ನವದೆಹಲಿ : ಸಾಗರದ ನಡುವೆ ರಷ್ಯಾದಿಂದ ಚೀನಾದತ್ತ ಸಾಗುತ್ತಿದ್ದ ಒಟ್ಟು 7 ತೈಲ ತುಂಬಿದ ಹಡಗುಗಳನ್ನು ಕೆಲವೇ ದಿನಗಳ ಅಂತರದಲ್ಲಿ ತುರ್ತಾಗಿ ಭಾರತದತ್ತ ತಿರುಗಿಸಿಕೊಳ್ಳುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಇದರ ಪರಿಣಾಮವಾಗಿ ಚೀನಾ ಕಡೆ ಸಾಗುತ್ತಿದ್ದ ರಷ್ಯಾದಅಕ್ವಾ ಟೈಟನ್' ಹಡಗು ಮಾರ್ಚ್ ೨೧ಕ್ಕೆ ನವ ಮಂಗಳೂರು ಬAದರನ್ನು ತಲುಪಲಿದೆ. ಅಂತೆಯೇ ಮತ್ತೊಂದು ಪ್ರತ್ಯೇಕ ಬೆಳವಣಿಗೆಯಲ್ಲಿ ಖಜಕ್ ಸಿಪಿಸಿ ತೈಲ ತುಂಬಿಕೊAಡ ಸುಯೇಜ್‌ಮ್ಯಾಕ್ಸ್ ಜೌಜೌ ಎನ್’ ಎಂಬ ಹಡಗು ಸಹ ಭಾರತದ ಪಶ್ಚಿಮ ತೀರ ಸಿಕ್ಕಾ ಬಂದರಿಗೆ ಮಾರ್ಚ್ 25 ರಂದು ಬಂದು ಸೇರುವ ನಿರೀಕ್ಷೆಯಿದೆ. ಶಿಪ್ ಟ್ರಾಕಿಂಗ್ ಡಾಟಾದ ಅಂಕಿಅAಶಗಳ ಪ್ರಕಾರ ಈ ಎರಡೂ ಹಡಗುಗಳು ಭಾರತದತ್ತ ಬರುತ್ತಿರುವುದು ಖಚಿತಪಟ್ಟಿದೆ.
ಹರ್ಮುಜ್ ಜಲಸಂಧಿ ಬಂದ್ ಆಗಿರುವ ಹಿನ್ನೆಲೆಯಲ್ಲಿ, ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳಲು ಅಮೆರಿಕ ಭಾರತಕ್ಕೆ ಒಂದು ತಿಂಗಳು ಸುಂಕ ನಿರ್ಬಂಧಗಳ ವಿನಾಯ್ತಿ ನೀಡಿದ ಬೆನ್ನಲ್ಲೇ ಭಾರತ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದೆ. ಕೂಡಲೇ ರಷ್ಯಾದೊಂದಿಗೆ ನಡೆಸಿದ ತುರ್ತು ರಾಜತಾಂತ್ರಿಕ ಮಾತುಕತೆ ಫಲವಾಗಿ ಚೀನಾದತ್ತ ಹೋಗುತ್ತಿದ್ದ ತೈಲ ಹಡಗು ಗಳು ಭಾರತದತ್ತ ತಿರುಗುವಂತಾಗಿದೆ. ಮಾರ್ಚ್ ಮಧ್ಯಾವಧಿಯಲ್ಲಿ ಆಗ್ನೆಯ ಏಷ್ಯಾ ಸಮುದ್ರ ದಲ್ಲಿದ್ದ ಹಡಗುಗಳು ಏಕಾಏಕಿ ಭಾರತದತ್ತ ತಿರುಗಿದವು. ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತ್ರ ತಮ್ಮ ಸುದ್ದಿಗೋಷ್ಟಿಯಲ್ಲಿ ಈ ಬೆಳವಣಿಗೆ ಕುರಿತು ಖಚಿತಪಡಿಸಿರಲಿಲ್ಲ
ಸಮುದ್ರದಲ್ಲೇ ಭಾರತದತ್ತ ತಿರುಗಿದ 7 ಹಡಗುಗಳಲ್ಲಿನ ಕಚ್ಚಾ ತೈಲದ ಪ್ರಮಾಣ ಎಷ್ಟೆಂದು ನಿಖರವಾಗಿ ತಿಳಿದುಬಂದಿಲ್ಲ. ಸರ್ಕಾರ ಈ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ, ಮಾ.21ಕ್ಕೆ ಮಂಗಳೂರಿಗೆ ಬರುವ ಟೈಟನ್ ಹಡಗು ಸುಮಾರು 95 ಲಕ್ಷ ಬ್ಯಾರಲ್ ಕಚ್ಚಾ ತೈಲ ಹೊಂದಿದೆ. ಮಾರುಕಟ್ಟೆ ಅಂಕಿ ಅಂಶಗಳ ಪ್ರಕಾರ, ಅಮೆರಿಕದಿಂದ ಸುಂಕ ವಿನಾಯ್ತಿ ಸಿಕ್ಕ ಕೂಡಲೇ ಭಾರತ ಮುನ್ನುಗ್ಗಿ ಒಂದೇ ವಾರದಲ್ಲಿ ಸುಮಾರು 3 ಕೋಟಿ ಬ್ಯಾರಲ್ ತೈಲ ಬಾಚಿಕೊಂಡಿದೆ. ಆ ಭಾರತ ಎದುರಿಸುತ್ತಿರುವ ತೈಲ ಅಭಾವ ಕಡಿಮೆ ಆಗಲಿದೆ.


