿದೆ. ವಿಚಾರಣಾ ಪ್ರಕ್ರಿಯೆ ಇನ್ನಷ್ಟೇ ಶುರುವಾಗಬೇಕು. ಮುಂದೆ ಉಗ್ರ ರಾಣಾ ನನ್ನು ತಿಹಾರ್ ಜೈಲಿನಲ್ಲಿ ಇಡಬಹುದು ಎನ್ನಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular