Saturday, January 17, 2026
Flats for sale
Homeವಿದೇಶನವದೆಹಲಿ : ಎರಡು ದಿನಗಳ ಕುವೈತ್ ಪ್ರವಾಸದಲ್ಲಿ ಪ್ರಧಾನಿ ಮೋದಿ : ಹಲವು ಮಹತ್ವದ ಚರ್ಚೆ..!

ನವದೆಹಲಿ : ಎರಡು ದಿನಗಳ ಕುವೈತ್ ಪ್ರವಾಸದಲ್ಲಿ ಪ್ರಧಾನಿ ಮೋದಿ : ಹಲವು ಮಹತ್ವದ ಚರ್ಚೆ..!

ನವದೆಹಲಿ : ಎರಡು ದಿನಗಳ ಕುವೈತ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೊರೆ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾಹ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

ದೊರೆಯ ಆಹ್ವಾನದ ಮೇರೆಗೆ ಭಾರತದ ಪ್ರಧಾನಿಯೊಬ್ಬರು 43 ವರ್ಷದ ನಂತರ ಕುವೈತ್‌ಗೆ ಭೇಟಿ ನೀಡಿದ್ದು ದೊರೆಯ ಭೇಟಿಯ ಸಮಯದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಇದೇ ವೇಳೆ ಪ್ರಾದೇಶಿಕ,ಜಾಗತಿಕ ವಿಷಯಗಳ ಕುರಿತು ಉಭಯ ನಾಯಕರು ಸುದೀರ್ಘ ಸಮಾಲೋಚನೆ ನಡೆಸಿದ್ದು ಭಾರತ-ಕುವೈತ್ ನಡುವೆ ಬಾಂಧವ್ಯ ಬಲವರ್ಧನೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು 26ನೇ ಅರೇಬಿಯನ್ ಗಲ್ಫ್ ಕಪ್‌ನ ಉದ್ಘಾಟನಾ ಸಮಾರಂಭದಲ್ಲಿ ‘ಗೌರವದ ಅತಿಥಿ’ಯಾಗಿ ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭ ಕುವೈತ್ ನಗರದ ಜಾಬರ್ ಅಲ್-ಅಹ್ಮದ್ಅಂ ತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು.

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕುವೈತ್ ದೊರೆ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾಹ್ ಅವರೊಂದಿಗೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ.

ಭವಿಷ್ಯದಲ್ಲಿ ಭಾರತ-ಕುವೈತ್ ನಡುವೆ ಬಾಂಧವ್ಯ ಮತ್ತಷ್ಟು ವೃದ್ಧಿ ಆಗಲು ಸಹಕಾರಿಯಾಗಲಿದೆ ಎಂದಿದ್ದಾರೆ. ಕುವೈತ್ ಹೊಸ ಕುವೈತ್ ನಿರ್ಮಾಣ ಮಾಡಲು ಮುಂದಾಗಿದ್ದು ಅದರ ಕೆಲಸದಲ್ಲಿ ಭಾರತದ ತಂತ್ರಜ್ಞಾನ,.
ಮಾನವ ಸಂಪನ್ಮೂಲ, ಆವಿಷ್ಕಾರ ಸಹಯೋಗಕ್ಕೆ ಬರಲಿದೆ. ಇದೇ ವೇಳೆ ಭಾರತವೂ 2047ರ ವೇಳೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಕನಸು ಸಾಕಾರ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಲ್ಲಿನ ದೊರೆ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್‌ಜಾಬರ್ ಅಲ್ ಸಬಾಹ್ ಅವರ ಭೇಟಿಯ ಕುರಿತು ಮಾಹಿತಿ ಹಂಚಿಕೊAಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಉಭಯ
ನಾಯಕರು ಪರಸ್ಪರ ಅನೌಪಚಾರಿಕ ಸಂವಾದದಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ನೀಡಿತ್ತು ಎಂದು ತಿಳಿಸಿದೆ.

ಕುವೈತ್ ದ್ವೈವಾರ್ಷಿಕ ಅರೇಬಿಯನ್ ಗಲ್ಫ್ ಕಪ್ ಅನ್ನು ಆಯೋಜಿಸುತ್ತದೆ, ಇದರಲ್ಲಿ ಜಿಸಿಸಿ ರಾಷ್ಟçಗಳು, ಇರಾಕ್ ಮತ್ತು ಯೆಮೆನ್ ಸೇರಿದಂತೆ ಎಂಟು ದೇಶಗಳು ಸೇರಿವೆ. ಪಂದ್ಯಾವಳಿಯ ಆರAಭಿಕ ಪಂದ್ಯದಲ್ಲಿ ಆತಿಥೇಯ ನಗರ ಓಮನ್ ವಿರುದ್ಧ ಆಡಲಿದೆ. ಈ ಫುಟ್ಬಾಲ್ ಪಂದ್ಯಾವಳಿ ಈ ಪ್ರದೇಶದ ಪ್ರಮುಖ ಕ್ರೀಡಾಕೂಟಗಳಲ್ಲಿಒಂದಾಗಿದೆ. ಭಾಗವಹಿಸುವ ಇತರ ದೇಶಗಳ ಪೈಕಿ ಕುವೈತ್ ಅತಿ ಹೆಚ್ಚು ಬಾರಿ ಗೆದ್ದಿದೆ.ಪ್ರಧಾನಿ ನರೇಂದ್ರ ಮೋದಿ ಅವರು ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ರಾಷ್ಟ್ರಗಳಿಗೆ
ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

ನಗರದ ಶೇಖ್ ಸಾದ್ ಅಲ್‌ಅಬ್ದುಲ್ಲಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ‘ಹಲಾ ಮೋದಿ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳು ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿಜಾಗತಿಕ ಬೆಳವಣಿಗೆಗೆ ಭಾರತೀಯ ಸಮುದಾಯದ ಕೊಡುಗೆಯನ್ನು ಶ್ಲಾಘಿಸಿದ ಅವರು, ಭಾರತವು “ವಿಶ್ವದ ಕೌಶಲ್ಯ ರಾಜಧಾನಿ” ಆಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು

RELATED ARTICLES

LEAVE A REPLY

Please enter your comment!
Please enter your name here

Most Popular