ನವದೆಹಲಿ : ಎನ್ಸಿಇಆರ್ಟಿಯ 8 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತು ಪಠ್ಯ ಪ್ರಕಟಿಸಿರುವುದರ ವಿರುದ್ಧ ಸುಪ್ರೀಂಕೋರ್ಟ್ ಭಾರೀ ಗರಂ ಆಗಿದ್ದು ಶಾಲಾ ಶಿಕ್ಷಣ ಕಾರ್ಯದರ್ಶಿ, ಶಿಕ್ಷಣ ಸಚಿವಾಲಯ ಹಾಗೂ ಎನ್ಸಿಇಆರ್ಟಿ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ಶಾಲಾ ಶಿಕ್ಷಣ ಇಲಾಖೆ ಮತ್ತು ಎನ್ಸಿಇಆರ್ಟಿ ನಿರ್ದೇಶಕ ಡಾ. ದಿನೇಶ್ ಪ್ರಸಾದ್ ಸಕ್ಲಾನಿ ಅವರಿಗೆ ನ್ಯಾಯಾಂಗ ನಿಂದನೆ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ, ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮ ಏಕೆ ಕೈಗೊಳ್ಳಬಾರದು ಎಂದು ಕೇಳಿದೆ.
ಆದೇಶ: ಪುಸ್ತಕದ ಎಲ್ಲಾ ಪ್ರತಿಗಳು, ಹಾರ್ಡ್ ಅಥವಾ ಡಿಜಿಟಲ್ ಕಾಫಿ ಆಗಿರಲಿ, ಸಾರ್ವಜನಿಕ ಸ್ಥಳದಲ್ಲಿ ಯಾರಿಗೂ ಸಿಗದಂತೆ ನೋಡಿಕೊಳ್ಳಬೇಕೆಂದು ನ್ಯಾಯಾಲಯವು ಎನ್ಸಿಇಆರ್ಟಿ ಹಾಗೂ ಕೇಂದ್ರ ಮತ್ತು ರಾಜ್ಯ ಶಿಕ್ಷಣ ಇಲಾಖೆಗಳಿಗೆ ಆದೇಶಿಸಿದೆ. ಬೇರೆ ಯಾವುದೇ ರೂಪದಲ್ಲಿ ವಿಷಯ ಹಂಚಿಕೊAಡರೂ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ಪುಸ್ತಕ ಆಧರಿಸಿ ವಿದ್ಯಾರ್ಥಿಗಳಿಗೆ ಯಾವುದೇ ಸೂಚನೆ ನೀಡುವಂತಿಲ್ಲ ಎಂದೂ ಕಟ್ಟಪ್ಪಣೆ ಮಾಡಿದೆ. ಶಾಲಾ ಆವರಣದಲ್ಲಿರುವ ಪುಸ್ತಕಗಳನ್ನು ಹಿಂಪಡೆದುಕೊAಡು ಹಾಗೂ ಡಿಜಿಟಲ್ ರೂಪದಲ್ಲಿರುವುದನ್ನು ಅಳಿಸಿ ಹಾಕಿದ ನಂತರ ನ್ಯಾಯಾಲಯಕ್ಕೆ ಅದರ ಬಗ್ಗೆ ವರದಿ ಸಲ್ಲಿಸಬೇಕೆಂದೂ ಸೂಚಿಸಿದೆ. ವರದಿ ಬಂದ ಬಳಿಕ ತಪ್ಪಿತಸ್ಥರನ್ನು ಗುರುತಿಸಲು ಸಮಿತಿ ರಚಿಸುವುದಾಗಿ ನ್ಯಾಯಪೀಠ ಹೇಳಿದೆ.
ಈ ಸುಪ್ರೀಂ ಕಿಡಿನುಡಿಡಿದ್ದು ಇದು ನ್ಯಾಯಾಂಗದ ಘನತೆಯನ್ನು ಕುಗ್ಗಿಸಲೆಂದೇ ನಡೆಸಿದ ಉದ್ದೇಶ ಪೂರ್ವಕ ಯತ್ನದಂತೆ ಕಾಣಿಸುತ್ತಿದೆ ಮುದ್ರಿತ ಹಾಗೂ ಡಿಜಿಟಲ್ ಪ್ರತಿ ಸಾರ್ವಜನಿಕವಾಗಿ ದೊರೆಯದಂತೆ ಮಾಡಿ, ಎಲ್ಲ ಪ್ರತಿಗಳನ್ನು ಜಪ್ತು ಮಾಡಿ ಎಂದು ಹೇಳಿದೆ. ಪಾಠದಲ್ಲಿ ಬಳಸಿರುವ ಪದಪ್ರಯೋಗ ಸಾಮಾನ್ಯ ತಪ್ಪಿನಂತೆ ಕಾಣುತ್ತಿಲ್ಲ ಸಮಂಜಸ ಟೀಕೆ ಬೇಡ ಅನ್ನುವುದಿಲ್ಲ, ಆದರೆ ವಿದ್ಯಾರ್ಥಿಗಳಿಗೆ ಪೂರ್ವಾಗ್ರಹ ಚಿತ್ರಣ ನೀಡುವುದು ಸರಿಯಲ್ಲ ಎಂದು ಹೇಳಿದೆ. ಪಕ್ಷಪಾತದ ಚಿತ್ರಣ ನೀಡುವುದು ಶಿಕ್ಷಣದ ಅಖಂಡತೆಗೇ ಮಾರಕವಾಗಿದೆ ಆದೇಶಪಾಲನಾ ವರದಿ ಬಂದ ಬಳಿಕ ತಪ್ಪಿತಸ್ಥರ ಗುರುತಿಸಲು ಸಮಿತಿ ರಚನೆ ಮಾಡಲು ತಿಳಿಸಿದೆ.
ಪಠ್ಯದಲ್ಲಿ ಏನಿದೆ..?
ಎನ್ಸಿಆರ್ಟಿಸಿ ಸೂಚಿಸಿದ 8 ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ‘ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ ಎಂಬ ಅಧ್ಯಾಯವು ಭ್ರಷ್ಟಾಚಾರ, ವಿಳಂಬ ಸೇರಿದಂತೆ ಹಲವು ಸವಾಲುಗಳನ್ನು ವಿವರಿಸಿದೆ. “ನ್ಯಾಯಾಂಗದಲ್ಲಿನ ಭ್ರಷ್ಟಾಚಾರ” ಎಂಬ ವಿಭಾಗವು ನ್ಯಾಯಾಧೀಶರು ನ್ಯಾಯಾಲಯದೊಳಗಿನ ನಡವಳಿಕೆ ಹೊರತಾಗಿ ನ್ಯಾಯಾಲಯದ ಹೊರಗೂ ಹೇಗೆ ವರ್ತಿಸಬೇಕೆಂಬ ನೀತಿಸಂಹಿತೆಗೆ ಬದ್ಧರಾಗಿರಬೇಕು ಎನ್ನುವುದನ್ನು ಉಲ್ಲೇಖಿಸಿದೆ. ಜೊತೆಗೆ ನ್ಯಾಯಾಂಗದ ಮೇಲೆ ಬಂದಿರುವ ಕೇಸುಗಳು, ಪದಚ್ಯುತಿ ಇತ್ಯಾದಿಗಳ ಉಲ್ಲೇಖವೂ ಇದರಲ್ಲಿದೆ.
ನಾವು ಈ ವಿಷಯದಲ್ಲಿ ಸಮಗ್ರವಾದ ತನಿಖೆ ನಡೆಸಲು ಉದ್ದೇಶಿಸಿದ್ದೇವೆ. ಇದಕ್ಕೆ ಯಾರು ಹೊಣೆಗಾರರು ಎಂಬುದನ್ನು ಕಂಡುಹಿಡಿಯಬೇಕಾಗಿದೆ.
ಇದರಲ್ಲಿ ಯಾರಿದ್ದಾರೆಂಬುದು ನಮಗೆ ಗೊತ್ತಾಗಬೇಕಾಗಿದೆ. ಅಂತಹವರ ತಲೆದAಡವಾಗಬೇಕು. ಈ ಪ್ರಕರಣವನ್ನು ಸುಮ್ಮನೇ ಮುಚ್ಚಿ ಹಾಕುವುದಿಲ್ಲ ಸಿಜೆಐ ಸೂರ್ಯಕಾಂತ್ ತಿಳಿಸಿದ್ದಾರೆ.


