Monday, July 13, 2026
Homeದೇಶನವದೆಹಲಿ : ದೆಹಲಿ ಬ್ಲಾಸ್ಟ್ ಕೇಸ್ : ಎಐ ನೋಡಿ ಬಾಂಬ್ ತಯಾರಿಸಿದ ಉಗ್ರರು…!

ನವದೆಹಲಿ : ದೆಹಲಿ ಬ್ಲಾಸ್ಟ್ ಕೇಸ್ : ಎಐ ನೋಡಿ ಬಾಂಬ್ ತಯಾರಿಸಿದ ಉಗ್ರರು…!

ನವದೆಹಲಿ : ಕಳೆದ ವರ್ಷ ನವೆಂಬರ್‌ನಲ್ಲಿ ಕೆಂಪುಕೋಟೆ ಸಮೀಪ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಶಾಕಿಂಗ್ ಮಾಹಿತಿ ಬಹಿರಂಗವಾಗಿದೆ. ಆರೋಪಿಗಳು ಎಐ, ChatGPT ಹಾಗೂ ಯೂಟ್ಯೂಬ್ ಟ್ಯುಟೋರಿಯಲ್‌ಗಳನ್ನು ನೋಡಿ ಐಇಡಿ ಬಾಂಬ್ ತಯಾರಿಕೆ ಕಲಿತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಚಾರ್ಜ್‌ಶೀಟ್ ಪ್ರಕಾರ, ಆರೋಪಿಗಳು ಕಡಿಮೆ ವೆಚ್ಚದ ಎಂಜಿನಿಯರಿಂಗ್ ವಿಧಾನ ಬಳಸಿ ಅತ್ಯಾಧುನಿಕ ಬಾಂಬ್‌ಗಳನ್ನು ನಿರ್ಮಿಸಿದ್ದರು. ರಾಸಾಯನಿಕ ಮಿಶ್ರಣ ಹಾಗೂ ತಾಂತ್ರಿಕ ಮಾಹಿತಿಯನ್ನು ಚಾಟ್‌ಜಿಪಿಟಿ ಮೂಲಕ ಪಡೆದುಕೊಂಡಿದ್ದರೆಂದು ಉಲ್ಲೇಖಿಸಲಾಗಿದೆ. ಇದೇ ವೇಳೆ, ಬಾಂಬ್ ತಯಾರಿಕೆಗೆ ಬೇಕಾದ ಎಲೆಕ್ಟ್ರಾನಿಕ್ ಉಪಕರಣಗಳು, ರಿಮೋಟ್ ಸ್ವಿಚ್‌ಗಳು ಹಾಗೂ ಲೈಟರ್‌ಗಳನ್ನು Flipkart ಮೂಲಕ ಖರೀದಿಸಿದ್ದರೆಂದು ತಿಳಿದುಬಂದಿದೆ.

ಆರೋಪಿಗಳು ಕಾಶ್ಮೀರ ಅರಣ್ಯ ಪ್ರದೇಶಗಳಲ್ಲಿ ಹಲವು ಬಾರಿ ಐಇಡಿ ಸ್ಫೋಟಗಳ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದರು ಎಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.ಈ ಪ್ರಕರಣವು ಎಐ ಮತ್ತು ಡಿಜಿಟಲ್ ತಂತ್ರಜ್ಞಾನ ದುರುಪಯೋಗದ ಬಗ್ಗೆ ದೇಶದ ಭದ್ರತಾ ಸಂಸ್ಥೆಗಳಲ್ಲಿ ಗಂಭೀರ ಆತಂಕ ಹುಟ್ಟಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular