Sunday, March 15, 2026
Flats for sale
Homeದೇಶನವದೆಹಲಿ : ಕೋಲ್ಡ್ರೀಫ್ ಸಿರಪ್ ಸೇವಿಸಿ 22ಕ್ಕೂ ಹೆಚ್ಚು ಮಕ್ಕಳು ಸಾವು ಪ್ರಕರಣ : ದೇಶದಲ್ಲಿ...

ನವದೆಹಲಿ : ಕೋಲ್ಡ್ರೀಫ್ ಸಿರಪ್ ಸೇವಿಸಿ 22ಕ್ಕೂ ಹೆಚ್ಚು ಮಕ್ಕಳು ಸಾವು ಪ್ರಕರಣ : ದೇಶದಲ್ಲಿ ಎಲ್ಲ ಔಷಧಗಳ ಗುಣಮಟ್ಟ ಪರೀಕ್ಷೆಗೆ ಹೊಸ ಕಾಯ್ದೆ..!

ನವದೆಹಲಿ : ಕೋಲ್ಡ್ರೀಫ್ ಸಿರಪ್ ಸೇವಿಸಿ ಮಧ್ಯಪ್ರದೇಶ, ರಾಜಸ್ಥಾನ ಸೇರಿ ದೇಶದ ವಿವಿಧೆಡೆ 22ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಬೆನ್ನಲ್ಲೇ, ವೈದ್ಯಕೀಯ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಕೂಗುಗಳು ಏಳುತ್ತಿವೆ.

ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಔಷಧ ಗುಣಮಟ್ಟ ಪರೀಕ್ಷೆ, ಮಾರುಕಟ್ಟೆ ಕಣ್ಗಾವಲು, ವೈದ್ಯಕೀಯ ಸಾಧನಗಳು ಹಾಗೂ ಸೌಂದರ್ಯವರ್ಧಕಗಳ ನಿಯಂತ್ರಣಕ್ಕಾಗಿ ಕಾನೂನು ಚೌಕಟ್ಟನ್ನು ಇನ್ನುಷ್ಟು ಬಲಪಡಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಬರಲಿರುವ ಚಳಿಗಾಲದ ಅಧಿವೇಶನದಲ್ಲಿ ಹೊಸ ಮಸೂದೆಯೊಂದನ್ನು ಮಂಡಿಸಲು ಸಿದ್ಧತೆ ಮಾಡಿಕೊಂಡಿದೆ.

ಸರ್ಕಾರ ಪರಿಚಯಿಸಲು ಉದ್ದೇಶಿಸಿರುವ ‘ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ ೨೦೨೫’ರ ಕರಡನ್ನು ಮಂಗಳವಾರ ನಡೆದ ಕೇಂದ್ರ ಆರೋಗ್ಯ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಭಾರತದ ಔಷಧ ನಿಯಂತ್ರಕ ಜನರಲ್ (ಡಿಸಿಜಿಐ) ಡಾ.ರಾಜೀವ್ ರಘುವಂಶಿ ಮಂಡಿಸಿದ್ದಾರೆ ಎಂದು ತಿಳಿದುಬಂದಿದೆ.

ಒಂದೊಮ್ಮೆ ಈ ಮಸೂದೆ ಸಂಸತ್ತಿನಲ್ಲಿ ಅನುಮೋದನೆ ಪಡೆದರೆ, ಭಾರತದಲ್ಲಿ ತಯಾರಾದ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳನ್ನು ದೇಶದಲ್ಲೇ ಬಳಕೆಗೆ ತರುವುದಕ್ಕೂ ಮುನ್ನ ಹಾಗೂ ಹೊರ ದೇಶಗಳಿಗೆ ರಫ್ತು ಮಾಡುವುದಕ್ಕೂ ಮುನ್ನ ತೀವ್ರ ತಪಾಸಣೆಗೆ ಒಳಪಡಲಿವೆ. ಈ ವೇಳೆ ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ ಹಾಗೂ ಈ ಪ್ರಕ್ರಿಯೆ ನಡೆಸಲು ಅಧಿಕಾರಿಗಳಿಗೆ ಈ ಹೊಸ ಕಾನೂನು ಶಾನಬದ್ಧ ಅಧಿಕಾರವನ್ನು ನೀಡಲಿದೆ.

ಪರಿಶೀಲನೆಗಿನ್ನು ಫ್ರೀ ಹ್ಯಾಂಡ್ ಹೊಸ ಕಾನೂನಿನಡಿಯಲ್ಲಿ ನಕಲಿ ಅಥವಾ ಕಳಪೆ ಗುಣಮಟ್ಟದ ಔಷಧಗಳ ವಿರುದ್ಧ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲು ಸೆಂಟ್ರಲ್ ಡ್ರಗ್ಸ್ ಸ್ಟಾö್ಯಂಡರ್ಡ್ ಕಂಟ್ರೋಲ್ ಆಗ್ರನೈಸೇಷನ್‌ಗೆ (ಸಿಡಿಎಸ್‌ಒ) ಅಧಿಕಾರ ಸಿಗಲಿದೆ. ಇಂಥ ಶಾಸನಬದ್ಧ ಅಧಿಕಾರ ಇಲ್ಲಿಯವರೆಗೂ ಸಿಡಿಎಸ್‌ಒಗೆ ಇಲ್ಲ. ಒಂದೊಮ್ಮೆ ಹೊಸ ಮಸೂದೆ ಜಾರಿಯಾದರೆ ಕಾನೂನಾತ್ಮಕವಾಗಿಯೇ ಸಿಡಿಎಸ್ ಭಾರತದಲ್ಲಿ ಉತ್ಪಾದನೆಯಾಗುವ ಎಲ್ಲ ಔಷಧಗಳ ಗುಣಮಟ್ಟವನ್ನು ಪರೀಕ್ಷಿಸಬಹುದು ಹಾಗೂmಪರಶೀಲಿಸಬಹುದು.

ಹೊಸ ಕಾನೂನು 1950ರ ಔಷಧಗಳು & ಸೌಂದರ್ಯವರ್ಧಕ ಕಾಯ್ದೆಯನ್ನು ಬದಲಾಯಿಸಲಿದೆ.ಅAತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಹೊಸ ಕಾನೂನು ರಚನೆಯಾಗಲಿದೆ.ಅಧಿಕಾರಿಗಳಿಗೆ ಪರಿಶೀಲನೆ ಮಾಡಲು ಶಾಸನಬದ್ಧ ಅಧಿಕಾರ ನೀಡಲಿದ್ದು ಉತ್ಪಾದನೆಯಿಂದ ಮಾರುಕಟ್ಟೆ ವಿತರಣೆವರೆಗೂ ಪ್ರತಿಯೊಂದು ಹಂತದ
ಮೇಲೂ ನಿಗಾ ಇಡಲಾಗಲಿದೆ .ಉತ್ಪಾದನೆಯಲ್ಲಿ ಔಷಧಗಳ ಗುಣಮಟ್ಟದ ಪರಿಶೀಲನೆ ಹಾಗೂ ಪಾರದರ್ಶಕತೆ ಇರುವಂತೆ ನೋಡಿಕೊಳ್ಳುವುದು ಈ ಕಾನೂನಿನಲ್ಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular