Tuesday, February 10, 2026
Flats for sale
Homeವಿದೇಶನವದೆಹಲಿ : ತೈಲ ಖರೀದಿ ಆಯ್ಕೆ ಭಾರತಕ್ಕೆ ಸೇರಿದ್ದು,ಅಮೆರಿಕಕ್ಕೆ ಭಾರತ ತಿರುಗೇಟು .

ನವದೆಹಲಿ : ತೈಲ ಖರೀದಿ ಆಯ್ಕೆ ಭಾರತಕ್ಕೆ ಸೇರಿದ್ದು,ಅಮೆರಿಕಕ್ಕೆ ಭಾರತ ತಿರುಗೇಟು .

ನವದೆಹಲಿ : ತೈಲಖರೀದಿಗೆ ಸಂಬಂಧಿಸಿದಂತೆ `ಟ್ರೇಡ್ ಡೀಲ್’ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಉಲ್ಲೇಖಿಸಿದ್ದ ಅಂಶವನ್ನು ಭಾರತ ಪರೋಕ್ಷವಾಗಿ ತಿರಸ್ಕರಿಸಿದೆ.

ರಷ್ಯಾದಿಂದಲೇ ತೈಲ ಖರೀದಿ ಮುಂದುವರೆಯಲಿದೆ' ಎಂದು ನೇರವಾಗಿ ಹೇಳದಿದ್ದರೂ,104 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ತನ್ನ ತೈಲ ಭದ್ರತೆಯನ್ನು ಪ್ರಥಮ ಆದ್ಯತೆಯಾಗಿ ತಾನೇ ಕಾಯ್ದುಕೊಳ್ಳಲಿದೆ’ ಎಂದು ತಿರುಗೇಟು ನೀಡಿದೆ.

ಟ್ರೇಡ್ ಡೀಲ್ ಪ್ರಕಾರ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಭಾರತ ಒಪ್ಪಿಕೊಂಡಿದೆ. ಅದಕ್ಕೆ ಬದಲಾಗಿ ಅಮೆರಿಕ ಹಾಗೂ ವೆನಿಜುವೆಲಾದಿಂದ ತೈಲ ಖರೀದಿಸಲಿದೆ' ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದರು. ಅದಕ್ಕೆ ಭಾರತ ಗುರುವಾರ ನೀಡಿರುವ ತನ್ನ ಮೊದಲ ಪ್ರತಿಕ್ರಿಯೆಯಲ್ಲಿತೈಲ ಖರೀದಿ ಆಯ್ಕೆ ಭಾರತಕ್ಕೆ ಸೇರಿದ್ದು’ ಎಂಬ ಮುನ್ಸೂಚನೆ ನೀಡಿದೆ. `ಇಂಧನ ವಲಯದಲ್ಲಿ ಪ್ರಸ್ತುತ ನಡೆಯುತ್ತಿರುವ ಅಂತಾರಾಷ್ಟಿçÃಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಭಾರತ ತನ್ನ ತೈಲ ಖರೀದಿ ಆಯ್ಕೆಯನ್ನು ಪ್ರಥಮ ಆದ್ಯತೆಯಾಗಿ ಇಟ್ಟುಕೊಂಡಿದೆ. ಪರಿಸ್ಥಿತಿಗಳಿಗೆ ಅನುಗುಣವಾಗಿ ತೈಲ ಖರೀದಿ ಆಯ್ಕೆಯ ಎಲ್ಲ ನಿರ್ಧಾರಗಳೂ ನಮ್ಮದೇ ಆಗಿರುತ್ತದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟಪಡಿಸಿದರು. ವೆನಿಜುವೆಲಾದಿಂದ ತೈಲ ಖರೀದಿ ಆಯ್ಕೆಯನ್ನೂ ಸಹ ಭಾರತ ಮುಕ್ತವಾಗಿಟ್ಟುಕೊಂಡಿದೆ ಎಂದೂ ಜೈಸ್ವಾಲ್ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular