ನವದೆಹಲಿ ; ಈ ಅವಧಿಯ ಕೊನೆ ಸಚಿವ ಸಂಪುಟದಲ್ಲಿ ಕಬ್ಬು ಬೆಳೆಗಾರರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ನೀಡಿದೆ .ಕಬ್ಬಿನ ಖರೀದಿ ದರ ಹೆಚ್ಚಳಕ್ಕೆ ಕೇಂದ್ರ ಸಂಪುಟ ಸಭೆ ಅನುಮತಿ ನೀಡಿದೆ. ಪ್ರತಿ ಕ್ವಿಂಟಲ್ಗೆ 315 ರೂಪಾಯಿದಿಂದ 340 ರೂ.ಗೆ ಏರಿಕೆ ಮಾಡಿದೆ. ಇದರೊಂದಿಗೆ ಕಬ್ಬಿನ ಎಫ್ಆರ್ಪಿ ಪ್ರತಿ ಕ್ವಿಂಟಲ್ಗೆ 25 ರೂ. ಹೆಚ್ಚಿಸಿದಂತಾಗಿದೆ.
ಕಬ್ಬಿನ ದರ ಪ್ರತಿ ಕ್ವಿಂಟಾಲ್ಗೆ 340 ರೂಪಾಯಿಗೆ ಹೆಚ್ಚಳ ಮಾಡಲಾಗಿದ್ದು ಇದು ಕಬ್ಬಿನ ಐತಿಹಾಸಿಕ ಬೆಲೆಯಾಗಿದ್ದು, ಇದು ಪ್ರಸಕ್ತ 2023-24 ರ ಹಂಗಾಮಿನ ಕಬ್ಬಿನ ಎಫ್ಆರ್ಪಿಗಿಂತ ಸುಮಾರು ಶೇ.8ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.


