Wednesday, December 3, 2025
Flats for sale
Homeದೇಶನವದೆಹಲಿ : ದೇಶದ ಎಲ್ಲಾ ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ಕೋರ್ಟ್ ಆದೇಶ...

ನವದೆಹಲಿ : ದೇಶದ ಎಲ್ಲಾ ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ಕೋರ್ಟ್ ಆದೇಶ .

ನವದೆಹಲಿ : ದೇಶದ ಎಲ್ಲ ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನೂ ಸಿಬಿಐಗೆ ವಹಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದೇ ರೀತಿ ವಂಚಕರು ಬಳಸುತ್ತಿರುವ ಬ್ಯಾಂಕ್ ಅಕೌಂಟ್‌ಗಳನ್ನು ಸ್ಥಗಿತಗೊಳಿಸಲು ಏಕೆ ಎಐ ಬಳಸುತ್ತಿಲ್ಲ ಎಂದು ಆರ್‌ಬಿಐಯನ್ನು ಕೇಳಿದೆ. ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್ ಅವರ ಪೀಠ, ಪ್ರತಿಪಕ್ಷಗಳು ಆಡಳಿತ ನಡೆಸುತ್ತಿರುವ ಕರ್ನಾಟಕ, ಪ.ಬಂಗಾಳ, ತ.ನಾಡು, ತೆಲಂಗಾಣ ರಾಜ್ಯಗಳೂ ಇದಕ್ಕೆ ಒಪ್ಪಿಗೆ ನೀಡುವಂತೆ ಸೂಚಿಸಿದೆ.

ವಂಚಕರ ಜತೆ ಕೈಜೋಡಿಸಿದ ಬ್ಯಾಂಕುಗಳ ಅಧಿಕಾರಿಗಳನ್ನು ಪತ್ತೆ ಹಚ್ಚಲು ಸಿಬಿಐಗೆ ಆದೇಶಿಸಿದ್ದು ಒಬ್ಬ ಬಳಕೆದಾರರಿಗೆ ಒಂದಕ್ಕಿAತ ಹೆಚ್ಚು ಸಿಮ್ ನೀಡಿದಂತೆ ನೋಡಿಕೊಳ್ಳು ಕೇಂದ್ರಕ್ಕೆ ಸೂಚನೆ ನೀಡಿದೆ.ಡಿಜಿಟಲ್ ಅರೆಸ್ಟ್ಗೆ ಬಳಸುವ ಖಾತೆಗಳ ಸ್ಥಗಿತಗೊಳಿಸಲು ಆರ್‌ಬಿಐಗೆ ನೋಟಿಸ್ ನೀಡಿದೆ.

ಸೈಬರ್ ಕ್ರೈಂ ಭಾಗವಾಗಿ ಡಿಜಿಟಲ್ ಪ್ರಕರಣಗಳು ಹೆಚ್ಚಾಗುತ್ತಿವೆ. ವಂಚಕರು ಕಾನೂನು ಜಾರಿ ಅಥವಾ ಕೋರ್ಟ್ ಅಧಿಕಾರಿಗಳೆಂದು ಹೇಳಿಕೊಂಡು ಸAತ್ರಸ್ತರಿಗೆ ಆಡಿಯೋ ಅಥವಾ ವಿಡಿಯೋ ಕಾಲ್‌ಗಳ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಅವರನ್ನು ಡಿಜಿಟಲ್ ಬಂಧನಕ್ಕೆ ಒಳಪಡಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ಹರಿಯಾಣದ ಹಿರಿಯ ದಂಪತಿಯೊಬ್ಬರು ದಾಖಲಿಸಿದ್ದ ದೂರಿನ ಆಧಾರದ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೀಠ ಈ ಆದೇಶ ಹೊರಡಿಸಿದೆ.

ಇಂಥ ಪ್ರಕರಣಗಳ ತನಿಖೆಗೆ ಮಾಹಿತಿ ತಂತ್ರಜ್ಞಾನ ವಿಭಾಗದವರೂ ಸಿಬಿಐಗೆ ಮಾಹಿತಿಗಳನ್ನು ನೀಡಿ ಸಹಕರಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ. ಅಲ್ಲದೆ, ಸೈಬರ್ ಕ್ರೈಂ ನಲ್ಲಿ ಬಳಕೆಯಾಗುವುದನ್ನು ತಪ್ಪಿಸಲು ಒಬ್ಬ ಬಳಕೆದಾರರಿಗೆ ಒಂದಕ್ಕಿAತ ಹೆಚ್ಚು ಸಿಮ್ ಕಾರ್ಡ್ ನೀಡದಂತೆಯೂ ಟೆಲಿಕಾA ಇಲಾಖೆಗೆ ಸೂಚಿಸಿದೆ. ವಂಚಕರು ಬಳಸುವ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಸಿಬಿಐ, ಎಲ್ಲ ರಾಜ್ಯಗಳ ಪೊಲೀಸರು ಮುಕ್ತವಾಗಿದ್ದಾರೆ ಎಂದ ನ್ಯಾಯಪೀಠ, ವಂಚಕರ ಜೊತೆ ಕೈಜೋಡಿಸಿರುವ ಬ್ಯಾಂಕ್ ಅಧಿಕಾರ ಕುರಿತೂ ಬೆಳಕು ಚೆಲ್ಲುವಂತೆ ಸಿಬಿಐಗೆ ಸೂಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular