Friday, November 22, 2024
Flats for sale
Homeದೇಶನವದೆಹಲಿ : ದೇಶದಲ್ಲಿ ಮತ್ತೆ ನಮೋ ಯುಗ.

ನವದೆಹಲಿ : ದೇಶದಲ್ಲಿ ಮತ್ತೆ ನಮೋ ಯುಗ.

ನವದೆಹಲಿ : ದೇಶದ ಪ್ರಧಾನಿಯಾಗಿ ನರೇಂದ್ರಮೋದಿ ಅವರ ಪಟ್ಟಾಭೀಷೇಕ ಇನ್ನೇನು ಕೆಲವೇ ನಿಮಿಷದಲ್ಲಿ ನಡೆಯಲಿದ್ದು , ಮೋದಿ ಅವರು ಸತತ 3 ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವರು.

ರಾಷ್ಟçಪತಿ ಭವನದಲ್ಲಿ ಇಂದು ಸಂಜೆ 7.15 ರ ಶುಭಮುಹೂರ್ತದಲ್ಲಿ ಮೋದಿ ಅವರು ದೇಶದ ಪ್ರಧಾನಿಯಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸುವರು. ಪ್ರಧಾನಿ ಮೋದಿ ಅವರ ಜತೆ ೩೦ ಸಚಿವರುಗಳು ಪ್ರಮಾಣವಚನ ಸ್ವೀಕರಿಸಿದ್ದು, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುವ ಮೂಲಕ ದೇಶದಲ್ಲಿ ನರೇಂದ್ರಮೋದಿ ಅವರ ಆಳ್ವಿಕೆ ಮುಂದುವರೆಯಲಿದೆ.

ನರೇಂದ್ರ ಮೋದಿ ಅವರು ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ಸತತ 3ನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಜಗತ್ ಪ್ರಕಾಶ್ ನಡ್ಡಾ (ಜೆಪಿ ನಡ್ಡಾ) ಕೂಡ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ನರೇಂದ್ರ ಮೋದಿ ಜೊತೆಗೆ ಕೆಲವು ಸಚಿವರು ಮಾತ್ರ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರಲ್ಲಿ ಜೆಪಿ ನಡ್ಡಾ ಕೂಡ ಒಬ್ಬರು ಎನ್ನಲಾಗುತ್ತಿದೆ.

ಬಿಜೆಪಿ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ ಈ ತಿಂಗಳು ಮುಕ್ತಾಯಗೊಳ್ಳಲಿದೆ. ಹೀಗಾಗಿ, ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎನ್ನಲಾಗಿದೆ. ಗುಜರಾತ್ ಸಂಸದ ಸಿಆರ್ ಪಾಟೀಲ್ ಕೂಡ ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನಾಯಕರ ತಾತ್ಕಾಲಿಕ ಪಟ್ಟಿಯಲ್ಲಿ ಜೆಡಿಎಸ್ ನಾಯಕ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಹೆಸರು ಕೂಡ ಕೇಳಿಬರುತ್ತಿದೆ.

ಸಂಭಾವ್ಯ ಸಚಿವರುಗಳ ಪಟ್ಟಿ
ಅಮಿತ್ ಶಾ (ಬಿಜೆಪಿ) ನಿತಿನ್ ಗಡ್ಕರಿ (ಬಿಜೆಪಿ) ರಾಜನಾಥ್ ಸಿಂಗ್ (ಬಿಜೆಪಿ) ನಿರ್ಮಲಾ ಸೀತರಾಮನ್(ಬಿಜೆಪಿ) ಪ್ರಹ್ಲಾದ್ ಜೋಶಿ (ಬಿಜೆಪಿ) ಕಿರಣ್ ರಿಜಿಜು (ಬಿಜೆಪಿ) ಜಿ ಕಿಸನ್ ರೆಡ್ಡಿ (ಬಿಜೆಪಿ) ಚಿರಾಗ್ ಪಾಸ್ವಾನ್(ಎಲ್‌ಜಿಪಿ) ಬಂಡಿ ಸಂಜಯ್ (ಬಿಜೆಪಿ) ಕೆ.ರಾಮ್‌ಮೋಹನ್ ನಾಯ್ಡು(ಟಿಡಿಪಿ) ಸಂಜಯ್ ಜೈಸ್ವಾಲ್ (ಬಿಜೆಪಿ) ಸಂಜಯ್ ಕುಮಾರ್ ಝಾ(ಜೆಡಿಯು) ಶೋಭಾ ಕರಂದ್ಲಾಜೆ (ಬಿಜೆಪಿ) ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್) ಜೈ ಶಂಕರ್
(ಬಿಜೆಪಿ) ವಿ. ಸೋಮಣ್ಣ (ಬಿಜೆಪಿ) ಗಜೇಂದ್ರ ಸೀಂಗ್ಶೇ ಖಾವತ್ (ಬಿಜೆಪಿ) ಜಯಂತ್ ಚೌಧುರಿ(ಆರ್‌ಎಲ್‌ಡಿ) ಜಿತನ್ ರಾಮ್ಮಾಂ ಝಿ(ಎಚ್‌ಎಂ ) ಜತಿನ್ ಪ್ರಸಾದ್ (ಬಿಜೆಪಿ) ಜಿಪಿ ನಡ್ಡಾ (ಬಿಜೆಪಿ) ಜ್ಯೋತಿರಾಧ್ಯ ಸಿಂಧಿಯಾ(ಬಿಜೆಪಿ) ಅನುಪ್ರಿಯಾ ಪಟೇಲ್ ಅಪ್ನದಳ, ಶಿವರಾಜ್ ಸಿಂಗ್ಚ ವ್ಹಾಣ್ (ಬಿಜೆಪಿ) ಸುರೇಶ್ ಗೋಪಿ (ಬಿಜೆಪಿ) ಅಣ್ಣಾಮಲೈ (ಬಿಜೆಪಿ) ಧಮೇಂದ್ರ ಪ್ರಧಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular