ನವದೆಹಲಿ : ಸತತ 3 ನೇ ದಿನವಾದ ಬುಧವಾರವೂ ರಾಷ್ಟ್ರ ರಾಜಧಾನಿಯಲ್ಲಿ 26೦೦ ರೂ. ಏರಿಕೆಯೊಂದಿಗೆ ಚಿನ್ನದ ಧಾರಣೆ 10 ಗ್ರಾಂಗೆ 1,26,600 ರೂ. ತಲುಪಿದೆ. ಇದು ಐತಿಹಾಸಿಕ ದಾಖಲೆ. ಅಮೆರಿಕ ಸರ್ಕಾರ ಸ್ಥಗಿತ, ಡಾಲರ್ ಮೌಲ್ಯ ಕುಸಿದಿರುವುದು, ಜಾಗತಿಕ ಅಸ್ಥಿರತೆ ಮತ್ತಿತರ ಜಾಗತಿಕ ಪ್ರಬಲ ವಾಣಿಜ್ಯ ಕಾರಣಗಳಿಂದಾಗಿ ಬAಗಾರದ ಬೆಲೆ ವಿಪರೀತ ಏರಿದೆ. ಕಳೆದ 3 ದಿನಗಳಿಂದೀಚೆಗೆ ಬಂಗಾರದ ಬೆಲೆ 6000 ರೂ. ಹೆಚ್ಚಳವಾದಂತಾಗಿದೆ.
ಅಖಿಲ ಭಾರತ ಸರಾಫ್ ಸಂಘದ ಪ್ರಕಾರ ಶೇ.99.9ರಷ್ಟು ಶುದ್ಧ ಚಿನ್ನವು 10 ಗ್ರಾಂಗೆ ಸೋಮವಾರ 2,7೦೦ ರೂ.ಗೆ ಏರಿಕೆಯಾಗುವ ಮೂಲಕ 1.24 ಲಕ್ಷ ರೂ. ಗೆ ತಲುಪಿತ್ತಾದರೂ, ಮಂಗಳವಾರ ಅದು 7೦೦ ರೂ.ಗೆ ಕುಸಿದಿತ್ತು. ಆದರೆ ಬೆಳ್ಳಿ ಕಳೆದ ಸತತವಾಗಿ ಏರಿಕೆ ಕಂಡು, ಒಂದು ಕೆಜಿಗೆ 5೦೦೦ ರೂ. ಹೆಚ್ಚಳ ಕಂಡಿತ್ತು. ಬುಧವಾರ ಯಥಾಸ್ಥಿತಿ ಕಾಯ್ದುಕೊಂಡಿದೆ. ಮಂಗಳವಾರದ ಧಾರಣೆ 1,57,೦೦೦ ರೂ. ಮುಂದುವರಿಯಿತು.