ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸಕ್ತ ಸಾಲಿನ ಮುಂಗಡ ಪತ್ರ ಮಂಡನೆಗೆ ಸಜ್ಜಾಗಿದ್ದು, ಫೆ. 1 ರಂದು ಸತತ 8 ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆಯಲಿದ್ದಾರೆ.
ಈ ಮೊದಲು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅತಿ ಹೆಚ್ಚು ಬಾರಿ ಬಜೆಟ್ಮಂಡಿಸಿದ ದಾಖಲೆ ಇದೆ.ಅವರು 10 ಬಾರಿ ಮುಂಗಡಪತ್ರ ಮಂಡಿಸಿದ್ದಾರೆ. ದೇಸಾಯಿ ಅವರು ಹಣಕಾಸು ಸಚಿವರಾಗಿದ್ದಾಗ 1959 ರಿಂದ 1964 ರ ವರೆಗೆ ಸತತ 6 ಬಾರಿ, 1967 ರಿಂದ ೬೯ರ ಅವಧಿಯಲ್ಲಿ 4 ಬಾರಿ ಮುಂಗಡ ಪತ್ರ ಮಂಡಿಸಿದ್ದ ಕೀರ್ತಿಗೆ ಪಾತ್ರರಾಗಿದ್ದಾರೆ.
ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಇದುವರೆಗೂ 9 ಬಾರಿ ಬಜೆಟ್ ಮಂಡಿಸಿದ್ದರು. ಅದೇ ರೀತಿ ಪ್ರಣಬ್ಮುಖರ್ಜಿ ಅವರು ಹಣಕಾಸು ಸಚಿವ ರಾಗಿದ್ದಾಗ 8 ಬಾರಿ ಬಜೆಟ್ ಮಂಡಿಸಿದ್ದರು. ಈಗ ನಿರ್ಮಲಾ ಅವರು 8 ನೇ ಬಾರಿ ಬಜೆಟ್ ಮಂಡನೆಗೆ ಸಿದ್ಧರಾಗಿದ್ದು, ಮಧ್ಯಮ ವರ್ಗದ ಮೇಲಿನ ಹೊರೆಯನ್ನು ಕಡಿಮೆ ಮಾಡಿ ದೇಶದ ಆರ್ಥೀಕತೆಗೆ ಬಲ ತುಂಬಲು ಕಸರತ್ತು ನಡೆಸಿದ್ದು, ಶ್ರೀಸಾಮಾನ್ಯನಿಗ ಹೊರೆಯಾಗದ ರೀತಿಯಲ್ಲಿ ಬಜೆಟ್ ಮಂಡಿಸುವ ನಿರೀಕ್ಷೆ ಇದೆ.
ಈ ಬಾರಿಯ ಮುಂಗಡಪತ್ರದಲ್ಲಿ ರಾಜ್ಯದ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ಯಾವ ಯೋಜನೆಗಳನ್ನು ಕರ್ನಾಟಕಕ್ಕೆ ಮುಂಗಡ ಪತ್ರದಲ್ಲಿ ಮಂಜೂರು ಮಾಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.