Tuesday, September 1, 2026
Homeವಾಣಿಜ್ಯನವದೆಹಲಿ : ದೇಶೀಯ ಸೆಮಿಕಂಡಕ್ಟರ್ ಉತ್ಪಾದನೆಗೆ ₹1.27 ಲಕ್ಷ ಕೋಟಿ : ಕೇಂದ್ರದ ಮಹತ್ವದ ಹೆಜ್ಜೆ.

ನವದೆಹಲಿ : ದೇಶೀಯ ಸೆಮಿಕಂಡಕ್ಟರ್ ಉತ್ಪಾದನೆಗೆ ₹1.27 ಲಕ್ಷ ಕೋಟಿ : ಕೇಂದ್ರದ ಮಹತ್ವದ ಹೆಜ್ಜೆ.

ನವದೆಹಲಿ : ದೇಶದಲ್ಲಿ ಸೆಮಿಕಂಡಕ್ಟರ್‌ಗಳ ವಿನ್ಯಾಸ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ₹1,27,500 ಕೋಟಿ ಮೊತ್ತದ ‘ಸೆಮಿಕಾನ್ 2.0’ ಯೋಜನೆಯ ಕಾರ್ಯಚೌಕಟ್ಟನ್ನು ಅಧಿಸೂಚಿಸಿದೆ. ಯೋಜನೆಯ ಎಲ್ಲಾ ಆರು ವಿಭಾಗಗಳ ಅಧಿಸೂಚನೆಗಳನ್ನು ಆಗಸ್ಟ್ 31ರಂದು ಹೊರಡಿಸಲಾಗಿದೆ.

ಚಿಪ್ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಒತ್ತು ಸೆಮಿಕಾನ್ 2.0 ಅಡಿಯಲ್ಲಿ ಭಾರತದಲ್ಲೇ ಸಂಪೂರ್ಣ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ನಿರ್ಮಿಸುವ ಗುರಿ ಹೊಂದಲಾಗಿದೆ. ಚಿಪ್ ವಿನ್ಯಾಸ, ಸೆಮಿಕಂಡಕ್ಟರ್ ಉಪಕರಣಗಳು ಮತ್ತು ಕಚ್ಚಾ ವಸ್ತುಗಳ ಉತ್ಪಾದನೆ, ಫ್ಯಾಬ್ ಘಟಕಗಳು, ಪ್ಯಾಕೇಜಿಂಗ್-ಟೆಸ್ಟಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಾಂತ್ರಿಕ ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಮುಖ ಆದ್ಯತೆಗಳಾಗಿವೆ.

₹1.27 ಲಕ್ಷ ಕೋಟಿ ಯೋಜನೆಯ ಪ್ರಮುಖ ಅಂಶಗಳು.
₹1,27,500 ಕೋಟಿ ಒಟ್ಟು ಯೋಜನಾ ಮೊತ್ತ.
ದೇಶೀಯ ಚಿಪ್ ವಿನ್ಯಾಸ ಮತ್ತು ಸೆಮಿಕಂಡಕ್ಟರ್ IP ಅಭಿವೃದ್ಧಿಗೆ ಉತ್ತೇಜನ.
ಚಿಪ್ ಉತ್ಪಾದನೆಗೆ ಅಗತ್ಯವಾದ ಉಪಕರಣ, ರಾಸಾಯನಿಕ ಮತ್ತು ಅನಿಲಗಳ ದೇಶೀಯ ಉತ್ಪಾದನೆಗೆ ಪ್ರೋತ್ಸಾಹ.
ಹೊಸ ಸೆಮಿಕಂಡಕ್ಟರ್ ಫ್ಯಾಬ್‌ಗಳನ್ನು ಸ್ಥಾಪಿಸಲು ನೆರವು.
ಅತ್ಯಾಧುನಿಕ ATMP/OSAT ಪ್ಯಾಕೇಜಿಂಗ್ ಮತ್ತು ಟೆಸ್ಟಿಂಗ್ ಘಟಕಗಳಿಗೆ ಬೆಂಬಲ.
ಮುಂದುವರಿದ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ.
ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಅಗತ್ಯವಿರುವ ತಾಂತ್ರಿಕ ಸಿಬ್ಬಂದಿ ತರಬೇತಿಗೆ ಒತ್ತು.

6 ರಾಜ್ಯಗಳಲ್ಲಿ ಈಗಾಗಲೇ 12 ಯೋಜನೆಗಳು
ಸೆಮಿಕಾನ್ 1.0 ಅಡಿಯಲ್ಲಿ ಆರು ರಾಜ್ಯಗಳಲ್ಲಿ 12 ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳಿಗೆ ಅನುಮೋದನೆ ದೊರೆತಿದ್ದು, ಒಟ್ಟು ಹೂಡಿಕೆ ₹1.64 ಲಕ್ಷ ಕೋಟಿಗೂ ಅಧಿಕವಾಗಿದೆ. ಈ ಪೈಕಿ ಮೂರು ಸಂಸ್ಥೆಗಳು ಈಗಾಗಲೇ ವಾಣಿಜ್ಯ ಉತ್ಪಾದನೆ ಆರಂಭಿಸಿವೆ.

ಕೇಂದ್ರದ ಪ್ರಕಾರ, ಸೆಮಿಕಾನ್ 2.0 ಮೂಲಕ ಭಾರತವು ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯಲ್ಲಿ ಪ್ರಮುಖ ಸ್ಥಾನ ಪಡೆಯುವುದರ ಜೊತೆಗೆ ದೇಶದ ತಂತ್ರಜ್ಞಾನ ಸ್ವಾವಲಂಬನೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular