Friday, April 3, 2026
Flats for sale
Homeದೇಶನವದೆಹಲಿ : ದೇಶದಲ್ಲಿ ಇಂದಿನಿಂದ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ಆರಂಭ, ವೆಬ್‌ಸೈಟ್ ಮೂಲಕ ಸೆನ್ಸಸ್.

ನವದೆಹಲಿ : ದೇಶದಲ್ಲಿ ಇಂದಿನಿಂದ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ಆರಂಭ, ವೆಬ್‌ಸೈಟ್ ಮೂಲಕ ಸೆನ್ಸಸ್.

ನವದೆಹಲಿ : ದೇಶದಲ್ಲಿ 2027ರ ಗಣತಿ ಎರಡು ತಿಂಗಳ ಕಾಲ ನಡೆಯಲಿದೆ ಮೊದಲ ಹಂತದ ಪ್ರಕ್ರಿಯೆ ಕರ್ನಾಟಕ ಸೇರಿ 8 ರಾಜ್ಯದಲ್ಲಿ ಇವತ್ತಿಂದ, ಏ.೫ರಿಂದ ಬೇರೆ ರಾಜ್ಯಗಳಲ್ಲಿ ಶುರುವಾಗಲಿದೆ. ಪ್ರತಿ 10 ವರ್ಷಕ್ಕೊಮ್ಮೆ ನಡೆಯಬೇಕಿದ್ದ ಜನಗಣತಿ 2010ರ ಬಳಿಕ (15 ವರ್ಷದ ನಂತರ) ಇದೀಗ ಆರಂಭವಾಗುತ್ತಿದೆ. 2027ರ ಈ ಜನಗಣತಿ ದೇಶದಲ್ಲಿ ಮೊದಲ ಬಾರಿ ಡಿಜಿಟಲ್ ರೂಪದಲ್ಲಿ ನಡೆಯುತ್ತಿದೆ. ಏ.1ರಿಂದ ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಗಣತಿ ನಡೆಯಲಿದೆ.

ಮೊದಲ ಬಾರಿಗೆ ಜನಗಣತಿ ಡಿಜಿಟಲ್ ವಿಧಾನದಲ್ಲಿ ನಡೆಯಲಿದೆ. ಗಣತಿಕಾರರು ಕೂಡ ಮಾಹಿತಿಯನ್ನು ನೇರವಾಗಿ ತಮ್ಮ ಸ್ಮಾರ್ಟ್ಫೋನ್ ಬಳಸಿ ಅಪ್‌ಲೋಡ್ ಮಾಡುತ್ತಾರೆ. ಜನರೇ ಮಾಹಿತಿ ಭರ್ತಿ ಮಾಡುವ ಸ್ವಯಂ ಗಣತಿಗೂ ಮೊದಲ ಬಾರಿ ಅವಕಾಶ ನೀಡಲಾಗಿದೆ. ಏ.1ರಿಂದ ಏ.15 ರವರೆಗೆ ಸ್ವಯಂ ಗಣತಿ ಹಾಗೂ ಏ.16ರಿಂದ ಮೇ 15ರವರೆಗೆ ಮನೆ ಪಟ್ಟಿ ಮಾಡುವುದು ಮತ್ತು ಮನೆ ಗಣತಿ ನಡೆಯಲಿದೆ. ಈ ಹಿಂದೆ ೨೦೧೧ರಲ್ಲಿ ಜನಗಣತಿ ನಡೆದಿತ್ತು. ೨೦೨೧ರಲ್ಲಿ ಕೊರೊನಾದಿಂದಾಗಿ ಗಣತಿ ಮುಂದೂಡಲಾಗಿತು

ಆನ್ಲೈನ್ ಮೂಲಕ ನೀವು ನೋಂದಣಿ ಮಾಡಿಕೊಂಡ ಬಳಿಕ ಗಣತಿದಾರರು ಮನೆಗೆ ಜನ ವೆಬ್‌ಸೈಟ್‌ನ ಮೂಲಕ ಸ್ವಯಂ ಗಣತಿ ಮಾಡಿಕೊಂಡ ಬಳಿಕ ಗಣತಿದಾರರು ಮನೆಗೆ ಬರುತ್ತಾರೆ. ಈ ವೇಳೆ ಮನೆಯ ಪರಿಸ್ಥಿತಿ, ಏನೇನು ಸೌಲಭ್ಯಗಳಿವೆ? ಮುಂತಾದ ಮಾಹಿತಿಗಳನ್ನು ಸಂಗ್ರಹ ಮಾಡುತ್ತಾರೆ.

ಮೊದಲ ಹಂತದಲ್ಲಿಸೆಪ್ಟೆಂಬರ್ ೩೦ರವರೆಗೂ ವಿವಿಧ ರಾಜ್ಯಗಳಲ್ಲಿ ಸ್ವಯಂ ಗಣತಿ ಮತ್ತು ಮನೆಮನೆ ಗಣತಿ ಕಾರ್ಯ ನಡೆಯಲಿದೆ. ಜನರಿಂದ ಮಾಹಿತಿಯನ್ನು ಸಂಗ್ರಹಿಸುವ ಪ್ರಮುಖ ಹಂತ ಮುಂದಿನ ವರ್ಷದ ಫೆಬ್ರವರೀಲಿ ಶುರುವಾಗುತ್ತೆ. ಏಪ್ರಿಲ್ 16ರಿಂದ ಮಧ್ಯ ಪ್ರದೇಶ, ಆಂಧ್ರ, ಅರುಣಾಚಲ, ಚಂಡೀಗಢ, ಛತ್ತೀಸ್‌ಗಢದಲ್ಲಿ ಸ್ವಯಂ ಗಣತಿ ಪ್ರಕ್ರಿಯೆ ಶುರುವಾಗುತ್ತದೆ. 2092 ಉಪ ಜಿಲ್ಲೆ, 5179 ಪಟ್ಟಣಗಳು, 6,39,902 ಗ್ರಾಮಗಳಲ್ಲಿ ಜನಗಣತಿ ಪ್ರಕ್ರಿಯೆ ಕರ‍್ಯ ನಡೆಯಲಿದೆ. ಮೊದಲು ಕರ್ನಾಟಕ.ಅಂಡಮಾನ್,ಗೋವಾ,ಸಿಕ್ಕಿಂ,ಒಡಿಶಾ,ಲಕ್ಷದ್ವೀಪ ಮಿಜೋರಾಂ, ದೆಹಲಿ ಯಲ್ಲಿ ನಡೆಯಲಿದೆ.

ಜನ ಹೇಗೆ ಭಾಗವಹಿಸಬೇಕು?
೧. ಇದು ದೇಶದ ಮೊದಲ ವೆಬ್ ಆಧಾರಿತ ಸ್ವಯಂ ಗಣತಿಯಾಗಿದೆ
೨. ಆನ್‌ಲೈನ್‌ನಲ್ಲಿ ಜನರು ತಮ್ಮ ವಿವರಗಳನ್ನು ತಾವೇ ತುಂಬಬೇಕು
೩. ಹದಿನಾರು ಭಾಷೆಗಳಲ್ಲಿ ಮಾಹಿತಿ ತುಂಬಲು ಜನರಿಗಿದೆ ಅವಕಾಶ
೪. ಮೊದಲು se.ಛಿeಟಿsus.gov.iಟಿ ಗೆ ಲಾಗಿನ್ ಆಗಬೇಕು
೫. `ಎಸ್‌ಇ’ ಪೋರ್ಟಲ್‌ನಲ್ಲಿ ಮೊಬೈಲ್ ನಂಬರ್ ಹಾಕಬೇಕು
೬. ಪ್ರಾಥಮಿಕ ಮಾಹಿತಿ ಒದಗಿಸಿ, ಗಣತಿ ನಿಗದಿಪಡಿಸಿಕೊಳ್ಳಬೇಕು

RELATED ARTICLES

LEAVE A REPLY

Please enter your comment!
Please enter your name here

Most Popular