ನವದೆಹಲಿ : ಭಾರತೀಯ ವಾಯುಪಡೆಗೆC-295 ಸಾರಿಗೆ ವಿಮಾನ ಸೇರ್ಪಡೆಗೊಂಡಿದೆ. ಗಾಜಿಯಾಬಾದ್‌ನ ಹಿಂಡನ್ ಏರ್‌ಬೇಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವಿಮಾನವನ್ನು ಔಪಚಾರಿಕವಾಗಿ ವಾಯುಪಡೆಗೆ ಹಸ್ತಾಂತರಿಸಿದರು.
ಈ ವಿಮಾನವು ಸ್ಪೇನ್‌ನಿಂದ ೬೮೫೪ ಕಿಲೋಮೀಟರ್ ದೂರವನ್ನು ಕ್ರಮಿಸಿದ ನಂತರ ಸೆಪ್ಟೆಂಬರ್ ೨೦ರಂದು ವಡೋದರಾ ತಲುಪಿತ್ತು. ಸೋಮವಾರ ಈ ವಿಮಾನವು ವಡೋದರಾದಿಂದ ಹಿಂಡನ್ವಾ ಯುನೆಲೆಯನ್ನು ತಲುಪಿತು. ಈಗಿರುವ ಅವ್ರೋ ವಿಮಾನಗಳ ಬದಲಿಗೆ ಸಿ-೨೯೫ ಉಪಯೋಗವಾಗಲಿದೆ.
ಈ ವಿಮಾನವನ್ನು ಭಾರತದಲ್ಲಿ ತಯಾರಿಸಲು ಏರ್‌ಬಸ್ ಮತ್ತು ಟಾಟಾ ಅಡ್ವಾನ್‌ಸ್ಡ್ ಸಿಸ್ಟಮ್ಸ್ ನಡುವೆ ಒಪ್ಪಂದವಾಗಿದೆ. ಒಟ್ಟು ೫೬ ಸಿ-೨೯೫ ವಿಮಾನಗಳನ್ನು ೨೧,೯೩೫ ಕೋಟಿ ರೂ.ಗೆ ಖರೀದಿಸಲು ಸರ್ಕಾರ ಒಪ್ಪಂದ ಮಾಡಿಕೊAಡಿತ್ತು. ಒಪ್ಪಂದದ ಪ್ರಕಾರ ೧೬ ವಿಮಾನಗಳು ಸ್ಪೇನ್‌ನಿಂದ ಬರಬೇಕು. ಉಳಿದ ೪೦ ವಿಮಾನವನ್ನು ದೇಶದಲ್ಲೇ ತಯಾರಿಸಲಾಗುವುದು. ಈ ವಿಮಾನದಲ್ಲಿ ದೇಶೀಯವಾಗಿ ನಿರ್ಮಾಣಗೊಂಡ ಎಲೆಕ್ಟಾçನಿಕ್ಯು ದ್ಧೋಪಕರಣಗಳನ್ನು ಅಳವಡಿಸಲಾಗಿರುತ್ತದೆ. ಕ್ಷಿಪ್ರ ಕಾರ್ಯಾಚರಣೆಗೆ ಹಿಂಬದಿಯ ರ‍್ಯಾಂಪ್ ಡೋರ್‌ನ್ನು ಇದು ಹೊಂದಿದೆ. ಚೀನಾ ಗಡಿ ಪ್ರದೇಶ, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಈ ವಿಮಾನ ಹೆಚ್ಚು ಉಪಯೋಗವಾಗಲಿದೆ. ಹೊಸ ವಿಮಾನಗಳ ಸೇರ್ಪಡೆಯಿಂದ ಈಗ ಬಳಕೆಯಲ್ಲಿರುವ ಆವ್ರೋ-೭೪೮ ವಿಮಾನಗಳಿಗೆ ವಿಶ್ರಾಂತಿ ನೀಡಲಾಗುತ್ತದೆ. ಈ ವಿಮಾನಗಳು ಎರಡು ಇಂಜಿನ್‌ಗಳನ್ನು ಹೊಂದಿರುತ್ತದೆ.