Saturday, November 23, 2024
Flats for sale
Homeದೇಶನವದೆಹಲಿ : ಜಾರಿ ನಿರ್ದೇಶನಾಲಯ ಕಾನೂನು ಬಾಹಿರವಾಗಿ ನನ್ನನ್ನು ಬಂಧಿಸಿದೆ ಎಂದು ಸುಪ್ರೀಂನಲ್ಲಿ ಪ್ರಶ್ನಿಸಿದ ಕೇಜ್ರಿ.

ನವದೆಹಲಿ : ಜಾರಿ ನಿರ್ದೇಶನಾಲಯ ಕಾನೂನು ಬಾಹಿರವಾಗಿ ನನ್ನನ್ನು ಬಂಧಿಸಿದೆ ಎಂದು ಸುಪ್ರೀಂನಲ್ಲಿ ಪ್ರಶ್ನಿಸಿದ ಕೇಜ್ರಿ.

ನವದೆಹಲಿ : ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕಾನೂನು ಬಾಹಿರವಾಗಿ ತಮ್ಮನ್ನು ಬಂಧಿಸಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ಸುಪ್ರೀಂಕೋರ್ಟ್ನಲ್ಲಿ ಹೇಳಿದ್ದಾರೆ.

ರಾಜಕೀಯ ಉದ್ದೇಶ ಹಾಗು ಲೋಕಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಎಪಿ ಪಕ್ಷವನ್ನು ನಾಶ ಮಾಡುವ ಮತ್ತು ದೆಹಲಿಯ ಚುನಾಯಿತ ಸರ್ಕಾರವನ್ನು ಪತನಗೊಳಿಸುವ ಹುನ್ನಾರ ನಡೆಸಲಾಗಿದೆ ಎಂದು ನ್ಯಾಯಾಲಯದ ಮುಂದೆ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಪೀಠದ ಮುಂದೆ ಅರವಿಂದ್ ಕೇಜ್ರಿವಾಲ್ ಅವರ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದ್ದಾರೆ. ಈ ವೇಳೆ ನ್ಯಾಯಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಸವಾಲನ್ನು ಪ್ರಶ್ನಿಸಿದ್ದು “ನೀವು ಸೆಕ್ಷನ್ 50 ಹೇಳಿಕೆಗಳನ್ನು ದಾಖಲಿಸಲು ಹೋಗದಿದ್ದರೆ, ಅವರ ಹೇಳಿಕೆಯನ್ನು ಯಾಕೆ ದಾಖಲಿಸಲಾಗಿಲ್ಲ ಎಂದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಿಎಂ ಲ್‌ಎ (ಹಣ ಲಾಂಡರಿಂಗ್ ತಡೆ ಕಾಯ್ದೆ) ಸೆಕ್ಷನ್ 50 ಸಮನ್ಸ್ ಮತ್ತು ದಾಖಲೆಗಳು, ಪುರಾವೆಗಳು ಮತ್ತು ಇತರ ವಸ್ತುಗಳನ್ನು ಸಲ್ಲಿಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಧಿಕಾರ ಹೊಂದಿದ್ದರೂ, ಹಾಗಿದ್ದರೂ ಸೆಕ್ಷನ್ 50 ರ ಅಡಿ ಯಾಕೆ ಹೇಳಿಕೆ ದಾಖಲಿಸಿಕೊಳ್ಳಲಿಲ್ಲ ಎಂದಿದ್ದಾರೆ.

ಈ ವೇಳೆ ವಕೀಲ ಅಭಿಷೇಕ್ ಮನು ಸಿಂಘ್ವಿ, “ಕೇವಲ ಅನುಮಾನವಲ್ಲ”, ಅಪರಾಧದ ಸಾಕ್ಷ÷್ಯದ ಮೇಲೆ ಒಬ್ಬರನ್ನು ಬಂಧಿಸಬಹುದು “ಇದು ಸೆಕ್ಷನ್ 45 ಪಿಎಂಎಲ್‌ಎ (ಹಣ ಲಾಂಡರಿಂಗ್ ವಿರುದ್ಧದ ಕಾನೂನು) ನಲ್ಲಿನ ಮಿತಿಯಾಗಿದೆ” ತನಿಖಾ ಸಂಸ್ಥೆ, ದೆಹಲಿ ಮುಖ್ಯಮಂತ್ರಿ ಅವರ ಹೇಳಿಕೆಯನ್ನು ಮರುಸಂಗ್ರಹಿಸಿಲ್ಲ ಎನ್ನುವುದನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ.

“ಹಣ ಲೇವಾದೇವಿ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ ೫೦ ರ ಅಡಿಯಲ್ಲಿ ಅವರ ಹೇಳಿಕೆಗಳನ್ನು ದಾಖಲಿಸಲಾಗಿಲ್ಲ ಎಂದು ಹೇಳುವ ಮೂಲಕ ನೀವೇ ವಿರೋಧಿಸುತ್ತಿಲ್ಲವೇ, ಸೆಕ್ಷನ್ 50 ರ ಅಡಿಯಲ್ಲಿ ಹೇಳಿಕೆಗಳನ್ನು ದಾಖಲಿಸಲು ನೀವು ಸಮನ್ಸ್ ಹಾಜರಾಗುವುದಿಲ್ಲ ಮತ್ತು ನಂತರ ಅದನ್ನು ದಾಖಲಿಸಲಾಗಿಲ್ಲ ಎಂದು ನೀವು ಹೇಳುತ್ತೀರಿ.” ಪದೇ ಪದೇ ಸಮನ್ಸ್ ನೀಡಿದರೂ ಕೇಜ್ರಿವಾಲ್ ಹಾಜರಾಗದಿದ್ದರೆ ತನಿಖಾಧಿಕಾರಿ ಏನು ಮಾಡಬಹುದು ಎಂದು ನ್ಯಾಯಪೀಠ ಪ್ರಶ್ನಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular