ನವದೆಹಲಿ : ಯಾರೇ ಮಹಿಳೆಯು ಮೊದಲ ಮದುವೆಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆಯದಿದ್ದರೂ ಎರಡನೇ ವಿವಾಹ ಮಾಡಿಕೊಂಡ ಗಂಡನಿಂದ ಸಿಆರ್‌ಪಿಸಿ ಕಾಯ್ದೆಯ 125 ರಡಿಯಲ್ಲಿ ಜೀವನಾಂಶ ಪಡೆಯಲು ಅರ್ಹರಾಗಿದ್ದಾಳೆ ಎಂದು ಸುಪ್ರೀಂಕೋರ್ಟ್ ಮತೀರ್ಪು ನೀಡಿದೆ.ಕಾನೂನು ಪ್ರಕಾರ ವಿಚ್ಛೇದನ ಪಡೆದಿಲ್ಲದಿದ್ದರೂ ಜೀವನಾಂಶ ಪಡೆಯಬಹುದಾಗಿದೆ ಎಂದು ಹೇಳಿದೆ ಅಪರಾಧ ದಂಡ ಸಂಹಿತೆ 125 ರ ಅಡಿಯಲ್ಲಿ ಇದಕ್ಕೆ ಅವಕಾಶವಿದೆ ಎಂದು ತಿಳಿಸಿದೆ.
ವಿವಾಹ ವಿಚ್ಛೇದನ ಪಡೆಯಲು ಔಪಚಾರಿಕ ತೀರ್ಪು ಕಡ್ಡಾಯವಲ್ಲ. ಮಹಿಳೆ ಮೊದಲ ಪತಿಯಿಂದ ಬೇರ್ಪಡಲು ಒಪ್ಪಿಕೊಂಡಿದ್ದರು. ಆದರೆ ಆಕೆ ಕಾನೂನು ರೀತ್ಯಾ ವಿಚ್ಛೇದನ ಪಡೆದಿಲ್ಲ ಎಂಬ ಕಾರಣಕ್ಕೆ ಎರಡನೇ ಪತಿ ಆಕೆಗೆ ಜೀವನಾಂಶ ನಿರಾಕರಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಸತೀಶ್‌ಚಂದ್ರ ಶರ್ಮಾ ಅವರ ನ್ಯಾಯಪೀಠ ವಿವರಿಸಿದೆ. ತೆಲಂಗಾಣದ ಹೈಕೋರ್ಟ್ ಮೊದಲ ಮದುವೆಯನ್ನು ಕಾನೂನು ರೀತ್ಯಾ ವಿರ್ಸಜಿಸದ ಕಾರಣ ಸಿಆರ್‌ಪಿಸಿ ಕಾಯ್ದೆಯಡಿ ಎರಡನೇ ಪತಿ ಜೀವನಾಂಶ ನೀಡುವುದು ಅಸಾಧ್ಯ ಎಂದು ತೀರ್ಪು ನೀಡಿತ್ತು. ಇದರ ವಿರುದ್ಧ ಈ ಮಹಿಳೆ ಮೇಲ್ಮನವಿ ಸಲ್ಲಿಸಿದ್ದರು. ಮೊದಲ ಮದುವೆ ಕಾನೂನು ರೀತ್ಯಾ ಅಸ್ತಿತ್ವದಲ್ಲಿರುವಾಗಲೇ ಆಕೆ ಎರಡನೇ ಪತಿಯಿಂದ ಜೀವನಾಂಶ ಪಡೆಯಬಹುದು ಎಂದಿದೆ.