ನವದೆಹಲಿ : ಉಪರಾಷ್ಟçಪತಿ ಚುನಾವಣೆ ಮಂಗಳವಾರ ನಡೆಯಲಿದ್ದು, ಅಂಕಿ ಅಂಶಗಳು ಸ್ಪಷ್ಟವಾಗಿ ಎನ್‌ಡಿಎ ಕೂಟದ ಮೇಲುಗೈ ಇರುವುದನ್ನು ತೋರಿಸುತ್ತದೆ. ಆದರೆ ಕ್ರಾಸ್‌ವೋಟಿಂಗ್ ಮೇಲೆ ಇಂಡಿಯಾಕೂಟ ಕಣ್ಣಿಟ್ಟಿದೆ. ಆದ್ಯತೆಯ ಮತಗಳನ್ನು ಹಾಕುವುದು ಹೇಗೆ ಎಂದು ಬಿಜೆಪಿ ಮತ್ತು ಪ್ರತಿಪಕ್ಷಗಳು ತರಬೇತಿಯನ್ನೂ ನೀಡಿವೆ.
ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಈ ಚುನಾವಣೆಯ ಮತದಾರರು. ಏಳು ಸ್ಥಾನಗಳು ಖಾಲಿ ಇದ್ದು, ಒಟ್ಟು 781 ಮತದಾರರಿದ್ದಾರೆ. ಈ ಪೈಕಿ ಎನ್‌ಡಿಎ ಸದಸ್ಯರು 439, ಇಂಡಿಯಾ ಕೂಟದ 324 ಸದಸ್ಯರು. ಇನ್ನು ಉಳಿದವರು ಯಾವ ಕೂಟಕ್ಕೂ ಸೇರಿಲ್ಲ.ಬಿಜೆಡಿಯ 7, ಬಿಆರ್‌ಎಸ್‌ನ 4, ಅಕಾಲಿದಳ, ಜೆಡ್‌ಪಿಎಂ ಮತ್ತು ವಿಒಟಿಟಿಪಿಯ ತಲಾ ಒಬ್ಬರು ಮತ್ತು ಮೂವರು ಸ್ವತಂತ್ರ ಸದಸ್ಯರು ಯಾರಿಗೆ ತಮ್ಮ ಮತ ಎಂದು ಸ್ಪಷ್ಟಪಡಿಸಿಲ್ಲ. ಹೀಗಾಗಿ ಎನ್‌ಡಿಎ ಅಭ್ಯರ್ಥಿ ರಾಧಾಕೃಷ್ಣನ್ ಗೆಲುವು ಬಹುತೇಕ ಖಚಿತ.
ಎಲ್ಲಿಗೂ ಸೇರದವರು ಇಂಡಿಯಾ ಬ್ಲಾಕ್‌ಗೆ ಮತ ಹಾಕಿದರೂ ಅವರು ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಕ್ರಾಸ್‌ವೋಟಿಂಗ್ ಮೇಲೆ ಇಂಡಿಯಾ ಬ್ಲಾಕ್ ಕಣ್ಣಿಟ್ಟಿದೆ. ರಹಸ್ಯ ಮತದಾನವಿರುವುದರಿಂದ ಪಕ್ಷದ ಸೂಚನೆ ಮೀರಿ, ಕ್ರಾಸ್‌ವೋಟಿಂಗ್ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇಂಡಿಯಾ ಬ್ಲಾಕ್‌ನಿಂದ ದೂರ
ಉಳಿದ ಆಪ್ ಪ್ರತಿಪಕ್ಷಗಳ ಅಭ್ಯರ್ಥಿ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಅವರಿಗೆ ಮತ ಹಾಕುವುದಾಗಿ ಘೋಷಿಸಿದೆ.
ವೈಎಸ್‌ಆರ್ ಕಾಂಗ್ರೆಸ್ ಕೂಡ ತೆಲುಗು ಮೂಲದ ರೆಡ್ಡಿಯವರಿಗೇ ಬೆಂಬಲ ವ್ಯಕ್ತಪಡಿಸಿದೆ. ಪ್ರತಿಪಕ್ಷಗಳ ಎಲ್ಲ ಸದಸ್ಯರು ಇಂಡಿಯಾ ಬ್ಲಾಕ್ ವೋಟ್ ಮಾಡಿ, ಅವರು 324 ಮತಗಳನ್ನು ಗಳಿಸಿ ಸೋತರೂ, ಸೋತ ಅಭ್ಯರ್ಥಿ ಗಳಿಸಿದ ಅತಿ ಹೆಚ್ಚು ಮತವಾಗುತ್ತದೆ. ಈ ಹಿಂದೆ 2002ರಲ್ಲಿ ಬೈರೊನ್ ಸಿಂಗ್ ಶೆಖಾವತ್ ಎದುರು ಕಾಂಗ್ರೆಸ್‌ನ ಸುಶೀಲ್ ಕುಮಾರ್ ಶಿಂದೆ ಗಳಿಸಿದ್ದ ೩೦೫ ಮತಗಳೇ ಸೋತ ಅಭ್ಯರ್ಥಿಯ ಇದುವರೆಗಿನ ದಾಖಲೆಯಾಗಿದೆ.