ನವದೆಹಲಿ : ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ಕಾನ್ಪುರ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಗ್ರೀನ್ ಪಾರ್ಕ್ ಅಂಗಳ ಸಕಲ ರೀತಿಯಲ್ಲೂ ಸಿದ್ದವಾಗಿದೆ. ಈ ಪಂದ್ಯದಲ್ಲಿ ಅಭಿಮಾನಿಗಳ ಕಣ್ಣು ಹಲವು ಆಟಗಾರರ ಮೇಲೆ ನೆಟ್ಟಿದೆ. ಎರಡನೇ ಟೆಸ್ಟ್‌ನಲ್ಲಿ ಅಬ್ಬರದ ಆಟವನ್ನು ನಡೆಸಿ ದಾಖಲೆಯ ಪುಟಕ್ಕೆ ಸೇರಲು ಸ್ಟಾರ್‌ಗಳು ಸಹ ಕಾತುರರಾಗಿದ್ದಾರೆ.
\ಟೀಮ್ ಇಂಡಿಯಾ ಅಂಗಳಕ್ಕೆ ಇಳಿದಾಗ ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಹಾಗೂ ಆರ್.ಅಶ್ವಿನ್ ಅವರ ಮೇಲೆ ಇರುತ್ತದೆ. ಇವರಿಬ್ಬರೂ ಈಗ ಸ್ಟಾರ್ ಆಟಗಾರರು. ವಿರಾಟ್, ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ದಾಖಲೆ ನಿರ್ಮಿಸಿದ್ದಾರೆ. ಹಾಗಿದ್ದರೆ ಇಬ್ಬರೂ ಸ್ಟಾರ್‌ಗಳ ನಡುವಿನ ಸಂಭಾವನೆಯಲ್ಲಿ ಎಷ್ಟು ವ್ಯತ್ಯಾಸ ಎಷ್ಟು ಎಂಬ ಚರ್ಚೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವರದಿ ಇಲ್ಲಿದೆ.
ವಿರಾಟ್, ಅಶ್ವಿನ್ ಸ್ಯಾಲರಿ ಎಷ್ಟು? ಬಿಸಿಸಿಐ ಕೇಂದ್ರಿಯ ಗುತ್ತಿಗೆಯ ಅಡಿಯಲ್ಲಿ ಆಟಗಾರರನ್ನು ಕ್ಯಾಟಗಿರಿಯಲ್ಲಿ ವಿಂಗಡಿಸಿದೆ. ಈ ಕ್ಯಾಟಗಿರಿಯಲ್ಲಿ ವಿರಾಟ್ ಕೊಹ್ಲಿ ಗ್ರೇಡ್ ಎ ಪ್ಲಸ್ ಕ್ಯಾಟಗಿರಿಯಲ್ಲಿ ಬರುತ್ತಾರೆ. ಈ ಕ್ಯಾಟಗಿರಿಯಲ್ಲಿ ಇವರನ್ನು ಬಿಟ್ಟು ಇನ್ನು ಮೂವರು ಆಟಗಾರು ಇದ್ದಾರೆ. ಗ್ರೇಡ್ ಎ ಪ್ಲಸ್ ನಲ್ಲಿ ಆಡುವ ಆಟಗಾರನಿಗೆ 7 ಕೋಟಿ ರೂ. ಸಂಬಳ ನೀಡಲಾಗುತ್ತದೆ. ಇನ್ನು ರವಿಚಂದ್ರನ್ ಅಶ್ವಿನ್ ಅವರನ್ನು ಹೊರತು ಪಡಿಸಿ ಗ್ರೇಡ್ ಎ ಕೆಟಗಿರಿಯಲ್ಲಿ ಐದು