ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ದೆಹಲಿ ತಂಡದ ನಾಯಕರಾಗಿ ಪ್ರಕಟಿಸಲಾಗಿದೆ.
ಐಪಿಎಲ್ ಹರಾಜಿಗೂ ಮೊದಲು ಪ್ರಾಂಚೈಸಿಯಿಂದ ರಿಷಬ್‌ಪಂತ್ ನಿರ್ಗಮಿಸಿದ ಹಿನ್ನೆಲೆಯಲ್ಲಿ ಅಕ್ಷರ್ ಪಟೇಲ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. 31 ವರ್ಷದ 2019 ರಿಂದ ದೆಹಲಿ ತಂಡದಲ್ಲಿದ್ದು, 16.50 ಕೋಟಿಗೆ ಡೆಲ್ಲಿ ಪ್ರಾಂಚೈಸಿ ಉಳಿಸಿಕೊಂಡಿತ್ತು.
ಐಪಿಎಲ್ ನಾಯಕತ್ವ ನಿರ್ವಹಣೆ ಮಾಡಿದ ಅನುಭವ ಇಲ್ಲದಿದ್ದರೂ ದೇಶೀಯ ಕ್ರಿಕೆಟ್‌ನಲ್ಲಿ ಗುಜರಾತ್ ತಂಡವನ್ನು ಅಕ್ಷರ್ ಮುನ್ನಡೆಸಿದ್ದಾರೆ. ಈ ವರ್ಷದ ಆರಂಭದಲ್ಲಿ ಭಾರತದ ಟಿ-20 ತಂಡದ ಉಪನಾಯಕರಾಗಿ ನೇಮಕವಾಗಿದ್ದರು. ಕಳೆದ ಐಪಿಎಲ್ ಆವೃತ್ತಿಯಲ್ಲಿ 235 ರನ್ ಗಳಿಸಿ 7.65ಸರಾಸರಿಯಂತೆ 11 ವಿಕೆಟ್ ಗಳಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಟೇಲ್, ಡೆಲ್ಲಿ ಕ್ಯಾಪ್ಟನ್ ತಂಡವನ್ನು ಮುನ್ನಡೆಸುವ ಅವಕಾಶ ನನಗೆ ಸಿಕ್ಕ ಗೌರವ. ನಾನು ಕ್ರಿಕೆಟಿಗನಾಗಿ ಒಂದು ಹಂತಕ್ಕೆ ಬೆಳೆದಿದ್ದೇನೆ. ಈ ತಂಡವನ್ನು ಮುನ್ನಡೆಸಲು ನಾನು ಸಿದ್ಧನಾಗಿದ್ದು, ಆತ್ಮವಿಶ್ವಾಸವನ್ನು ಹೊಂದಿರುವುದಾಗಿ ಹೇಳಿದರು.