ನವದೆಹಲಿ : ಅತಿವೇಗವಾಗಿ ಸಾಗುವ ವಾಹನಗಳಿಗೆ ಉಪ ಗ್ರಹಾಧಾರಿತ ವ್ಯವಸ್ಥೆಯಿಂದ ದಂಡ ಹೇರುವ ವ್ಯವಸ್ಥೆ ಮುಂದಿನ ವರ್ಷದಿಂದಲೇ ಜಾರಿಗೆ ತರಲಾಗುವುದು ಎಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸಂಸತ್ತಿನಲ್ಲಿ ಮಾತನಾಡುತ್ತಿದ್ದ ಸಚಿವರು, ಹೊಸ ಉಪಗ್ರಹ ಆಧಾರಿತ ಟೋಲ್ ಫ್ರೀ ವ್ಯವಸ್ಥೆ ಮುಂದಿನ ವರ್ಷದಲ್ಲಿ ಆರಂಭವಾಗಲಿದೆ. ಇದರ ಹೈಸ್ಪೀಡ್ ಕ್ಯಾಮರಾಗಳು ಫಾಸ್ಟಾö್ಯಗ್ ಸ್ಟಿಕರ್ ಮತ್ತು ನಂಬರ್ ಪ್ಲೇಟ್‌ಗಳ ಫೋಟೋ ತೆಗೆದುಕೊಳ್ಳುತ್ತದೆ. ಆನಂತರ ಟೋಲ್ ಶುಲ್ಕವನ್ನು ಆಟೋಮ್ಯಾಟಿಕ್ ಆಗಿ ಜಮಾ ಮಾಡಿಕೊಳ್ಳುತ್ತದೆ ಎಂದು ವಿವರಿಸಿದರು. ಕಾರು ಅತಿ ವೇಗದಲ್ಲಿ ಚಲಿಸಿದಾಗ ಮುಂದಿನ ಟೋಲ್‌ಗೆ ಸಹಜ ವಾಗಿಯೇ ಬೇಗನೆ ತಲುಪುತ್ತದೆ. ಆಗ ಅತಿವೇಗದಲ್ಲಿ ಚಲಿಸಿರುವುದನ್ನು ಪತ್ತೆ ಹಚ್ಚಿ ಆಟೋಮ್ಯಾಟಿಕ್ ಆಗಿಯೇ ಅವರ ಆಟೋಮ್ಯಾಟಿಕ್ ಆಗಿ ದಂಡವನ್ನೂ ಅವರ ಖಾತೆಯಿಂದ ವಸೂಲಿ ಮಾಡಿಕೊಳ್ಳುತ್ತದೆ. ಈ ತಂತ್ರಜ್ಞಾನ ಉಪಗ್ರಹ ಆಧಾರಿತ ಮತ್ತು ಕೃತಕ ಬುದ್ಧಿಮತ್ತೆಯ ನೆರವನ್ನು ಹೊಂದಿರುತ್ತದೆ. ಇದರಿಂದ ಟೋಲ್ ಪ್ಲಾಜಾ ಬಳಿ ಕಾಯುವ ಪರಿಸ್ಥಿತಿಯೂ ಇರುವುದಿಲ್ಲ. ಇದರಿಂದ 1500 ಕೋಟಿ ರೂ. ಮೌಲ್ಯದ ತೈಲ ಇದರಿಂದ ಉಳಿತಾಯವಾಗುತ್ತದೆ ಎಂದರು.
ಹೇಗೆ ಕೆಲಸ ಮಾಡುತ್ತೆ?
ಈ ನೂತನ ತಂತ್ರಜ್ಞಾನ ಉಪಗ್ರಹ ಆಧಾರಿತ & ಕೃತಕ ಬುದ್ಧಿಮತ್ತೆ (ಎಐ) ಬೆಂಬಲಿತವಾಗಿದೆ ಇದು ಜಾರಿಯಾದರೆ ಟೋಲ್ ಪ್ಲಾಜಾ ಬಳಿ ಕಾಯುವ ಅಗತ್ಯವೂ ಇನ್ನು ಮುಂದೆ ಇರಲ್ಲ ಹೆಚ್ಚು ವೇಗವಾಗಿ ವಾಹನವನ್ನು ಚಲಾಯಿಸಿದರೆ ಆಟೋಮ್ಯಾಟಿಕ್ ಆಗಿ ಸವಾರರಿಗೆ ದಂಡ ಪ್ಲಾಜಾಗಳ ನಿರ್ವಹಣಾ ವೆಚ್ಚ ಕೂಡ ಕಡಿಮೆಯಾಗಲಿದೆ.