ಆಟಗಾರರು ಇದ್ದಾರೆ. ಈ ಗ್ರೇಡ್‌ನಲ್ಲಿರುವ ಆಟಗಾರರಿಗೆ ಐದು ಕೋಟಿ ರೂ. ಸಂಬಳ ನೀಡಲಾಗುತ್ತದೆ. ಅಂದರೆ ಈ ವಿಭಾಗದಲ್ಲಿ ವಿರಾಟ್ ಕೊಹ್ಲಿಗೆ ಹಾಗೂ ಅಶ್ವಿನ್‌ಗೆ ಎರಡು ಕೋಟಿ ರೂಪಾಯಿ ಸಂಬಳದ ವ್ಯತ್ಯಾಸ ಕಾಣುತ್ತದೆ. ಒಂದು ಟೆಸ್ಟ್ ಆಡಿದರೆ ಎಷ್ಟು ಸಂಭಾವನೆ ಸಿಗುತ್ತದೆ? ವಿರಾಟ್ ಕೊಹ್ಲಿ ಹಾಗೂ ಅಶ್ವಿನ್ ಬಿಸಿಸಿಐ ಕೇಂದ್ರ ಒಪ್ಪಂದದ ಅಡಿಯಲ್ಲಿ ಬೇರೆ ಬೇರೆ ಗ್ರೇಡ್‌ಗಳನ್ನು ಹೊಂದಿದ್ದಾರೆ. ಆದರೆ ಇಬ್ಬರಿಗೂ ಒಂದು ಟೆಸ್ಟ್ ಪಂದ್ಯವನ್ನು ಆಡಿದಾಗ ಸಮಾನವಾದ ಸಂಬಳ ಸಿಗುತ್ತದೆ. ಈ ಇಬ್ಬರೂ ಸ್ಟಾರ್‌ಗಳಿಗೆ ಒಂದು ಟೆಸ್ಟ್ ಪಂದ್ಯ ಆಡಿದಾಗ 15 ಲಕ್ಷ ರೂ. ಲಭಿಸುತ್ತದೆ.
ವಿರಾಟ್ ಕೊಹ್ಲಿ ಈಗಾಗಲೇ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಆಡುವಾಗ ಅಶ್ವಿನ್ ಹಾಗೂ ವಿರಾಟ್ ಸಂಭಾವನೆ ಚುಟುಕು ಕ್ರಿಕೆಟ್‌ನಲ್ಲಿ ಸಮನಾಗಿ ಇರುತ್ತಿತ್ತು. ಇಬ್ಬರೂ ಒಂದು ಪಂದ್ಯಕ್ಕೆ ಮೂರು ಲಕ್ಷ ಸಂಭಾವನೆ ಪಡೆಯುತ್ತಿದ್ದರು. ಈ ಸ್ಟಾರ್ ಆಟಗಾರರು ಏಕದಿನ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರೆ, ಇಬ್ಬರಿಗೂ ಒಂದು ಪಂದ್ಯಕ್ಕೆ 6 ಲಕ್ಷ ರೂ. ಸಂಭಾವನೆ ಸಿಗುತ್ತದೆ. ವಿರಾಟ್ ಕೊಹ್ಲಿ ಹಾಗೂ ಆರ್ ಅಶ್ವಿನ್ ಇಬ್ಬರೂ ಕಾನ್ಪುರ್ ಟೆಸ್ಟ್‌ನಲ್ಲಿ ಆಡುವುದು ಖಚಿತ. ಇನ್ನು ಇಬ್ಬರೂ ಈ ಟೆಸ್ಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ದಾಖಲೆಯ ಪುಟಕ್ಕೆ ಎಂಟ್ರಿ ನೀಡುವ ಕನಸು ಕಾಣುತ್ತಿದೆ. ಇಬ್ಬರೂ ಆಟಗಾರರು ಕಾನ್ಪುರ್‌ನಲ್ಲಿ ಆರ್ಭಟಿಸಿ ಭಾರತದ ಜಯದಲ್ಲಿ ಮಿಂಚಲಿ ಎಂಬುದೇ ಅಭಿಮಾನಿಗಳ ಅಶಯ.