ನವದೆಹಲಿ : ಭಾರತೀಯ ಜನತಾ ಪಕ್ಷವು (ಬಿಜೆಪಿ) ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬಿಹಾರ ಮೂಲದ ನಾಯಕ ನಿತಿನ್ ನವೀನ್ ಅವರನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.
ನಿತಿನ್ ನವೀನ್ ಅವರ ಆಯ್ಕೆ ಮೂಲಕ ಪಕ್ಷವು ಪೂರ್ವ ಭಾರತದ ಮೇಲೆ ವಿಶೇಷ ಗಮನ ಹರಿಸುತ್ತಿರುವ ಸಂದೇಶ ನೀಡಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಆಸಕ್ತಿಕರ ಸಂಗತಿಯೆಂದರೆ, ಹಾಲಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರೂ ಬಿಹಾರದಲ್ಲೇ ಜನಿಸಿದ್ದವರು. ಅವರು ಪಟ್ನಾದಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ನಂತರ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು. ಈ ಹಿನ್ನೆಲೆ, ಬಿಹಾರಕ್ಕೆ ಬಿಜೆಪಿ ನೀಡುತ್ತಿರುವ ಮಹತ್ವ ಮತ್ತಷ್ಟು ಸ್ಪಷ್ಟವಾಗಿದೆ.


